Meghana Raj : ಚಿರು ಹೋದಾಗ ಸಿಂಪತಿಗೆ ದುಡ್ಡು ಮಾಡೋಕೆ ಈ ಸಿನಿಮಾ ರಿಲೀಸ್ ಮಾಡಲಿಲ್ಲ..! ಮೇಘನಾ ಭಾವುಕ ಮಾತು ಕೇಳಿ

By Infoflick Correspondent

Updated:Sunday, May 8, 2022, 09:10[IST]

Meghana Raj : ಚಿರು ಹೋದಾಗ ಸಿಂಪತಿಗೆ ದುಡ್ಡು ಮಾಡೋಕೆ ಈ ಸಿನಿಮಾ ರಿಲೀಸ್ ಮಾಡಲಿಲ್ಲ..! ಮೇಘನಾ ಭಾವುಕ ಮಾತು ಕೇಳಿ

ರಾಜಮಾರ್ತಾಂಡ ಚಲನಚಿತ್ರವು ರೊಮ್ಯಾಂಟಿಕ್ ಆಕ್ಷನ್ ಎಂಟರ್‌ಟೈನರ್ ಆಗಿದ್ದು ಕೆ ರಾಮನಾರಾಯಣ್ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. ಹಾಗೆ ದಿವ್ಯಾ ಎನ್, ಹಾಗೆ ಸಾಯಿಸೂರ್ಯ ಎನ್, ಪ್ರಣವ್ ಗೌಡ ಎಸ್, ಪುನೀತ್ ಗೌಡ ಎಂ ಜಂಟಿಯಾಗಿ ನಿರ್ಮಿಸಿದ್ದಾರೆ, ಮತ್ತು ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಟ ಚಿರಂಜೀವಿ ಸರ್ಜಾ, ದೀಪ್ತಿ ಸತಿ, ತ್ರಿವೇಣಿ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವಿನೀತ್ ಕುಮಾರ್, ದೇವರಾಜ್ ಸೇರಿದಂತೆ ಇನ್ನೂ ಹಲವರು ರಾಜಮಾರ್ತಾಂಡ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು ಚಿರಂಜೀವಿ ಅವರ ಅಕಾಲಿಕ ಮರಣದಿಂದ ಅವರ ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿತ್ತು. ಕನ್ನಡ ಚಿತ್ರರಂಗಕ್ಕೆ ಬರಸಿಡಿಲೆ ಬಡಿದಂತಾಗಿತ್ತು. ಹೌದು ನಟ ಚಿರಂಜೀವಿ ಸರ್ಜಾ ಅವರ ಕುಟುಂಬಕ್ಕೆ ನೋವು ಆಗಿದ್ದು, ಅವರ ಪತ್ನಿ ಮೇಘನಾ ರಾಜ್ ಅವರು ಕೂಡ ಕಣ್ಣೀರಿನಲ್ಲಿ ಜೀವನ ಕಳೆಯುವಂತೆ ಶಾಕ್ ವಿಚಾರವೊಂದು ಬರಸಿಡಿಲು ಅಂದು ಬಡಿದಂತೆ ಬಂದಿತ್ತು ಎನ್ನಬಹುದು. ಮೇಘನ ರಾಜ್ ಅವರು ಚಿರು ಅಗಲಿಕೆಯ ಬೆನ್ನಲ್ಲೇ ಅವರ ಜೀವನದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದರು. ಆನಂತರ ಜೂನಿಯರ್ ಚಿರಂಜೀವಿ ಸರ್ಜಾ ಆಗಮನವಾಗುತ್ತಿದ್ದಂತೆ ಚಿರು ಅಗಲಿಕೆಯ ಕೊಂಚ ನೋವು ಕಡಿಮೆ ಮಾಡಿಕೊಂಡು ಮತ್ತೆ ಜೀವನ ಮಾಡಲು ಮುಂದಾದರು.  

ಇದೀಗ ಸಂದರ್ಶನದಲ್ಲಿ ಕಾಣಿಸಿಕೊಂಡಿರುವ ನಟಿ ಮೇಘನ ರಾಜ್, ನಟ ಚಿರಂಜೀವಿ ಸರ್ಜಾ ಅವರ ರಾಜಮಾರ್ತಾಂಡ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಇದೆ ತಿಂಗಳು 27 ನೆ ತಾರೀಕು ಬಿಡುಗಡೆಯಾಗುತ್ತಿದ್ದು, ಕೆಲ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೌದು ನಾವು ಚಿರು ಅಗಲಿದ ವೇಳೆಯೇ ಸಿನೆಮಾ ಬಿಡುಗಡೆ ಮಾಡಿದ್ದರೆ, ಅದು ಸಿಂಪತಿಗಾಗಿ ದುಡ್ಡು ಮಾಡುವುದಕ್ಕೆ  ಈ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಿದ್ದರು. ಅದ್ಯಾವುದನ್ನೂ ಈ ರಾಜ ಮಾರ್ತಾಂಡ ಸಿನಿಮಾ ತಂಡ ಮಾಡಿಲ್ಲ. ಎಲ್ಲರಿಗೂ ನೋವು ಕಡಿಮೆಯಾಗಲಿ ಎಂದು ಎರಡು ವರ್ಷದ ಬಳಿಕ ಈಗ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರತಂಡಕ್ಕೆ ನನ್ನ ಕಡೆಯಿಂದ ಹಾಗೂ ಸರ್ಜಾ ಕುಟುಂಬದ ಕಡೆಯಿಂದ ಪ್ರೋತ್ಸಾಹ ಇದ್ದೇ ಇರುತ್ತದೆ. ಎಲ್ಲರೂ ಕೂಡ ಸಿನಿಮಾವನ್ನು ಥಿಯೇಟರಿಗೆ ಬಂದು ನೋಡಿ. ಚಿರು ಮೇಲೆ ಪ್ರೀತಿ ಇದ್ದವರು ಬಂದು ನೋಡಿಯೇ ನೋಡುತ್ತಾರೆ ಎಂದಿದ್ದಾರೆ ಮೇಘನಾ ಅವರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ...