Megha Shetty : ಅಭಿಮಾನಿಗಳ ಆಸೆಯಂತೆ ಗುಡ್ ನ್ಯೂಸ್ ಕೊಟ್ಟ ಜೊತೆ ಜೊತೆಯಲಿ ಮೇಘಾ ಶೆಟ್ಟಿ..! ಧನವೀರ್ ಖುಷ್..!

By Infoflick Correspondent

Updated:Saturday, April 30, 2022, 20:52[IST]

Megha Shetty : ಅಭಿಮಾನಿಗಳ ಆಸೆಯಂತೆ ಗುಡ್ ನ್ಯೂಸ್ ಕೊಟ್ಟ ಜೊತೆ ಜೊತೆಯಲಿ ಮೇಘಾ ಶೆಟ್ಟಿ..! ಧನವೀರ್ ಖುಷ್..!

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ನಟಿಯರು ಅವರದೇಯಾದ ಹೊಸತನದ ಅಭಿನಯದ ಮೂಲಕ ಹೆಚ್ಚು ಬೆಳಕಿಗೆ ಬಂದಿದ್ದಾರೆ. ಅವರದೇ ಆದ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳ ಗಿಟ್ಟಿಸಿಕೊಂಡಿದ್ದಾರೆ. ಹೊಸ ಅವಕಾಶಗಳನ್ನು ಈ ಕಿರುತೆರೆಯ ಸಕತ್ ಸೀರಿಯಲ್ ಮೂಲಕವೇ ಗಿಟ್ಟಿಸಿಕೊಂಡು ನಂತರ ಬೆಳ್ಳಿತೆರೆಮೇಲೆಯ ಮಿಂಚಿ ಮರೆಯಾದ ನಟಿಯರು ತುಂಬಾ ಜನ ಇದ್ದಾರೆ. ಹಾಗೆ ಮಿಂಚುತ್ತಾ ಯಶಸ್ವಿಯಾದವರು ಇದ್ದಾರೆ. ಅದೇ ರೀತಿ ಇದೀಗ ಜೊತೆ ಜೊತೆಯಲಿ ಖ್ಯಾತಿಯ ನಟಿ ಮೇಘ ಶೆಟ್ಟಿ ಅವರು ಕೂಡ ತುಂಬಾ ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದು. ಮೇಘ ಶೆಟ್ಟಿ ಅವರು ಜೊತೆ ಜೊತೆಯಲಿ ಸೀರಿಯಲ್ ಮೂಲಕ ಹೆಚ್ಚು ಅಭಿಮಾನಿಗಳ ಬಳಗವನ್ನೇ ಗಿಟ್ಟಿಸಿಕೊಂಡರು.

ನಟ ಅನಿರುದ್ ಅವರಿಗೂ ಬ್ರೇಕ್ ತಂದುಕೊಟ್ಟ ಈ ಜೊತೆ ಜೊತೆಯಲಿ ಸೀರಿಯಲ್ ದೊಡ್ಡದಾಗಿ ಸದ್ದು ಮಾಡಿದ್ದು ಅಲ್ಲದೆ ಹೆಚ್ಚು ಜನಪ್ರಿಯಗೊಂಡಿತ್ತು. ಈ ಮೂಲಕವೇ ಇನ್ನೊಬ್ಬ ಸ್ಟಾರ್ ನಟಿ ಕನ್ನಡ ಸಿನಿಮಾರಂಗಕ್ಕೆ ಸಿಕ್ಕಿದ್ದಾರೆ. ಹೌದು ನಟಿ ಮೇಘ ಶೆಟ್ಟಿ ಅವರು ಆರಂಭದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಎಂಬ ಹೊಸ ಸಿನಿಮಾದಲ್ಲಿ ಅಭಿನಯ ಮಾಡಲು ಅವಕಾಶ ಗಿಟ್ಟಿಸಿಕೊಂಡಿದ್ದರು. ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿರುವ ನಟಿ ಮೇಘ ಶೆಟ್ಟಿ ತ್ರಿಬಲ್ ರೈಡಿಂಗ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಹಾಗೆಯೇ ಇನ್ನೊಂದು ಕಡೆ ದಿಲ್ಪಸಂದ್ ಸಿನಿಮಾದಲ್ಲಿಯೂ ಸಹ ನಟ ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ನಟಿ ಮೇಘ ಶೆಟ್ಟಿ ಅಭಿನಯಿಸುತ್ತಿದ್ದಾರೆ.   

ಇದೀಗ ಅಂತಹದೆ ಮತ್ತೊಂದು ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ಹೊತ್ತು ತಂದಿದ್ದಾರೆ ನಟಿ ಮೇಘ ಶೆಟ್ಟಿ. ಹೌದು ನಟಿ ಮೇಘ ಶೆಟ್ಟಿ ಅವರು ಕನ್ನಡದ ಯುವ ನಾಯಕ ನಟ ಧನ್ವೀರ್ ಜೊತೆ ಕೈಮಾ ಎನ್ನುವ ನೈಜ ಘಟನೆಯಾಧಾರಿತ ಚಿತ್ರದಲ್ಲಿ ಅಭಿನಯ ಮಾಡುತ್ತಿರುವ ಖುಷಿ ವಿಚಾರವನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿದ್ದಾರೆ. ಹೌದು ಮೇಘ ಶೆಟ್ಟಿ ಒಂದು ಸೀರಿಯಲ್  ಅನ್ನು ನಿರ್ಮಾಣ ಮಾಡುತ್ತಿದ್ದು ಇನ್ನೂ ಎತ್ತರಕ್ಕೆ ಮೇಘ ಶೆಟ್ಟಿ ಬೆಳೆಯಲಿ ಎಂದು ನೀವು ಕೂಡ ಕಾಮೆಂಟ್ ಮಾಡಿ ಹರಸಿ, ಧನ್ಯವಾದಗಳು....