ದರ್ಶನ್ ಮೇಲೆ ಮಾಡಿದ ಆರೋಪಕ್ಕೆ ಇಂದ್ರಜಿತ್'ಗೆ ಆವಾಜ್ ಹಾಕಿದ ಮೇಘನಾ ..! ವಿಡಿಯೋ ವೈರಲ್

Updated: Wednesday, July 21, 2021, 20:39 [IST]

    

ಹೌದು ಸ್ನೇಹಿತರೆ ನಟ ದರ್ಶನ್ ಅವರ ಮೇಲೆ ಕೆಲ ಆರೋಪಗಳು ಈಗಾಗಲೇ ಕೇಳಿಬಂದಿದ್ದು, ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಅವರು ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ಸಿಬ್ಬಂದಿಗೆ ಬೈದು ಹೊಡೆದಿದ್ದಾರೆ ಎಂದು ಆರೋಪಿಸಿ ದೂರು ನೀಡಿ ಮಾಧ್ಯಮದ ಮುಂದೆ ಕೆಲವೊಂದಿಷ್ಟು ಹೇಳಿಕೆಗಳನ್ನು ಕೊಟ್ಟಿದ್ದರು. ದರ್ಶನ್ ಅವರು ಸಹ ಮಾಧ್ಯಮದ ಜೊತೆ ಮಾತನಾಡಿ ನಾನು ಹೋಟೆಲ್ ಸಿಬ್ಬಂದಿಗೆ ಹೊಡೆದಿಲ್ಲ 25 ಕೋಟಿ ಶೂರಿಟಿ ವಿಚಾರವಾಗಿ ಅರುಣಾಕುಮಾರಿ ಅವರ ಪ್ರಕರಣ ತನಿಖೆ ಆಗುತ್ತಿದೆ, ಅದರ ನಡುವೆ ಈ ವಿಷಯ ಕೂಡ ಎದ್ದಿದೆ, ಪೊಲೀಸರಿಗೂ ಕೆಲಸ ಕೊಡಬೇಕು ಈ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದ್ದರು.  

ಇದಾದ ಬಳಿಕ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಅವರು ಕ್ಷಮೆಯಾಚಿಸಬೇಕು, ಒಬ್ಬ ಮೇರು ನಟನಿಗೆ ಈ ರೀತಿ ವರ್ತನೆ ಸರಿಯಲ್ಲ, ನಿಜ ಜೀವನವೇ ಬೇರೆ ಸಿನಿಮಾ ಜೀವನವೇ ಬೇರೆ, ಹಾಗೆ ಹೀಗೆ ಎಂದು ಆರೋಪಗಳನ್ನ ದರ್ಶನ್ ಮೇಲೆ ಮಾಡಿದರು. ಇದರ ವಿಚಾರವಾಗಿ ಇದೀಗ ಮೇಘನಾ ರಾಜ್ ಅವರು ಸಹ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ಮೇಲೆ ಕೇಳಿಬಂದ ಕೆಲವು ಆರೋಪಗಳನ್ನ ತಳ್ಳಿಹಾಕಿದ್ದಾರೆಂದು ಹೇಳಲಾಗುತ್ತಿದೆ. ಹಾಗೆ ಕಳೆದ ವರ್ಷ ಚಿರಂಜೀವಿ ಸರ್ಜಾ ಸಾವನ್ನಪ್ಪಿದ ಸಮಯದಲ್ಲಿ ಇದೇ ಇಂದ್ರಜಿತ್ ಲಂಕೇಶ್ ಅವರು ಡ್ರಗ್ಸ್ ವಿಚಾರವಾಗಿ ಚಿರು ಮೇಲೆಯೂ ಸಹ ಮಾತಾಡಿ ಡ್ರಗ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಹೇಳಿಕೆಗಳನ್ನು ಕೊಟ್ಟು ತದನಂತರ ಕ್ಷಮೆಯನ್ನು ಕೂಡ ಕೇಳಿದ್ದರು.

ಇದೀಗ ದರ್ಶನ್ ಅವರ ಮೇಲೆ ಸಹ ಬೇರೆ ರೀತಿಯ ಆರೋಪಗಳನ್ನು ಮಾಡಿ, ನಟಿ ಮೇಘನಾ ರಾಜ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗೆ ಈ ಬೆನ್ನಲ್ಲೇ ನಟಿ ಹಾಗೂ ಚಿರಂಜೀವಿ ಪತ್ನಿ ಮೇಘನರಾಜ್ ಅವರು ಇಂದ್ರಜಿತ್ ಅವರಿಗೆ ಈ ಕುರಿತು ಮಾಡಿದ್ದಾದರೂ ಏನು ಗೊತ್ತಾ.? ಈ ವಿಡಿಯೋ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿ ಧನ್ಯವಾದ... (  ವಿಡಿಯೋ ಕೃಪೆ  ns tv kannada )