ನಾನು ಇದೊಂದೇ ಕಾರಣಕ್ಕೆ ದೇವರನ್ನು ಕ್ಷಮಿಸುತ್ತೇನೆ ಎಂದು ನಟಿ ಮೇಘನಾ ರಾಜ್ ಹೇಳಲು ಇಲ್ಲಿದೆ ಕಾರಣ

By Infoflick Correspondent

Updated:Tuesday, May 3, 2022, 18:52[IST]

ನಾನು ಇದೊಂದೇ ಕಾರಣಕ್ಕೆ ದೇವರನ್ನು ಕ್ಷಮಿಸುತ್ತೇನೆ ಎಂದು ನಟಿ ಮೇಘನಾ ರಾಜ್ ಹೇಳಲು ಇಲ್ಲಿದೆ ಕಾರಣ

ಮೇಘನಾ ಚಿರು ಜೊಡಿ ಎಂದರೆ ಚಂದನವನದ ಚಂದದ ಜೊಡಿ. ಚಿರು ಎಂದರೆ ಎಲ್ಲರಿಗೂ ಆಪ್ತ. ಆ ಆಪ್ತ ಜೀವ ಅಗಲಿದಾಗ ಮೇಘನಾ ಗರ್ಭವತಿ ಹಾಗಾಗಿ ನೋವಿನಲ್ಲೂ ಮೇಘನಾ ನಕ್ಕರೂ ತನ್ನ ಮಗುವಿಗಾಗಿ.  ಅಪಾರವಾಗಿ ಪ್ರೀತಿಸುಚ ಜೀವ ಇಲ್ಲಾ ಎಂಬ ನೋವು ಒಂದು ಕಡೆ. ನಮ್ಮಿಬ್ಬರ ಪ್ರೀತಿಯ ಪ್ರತೀಕವಾದ ಜೀವ ಹೊರಬಂದ ಸಂತಸ ಒಂದೆಡೆ. ಈ ನೋವು- ಖುಷಿ ಮಿಶ್ರಣದಲ್ಲಿ ಮೇಘನಾ ಜೀವನ ಮಾಡುತ್ತಿದ್ದಾರೆ‌.   

ಕಲರ್ಸ್‌ ಕನ್ನಡ  ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್‌ನಲ್ಲಿ  ಡ್ಯಾನ್ಸರ್ ಮಯೂರಿ, ನಟ ವಿಜಯ್ ರಾಘವೇಂದ್ರ ಜೊತೆ ಮೇಘನಾ ಕೂಡ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. 

ಪನ್ನಗಾಭರಣ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ಕಳೆದ ವರ್ಷ ಪತಿ ಹುಟ್ಟುಹಬ್ಬದ ದಿನ ತಮ್ಮ ಸಿನಿಮಾ ಅನೌನ್ಸ್ ಮಾಡಿದ್ದರು. 

ಮೇಘನಾ ರಾಜ್‌ರನ್ನು ಇಡೀ ಕರ್ನಾಟಕದ ಜನತೆ ಮನೆ ಮಗಳಂತೆ ಪ್ರೀತಿಸುತ್ತಾರೆ. ಮೇಘನಾ ಪ್ರೀತಿಸಿ ಮದುವೆ ಆದ ಚಿರಂಜೀವಿ ಸರ್ಜಾ  ಅವರು ಇಹಲೋಕ ತ್ಯಜಿಸಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಈ ನೋವನ್ನು ಮೇಘನಾಗೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಜ್ಯೂ. ಚಿರುಗಾಗಿ ಮೇಘನಾ ನಗುನಗುತ್ತಾ ಇರಲು ಪ್ರಯತ್ನಿಸಿಸುತ್ತಿಸದ್ದಾರೆ. 

ಚಿರಂಜೀವಿ ಸರ್ಜಾ ಹಾಗೂ ಮೇಘನಾ ನಡುವೆ ಸುಮಾರು ಆರು ವರ್ಷಗಳ ವಯಸ್ಸಿನ ಅಂತರ ಇತ್ತು. ಮೇಘನಾ ಜನಿಸಿದ್ದು 1990ರ ಮೇ 3ರಂದು. ಚಿರಂಜೀವಿ ಹುಟ್ಟಿದ್ದು 1984ರ ಅಕ್ಟೋಬರ್ 17ರಂದು. ಆದರೂ ಮೇಘನಾ ರಾಜ್ ಹಾಗೂ ಚಿರು ಅವರದ್ದು ಪ್ರೇಮ ವಿವಾಹ. ಆರಂಭದಲ್ಲಿ ಗೆಳೆಯರಾಗಿದ್ದ ಇವರು ನಂತರ ಪ್ರೇಮಿಗಳಾದರು. 2018ರ ಏಪ್ರಿಲ್ 29 ಹಾಗೂ ಮೇ 2ರಂದು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು.ನಗು ನಗುತ್ತಾ ಜೀವನ ನಡೆಸುತ್ತಿರುವ ಜೊಡಿಯ ಮೇಲೆ ವಿಧಿ ಕೆಟ್ಟಗಣ್ಣು ಬಿದ್ದು ಚಿರು ಇಹಲೋಕ ತ್ಯಜಿಸಿದರು. ಚಿರು ಈಗ ದೈಹಿಕವಾಗಿಲ್ಲ. ಆದರೆ ಮಾನಸಿಕವಾಗಿ, ಮೇಘನಾ ಮನಸ್ಸಿನಲ್ಲಿ, ಕುಟುಂಬದವರ ನೆನಪಿನಲ್ಲಿ ಜೀವಂತವಾಗಿದ್ದಾರೆ. 

ನಟಿ ಮೇಘನಾ ಇಂದು ನಾಲ್ಕನೇ ವರ್ಷದ ವಾರ್ಷಿಕೋತ್ಸವದ ನೆನಪಿನಲ್ಲಿ ಚಿರು ಅಗಲಿದ ಹಾಗು ಚೀರು ಜೊತೆಗಿನ ನೆನಪಿನಿಂದ ಸಾಮಾಜಿಕ ಜಾಲತಾಣದಲ್ಲಿ ಚಿರು ಜತೆಗಿನ ಫೋಟೋ ಶೇರ್ ಮಾಡಿದ್ದಾರೆ. ಪತಿಯ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ . 

ನಾನು ದೇವರನ್ನು ಕ್ಷಮಿಸುವ ಏಕೈಕ ಕಾರಣವೆಂದರೆ, ರಾಯನ್ ಮತ್ತು ನನಗೆ ಸರಿಯಾದ ಕೆಲಸವನ್ನ ಮಾಡಿಸಲು ಮಾರ್ಗತೊರಿಸಲು ದೇವರಿಗೆ ನಿಮ್ಮ ಮಾರ್ಗದರ್ಶನದ ಅಗತ್ಯವಿದೆ ಹಾಗಾಗಿ ಎಂದು ಬರೆದು ವಾರ್ಷಿಕೋತ್ಸವದ ಶುಭಾಶಯಗಳು ಬೇಬಿ ಮಾ ಬರೆದು ಫೋಟೋ ಜತೆ ಶೇರ್ ಮಾಡಿದ್ದಾರೆ. ಸದ್ಯ ಈ‌ ಫೊಟೋ ಸೋಶಿಯಲ್ ಮೀಡಿಯಾದದಲ್ಲಿ ವೈರಲ್ ಅಗುತ್ತಿದೆ.