Meghana Raj : ಮೇಘನಾ ರಾಜ್ ಇದ್ದಕ್ಕಿದ್ದಂತೆ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋದಿಂದ ಹೊರಕ್ಕೆ..! ಕಾರಣ ಬೇರೆಯೇ ಇದೆ ನೋಡಿ

By Infoflick Correspondent

Updated:Wednesday, May 4, 2022, 23:37[IST]

Meghana Raj : ಮೇಘನಾ ರಾಜ್ ಇದ್ದಕ್ಕಿದ್ದಂತೆ ಡ್ಯಾನ್ಸಿಂಗ್ ಚಾಂಪಿಯನ್ಸ್  ಶೋದಿಂದ ಹೊರಕ್ಕೆ..! ಕಾರಣ ಬೇರೆಯೇ ಇದೆ ನೋಡಿ

ಕನ್ನಡದ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಮನರಂಜನೆ ನೀಡುವ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ವಾರಂತ್ಯ ಬಂತು ಅಂದರೆ ಕಿರುತೆರೆ ಪ್ರೇಮಿಗಳಿಗೆ ಎಲ್ಲಿಲ್ಲದ ಸಂತಸ ಎಂದು ಹೇಳಬಹುದು. ಸಕತ್ ಕಿಕ್ ನೀಡುವ ಶೋಗಳು ನಡೆಯುತ್ತಿವೆ. ಹೌದು ಮಕ್ಕಳಿಗೆ ವೇದಿಕೆ ಮಾಡಿಕೊಟ್ಟಿರುವ ಜೀ ಕನ್ನಡ ಡ್ರಾಮಾ ಜೂನಿಯರ್ಸ್ ಹಾಗೂ ಇನ್ನೊಂದು ಕಡೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೆಚ್ಚು ಟಿಆರ್ಪಿ ಸಹ ಈಗೀಗ ಪಡೆಯುತ್ತಿವೆ ಎಂದು ತಿಳಿದುಬಂದಿದೆ. ಅತ್ತ ಕಲರ್ಸ್ ಕನ್ನಡದಲ್ಲಿ ಕೂಡ ಸಾಕಷ್ಟು ಹೊಸ ಹೊಸ ವಿಭಿನ್ನ ಶೋಗಳು ಆರಂಭವಾಗಿದ್ದು, ಕಳೆದ ಕೆಲವು ತಿಂಗಳ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ನೇತೃತ್ವದಲ್ಲಿ ಬಂದಂತಹ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಆರಂಭದಲ್ಲಿ ಒಳ್ಳೆಯ ಟಿಆರ್ಪಿಯ ಪಡೆದಿತ್ತು. 

ಆನಂತರ ಹೆಚ್ಚು ಟಿಆರ್ಪಿ ಸಿಗದ ಕಾರ್ಯಕ್ರಮ ಗೋಲ್ಡನ್ ಗ್ಯಾಂಗ್ ಸಹ ಅತಿಬೇಗನೆ ಮುಕ್ತಾಯವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನೊಂದು ಕಡೆ ಸಕ್ಕತ್ ಡ್ಯಾನ್ಸಿಂಗ್ ಚಾಂಪಿಯನ್ಸ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು. ಈ ಮುಂಚೆ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ನೋಡಿ ಎಲ್ಲರೂ ಇಷ್ಟ ಪಟ್ಟಿದ್ದರು. ಅದು ಮುಗಿದ ತಕ್ಷಣ ಇತ್ತೀಚಿಗೆ ಮಯೂರಿ ಮತ್ತು ಮೇಘನರಾಜ್ ಜೊತೆಗೆ ವಿಜಯ್ ರಾಘವೇಂದ್ರ ಅವರು ಜಡ್ಜಸ್ ಗಳಾಗಿದ್ದು ಬಹಳ ದಿನಗಳ ಬಳಿಕ ಮತ್ತೆ ಅಕುಲ್ ಅವರು ನಿರೂಪಕರಾಗಿ ಮಿಂಚಲು ಡ್ಯಾನ್ಸಿಂಗ್ ಚಾಂಪಿಯನ್ ಮೂಲಕ ಬಂದಿದ್ದರು. ಹೌದು ನಟಿ ಮೇಘನರಾಜ್ ಅವರು ಚಿರು ಅಗಲಿದ ಒಂದು ವರ್ಷದ ಬಳಿಕ ಕಿರುತೆರೆಗೆ ಮತ್ತೆ ಬಣ್ಣ ಹಚ್ಚುವ ಮೂಲಕ ಎಂಟ್ರಿ ನೀಡಿದ್ದು ಅಭಿಮಾನಿಗಳು ಖುಷಿಯಾಗಿದ್ದರು.  

ಕೇವಲ ಒಂದು ವಾರಕ್ಕೆಂದು ಬಂದಿದ್ದ ಮೇಘನರಾಜ್ ಅವರು ನಂತರದ ಎಪಿಸೋಡ್ ಗಳಲ್ಲಿಯೂ ಅವರೇ ಕಾಣಿಸಿಕೊಂಡು ಅಭಿಮಾನಿಗಳ ಆಸೆಯಂತೆ ಡ್ಯಾನ್ಸಿಂಗ್ ಚಾಂಪಿಯನ್ಸ್ ನಲ್ಲಿ ಉಳಿದಿದ್ದರು. ಇದೀಗ ಡ್ಯಾನ್ಸಿಂಗ್ ಚಾಂಪಿಯನ್ಸ್ ಟಿಆರ್ಪಿ ಕಡಿಮೆ ಆದ ಕಾರಣಕ್ಕಾಗಿ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಗುತ್ತಿದೆಯಂತೆ. ಹೌದು ಈ ಮೂಲಕ ನಟಿ ಮೇಘನಾ ರಾಜ್ ಅವರು ಮತ್ತೆ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಿಂದ ಹೊರಗುಳಿದಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಕಾರ್ಯಕ್ರಮ ಕೂಡ ಮುಕ್ತಾಯ ಮಾಡಲಾಗುತ್ತಿದೆ ಎಂದು ಕೇಳಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ಕಮೆಂಟ್ ಮಾಡಿ ತಿಳಿಸಿ. ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮ ಮುಗಿಸುವ ವಿಷಯವಾಗಿ ನಿಮ್ಮ ಅಭಿಪ್ರಾಯವೇನು ಎಂದು ಹೇಳಿ ದನ್ಯವಾದಗಳು...