Meghana Raj : ಮೇಘನಾ ರಾಜ್ ಬರ್ತಡೇ ಸೆಲೆಬ್ರೇಷನ್ ವಿಡೀಯೋ...! ಯಾರೆಲ್ಲ ಬಂದಿದ್ದಾರೆ ನೀವೇ ನೋಡಿ..!

By Infoflick Correspondent

Updated:Friday, May 6, 2022, 17:07[IST]

Meghana Raj :  ಮೇಘನಾ ರಾಜ್ ಬರ್ತಡೇ ಸೆಲೆಬ್ರೇಷನ್ ವಿಡೀಯೋ...! ಯಾರೆಲ್ಲ ಬಂದಿದ್ದಾರೆ ನೀವೇ ನೋಡಿ..!

ಮೇಘನಾ ಸುಂದರ್ ರಾಜ್ ಅವರು 3 ಮೇ 1990 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಒಬ್ಬ ಭಾರತೀಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೌದು ನಟಿ ಮೇಘನಾ ಪ್ರಾಥಮಿಕವಾಗಿ ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿ ಸೈ ಏನಿಸಿಕೊಂಡರು. ಹಾಗೇನೇ ಅತ್ತ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ಅವರು 2009 ರ ತೆಲುಗು ಚಲನಚಿತ್ರ ಬಂದು ಅಪ್ಪಾರಾವ್ ಆರ್ ಎಂ ಪಿ ಸಿನಿಮಾದಲ್ಲಿ ತಮ್ಮ ನಟನೆ ಪ್ರಾರಂಭಿಸಿದರು.  2018 ರ ಕನ್ನಡ ಚಿತ್ರವಾದ ಇರುವುಲ್ಲಾವಾ ಬಿಟ್ಟು ಅವರ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಹ ಲಭಿಸಿದೆ. ಮೇಘನಾ ರಾಜ್ ಕನ್ನಡ ನಟ ಚಿರಂಜೀವಿ ಸರ್ಜಾ ಅವರ ಪತ್ನಿ..

ಹೌದು ಮೇಘನರಾಜ್ ಅವರು ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಪತ್ನಿ. ಹಾಗೆ ಖ್ಯಾತ ಹಿರಿಯ ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಶಿ ಅವರ ಪುತ್ರಿ. ನಟಿ ಮೇಘನ ರಾಜ್ ಅವರು ಇತ್ತೀಚಿಗೆ ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಬಹಳ ದಿನಗಳ ಬಳಿಕ ಅವರ ಅಭಿಮಾನಿಗಳ ಆಸೆಯಂತೆ ಚಿರು ಅಗಲಿದ ಬಳಿಕ ಮತ್ತೆ ಬಣ್ಣ ಹಚ್ಚಿದ್ದರು. ಹೌದು ನೋವಿನ ನಡುವೆಯೂ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣದಿಂದ ತುಂಬಾನೇ ಕುಗ್ಗಿ ಹೋಗಿದ್ದ ಮೇಘನಾ ರಾಜ್ ಅವರು ಆನಂತರ ಮಗನ ರೂಪದಲ್ಲಿ ಬಂದ ಜೂ. ಚಿರು ಮುಖ ನೋಡಿ ನೋವ ಕಡಿಮೆ ಮಾಡಿಕೊಂಡಿದ್ದಾರೆ.  

ಚಿರು ಅಗಲಿದ ಬಳಿಕ ಹೆಚ್ಚು ಮಗನ ಜೊತೆ ಕಾಣಿಸಿಕೊಳ್ಳುತ್ತಿರುವ ಮೇಘನಾ ರಾಜ್ ಅವರು ಇತ್ತೀಚಿಗೆ ಅವರ 32ನೇ ವರ್ಷದ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಮೇಘನಾ ರಾಜ್ ಅವರ ಹುಟ್ಟುಹಬ್ಬಕ್ಕೆ ಚಿರಂಜೀವಿ ಸರ್ಜಾ ಅವರ ಆಪ್ತ ಸ್ನೇಹಿತರು ಆಗಮಿಸಿದ್ದರು. ಹೌದು ಪನ್ನಗಾಭರಣ, ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಇನ್ನು ಕೆಲವರು ಉಪಸ್ಥಿತರಿದ್ದರು. ಮೇಘನ ರಾಜ್ ಅವರ 32 ನೇ ವರ್ಷದ ಈ ಕ್ಯೂಟ್ ಹುಟ್ಟುಹಬ್ಬ ಆಚರಣೆ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ನೀವು ಕೂಡ ಬಂದು ಬಾರಿ ಈ ವಿಡೀಯೋ ನೋಡಿ. ಮೇಘನಾ ರಾಜ್ ಅವರಿಗೆ ಶುಭಕೋರಿ ಮತ್ತು ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದ...(video credit : ma star kannada tv )