Meghana Raj : ನಟನೆ ಜೊತೆ ಚಿರು ಆಸೆಯಂತೆ ಇನ್ನೊಂದು ಸಿಹಿ ಸುದ್ದಿ..ಕೊಟ್ಟ ಮೇಘನಾ : ಏನದು ನೋಡಿ ?

By Infoflick Correspondent

Updated:Friday, July 22, 2022, 18:30[IST]

Meghana Raj :  ನಟನೆ ಜೊತೆ ಚಿರು ಆಸೆಯಂತೆ ಇನ್ನೊಂದು ಸಿಹಿ ಸುದ್ದಿ..ಕೊಟ್ಟ  ಮೇಘನಾ :  ಏನದು ನೋಡಿ ?

ಸ್ಯಾಂಡಲ್ವುಡ್ ನಲ್ಲಿ ನಟಿ ಮೇಘನಾ ರಾಜ್ (Meghana Raj )ಅವರು ಅವರದೇ ಆದ ಅಭಿನಯದಿಂದ ಈಗಾಗಲೇ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದಾರೆ. ನಟ ಚಿರಂಜೀವಿ ಸರ್ಜಾ ಅವರ ಪತ್ನಿ. ಇಬ್ಬರು ಪ್ರೀತಿ ಮಾಡಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾದರು. ಆನಂತರದ ದಿನಗಳಲ್ಲಿ ಇದ್ದಕ್ಕಿದ್ದಂತೆ ಎಲ್ಲರಿಗೂ ನೋವು ತಂದ ವಿಷಯ ಅಂದ್ರೆ ಚಿರು ಅಗಲಿಕೆ. ಹೌದು ದೇವರು ತುಂಬಾನೇ ಕ್ರೂರಿ ಎಂದು ಹೇಳಬಹುದು. ಇಡೀ ಸರ್ಜಾ ಕುಟುಂಬಕ್ಕೆ ಮಾತ್ರ ಅಲ್ಲದೆ ಕನ್ನಡಿಗರಿಗೂ ಸಹ ಚಿರುವನ್ನು ಕರೆದುಕೊಳ್ಳುವ ಮೂಲಕ ನೋವು ಕೊಟ್ಟಬಿಟ್ಟ.. ಜೀವನ ಅಂದ್ರೆ ಹಾಗೆ ಅಲ್ವಾ ಏನು ಮಾಡಲಿಕ್ಕೆ ಆಗುವುದಿಲ್ಲ. ನೋವ ನುಂಗಿ ಜೀವನವನ್ನು ಮುಂದಕ್ಕೆ ಸಾಗಿಸಲೇಬೇಕು. ಇದೀಗ ನೋವಿನಲ್ಲಿ ಮಗನ ಲಾಲನೆ ಪಾಲನೆ ಮಾಡುತ್ತಿರುವ ಮೇಘನಾ ರಾಜ್ ಅವರು ಕನ್ನಡ ಕಿರುತೆರೆಯಲ್ಲೂ ಸಹ ಬಹಳ ದಿನಗಳಾದ ಮೇಲೆ ಸಕ್ರಿಯ ಆಗಿದ್ದು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. 

ಅವರ ನೋವನ್ನು ಕೊಂಚ ಕಡಿಮೆ ಮಾಡಿಕೊಂಡಿದ್ದಾರೆ ಎನ್ನಬಹುದು. ಕಳೆದ ವರ್ಷ ಹುಟ್ಟು ಹಬ್ಬದ ದಿನದಂದು ಮೇಘನಾ ರಾಜ್ ಅವರು ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಾಗಿ ಸುಳಿವು ನೀಡಿದ್ದರು. ಅದರಂತೆ ಅವರ ಗೆಳೆಯರಾದ ಪನ್ನಗಭರಣ ಹಾಗೂ ವಾಸುಕಿ, ನಿರ್ದೇಶಕ ವಿಶಾಲ್ ಅವರೊಟ್ಟಿಗಿರುವ ಒಂದು ಫೋಟೋವನ್ನ ಶೇರ್ ಮಾಡಿಕೊಂಡು ಇಷ್ಟರಲ್ಲಿಯೇ ಸಿಹಿ ಸುದ್ದಿ ಕೊಡುತ್ತೇವೆ ಎಂದಿದ್ದರು. ವಿಶಾಲ್ ನಿರ್ದೇಶನದ ಸಿನಿಮಾದಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿ ಮೇಘನಾ ಅವರು ಬರಲಿದ್ದಾರೆ. ಇದು ಮಹಿಳಾ ಆಧಾರಿತ ಸಿನಿಮಾವಾಗಿರಲಿದೆಯಂತೆ. ಇದಕ್ಕೆ ಮೊದಲಿಗೆ ಪನ್ನಗಬರಣ ಮಾತ್ರವೆ ಬಂಡವಾಳ ಹೂಡುತ್ತಿದ್ದಾರೆ ಎಂದು ತಿಳಿದು ಬಂದಿತ್ತು. ಜೊತೆಗೆ ವಾಸುಕಿ ಅವರು ಮ್ಯೂಸಿಕ್ ನೀಡಲಿದ್ದಾರೆ ಎಂದು ಕೇಳಿಬಂದಿತ್ತು.

ಆದ್ರೆ ಈಗ ಬಂದಿರುವ ಮಾಹಿತಿ ಪ್ರಕಾರ ಮೇಘನಾ ರಾಜ್ ಅವರು ಕೂಡ ಇದೇ ಸಿನಿಮಾಗೆ ನಿರ್ಮಾಪಕಿ ಆಗಿದ್ದಾರಂತೆ. ನಿರ್ಮಾಣಕ್ಕೂ ಕೈ ಹಾಕಿದ ನಟಿ ಮೇಘನಾ ರಾಜ್ ಅವರಿಗೆ ಅಭಿಮಾನಿಗಳು ಶುಭ ಕೋರಿತ್ತಿದ್ದಾರೆ. ಹಾಗೆ ಕಾಂತ ಕನ್ನಲ್ಲಿ ಅವರ ನಿರ್ದೇಶನದಲ್ಲಿ ಬರುತ್ತಿರುವ ಸಿನಿಮಾ ಶೂಟಿಂಗ್ ಈಗಾಗಲೇ ಭರದಿಂದ ಸಾಗಿದ್ದು ಇದ್ರಲ್ಲಿ ನಟಿ ಮೇಘನಾ ರಾಜ್ ಅವರೆ ಅಭಿನಯಿಸಲಿದ್ದಾರೆ. ಹೌದು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ತಪ್ಪದೆ ಮಾಹಿತಿಯ ಶೇರ್ ಮಾಡಿ ಧನ್ಯವಾದಗಳು...