ವೈರಲ್ ಆದ ಮೇಘನಾ- ಚಿರು ಮದವೆ ಆಮಂತ್ರಣ ಪತ್ರಿಕೆ;  ಹೇಗಿತ್ತು ? ಇಲ್ಲಿದೆ ನೋಡಿ

By Infoflick Correspondent

Updated:Tuesday, March 22, 2022, 21:00[IST]

ವೈರಲ್ ಆದ ಮೇಘನಾ- ಚಿರು ಮದವೆ ಆಮಂತ್ರಣ ಪತ್ರಿಕೆ;  ಹೇಗಿತ್ತು ? ಇಲ್ಲಿದೆ ನೋಡಿ

ಚಂದನವನದ ಚಂದದ ಜೋಡಿ ಎಂದು ಖ್ಯಾತ ಪಡೆದಿದ್ದ ಚಿರು ಮೇಘನಾ ಹಲವು ವರ್ಷ ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ವಿವಾಹವಾಗಿದ್ದರು. ಇವರಿಬ್ಬರ ಸುಖ ಸಂಸಾರ ನೋಡುವದೇ ಸೊಗಸು! ಅಷ್ಟು ಪ್ರೀತಿಯಿಂದ ಚಿರು ಮೇಘನಾ ಅವರನ್ನು ನೋಡಿಕೊಂಡಿದ್ದರು. ಚಿರು ಎಂದರೇ ನನಗೆ ಸೆಲ್ಬ್ರೆಶನ್, ಚಿರುಒಡನೆ ಕಳೆದ ಪ್ರತಿ ಕ್ಷಣ ನನಗೆ ಹಬ್ಬ. ‌ಅಷ್ಟು ವಿಶೇಷವಾಗಿ ಅವರು ನನ್ನ ನೋಡಿಕೊಂಡಿದ್ದಾರೆ ಎಂದು ಹಲವಾರು ಸಂದರ್ಶನದಲ್ಲಿ ಮೇಘನಾ ಹೇಳಿದ್ದಾರೆ. ಸದಾ ಕ್ರಿಯೇಟಿವ್ ಆಗಿದ್ದ ಚಿರು ಅವರ ಮದುವೆ ಆಮಂತ್ರಣ ಪತ್ರ ಹೇಗಿತ್ತು ? ಇಲ್ಲಿದೆ ನೋಡಿ

ಅಕ್ಟೋಬರ್ 22 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮೇ 2 2018 ರಂದು ಕ್ರೈಸ್ತ ಹಾಗೂ ಹಿಂದೂ ಧರ್ಮ ಎರಡಕ್ಕೂ ಸಂಬಂಧಿಸಿದ ರೀತಿ ಮದುವೆ ಮಾಡಿಕೊಂಡರು. ಮೇ 2 ರಂದು ಬೆಳ್ಳಿಗ್ಗೆ 10-30ಕ್ಕೆ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಅದ್ಧೂರಿ ಮದುವೆ ಸಮಾರಂಭ ಜರುಗಿತು. 

ಅವರ ಮದುವೆಯ ಆಮಂತ್ರಣ ಪತ್ರಿಕೆಯ ಫೋಟೋ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಹಿಂದೂ ಮತ್ತು ಕ್ರಿಶ್ಚಿಯನ್ ಎಂಬ ಎರಡು ಧರ್ಮಕ್ಕೆ ಸೇರಿದವರಾದ ಮೇಘನಾ ಮತ್ತು ಚಿರು ಮದುವೆಯ ವಿಶೇಷ ಆಮಂತ್ರಣ ಪತ್ರ ಹೇಗಿತ್ತು?  ಕನ್ನಡ ಇಂಗ್ಲೀಷ ಅಲ್ಲಿ ಆಮಂತ್ರಣ ಪತ್ರಿಕೆ ಮುದ್ರಿತವಾಗಿದ್ದು, ಪಕ್ಕದಲ್ಲಿ ಡಿಸೈನ್ ಮಾಡಿದ C ಮತ್ತು M ಎಂದು ಬರೆದ ಪ್ರೀತಿ ಜೋಡಿಯ ಹೆಸರು ಒಟ್ಟಿಗೆ ಸೆರುವಂತ ಚಿಹ್ನೆ ಮತ್ತು ಇವರಿಬ್ಬರ ಜೋಡಿಯ ಮುದ್ದಾದ ಫೋಟೊ ಆಮಂತ್ರಣ ಪತ್ರಿಕೆಯಲ್ಲಿದೆ. ಪೋಟೊ ಇಲ್ಲಿದೆ ನೋಡಿ ಕಣ್ಣತುಂಬಿಕೊಳ್ಳಿ.

ವೈರಲ್ ಆದ ಮೇಘನಾ- ಚಿರು ಮದವೆ ಆಮಂತ್ರಣ ಪತ್ರಿಕೆ;  ಹೇಗಿತ್ತು ? ಇಲ್ಲಿದೆ ನೋಡಿವೈರಲ್ ಆದ ಮೇಘನಾ- ಚಿರು ಮದವೆ ಆಮಂತ್ರಣ ಪತ್ರಿಕೆ;  ಹೇಗಿತ್ತು ? ಇಲ್ಲಿದೆ ನೋಡಿ