ಮೇಘನಾ ರಾಜ್ ಅವರ ಮಗುವಿನ ಆಗಮನ ಯಾವಾಗ ಆಗಬಹುದು ಅಂತ ಹೇಳಿದ್ದೇನು ಗೊತ್ತಾ.? ವಿಡಿಯೋ ನೋಡಿ

Updated: Saturday, October 17, 2020, 13:59 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಅವರು ಇಷ್ಟರಲ್ಲಿಯೇ ತಮ್ಮ ಮಗುವಿಗೆ ಜನ್ಮ ನೀಡುತ್ತಾರೆ ಎನ್ನುವ ವಿಚಾರ. ಹೌದು ಈ ಮುಂಚೆ ಚಿರಂಜೀವಿ ಸರ್ಜಾ ಅನುಪಸ್ಥಿತಿಯಲ್ಲಿಯೂ ಕೂಡ ಮೇಘನಾ ಅವರಿಗೆ ಸೀಮಂತ ಕಾರ್ಯ ಕೂಡ ಜರುಗಿಸಲಾಗಿತ್ತು. ತದನಂತರ ಸಾಮಾಜಿಕ ಜಾಲತಾಣಗಳಲ್ಲಿ ಚಿರಂಜೀವಿ ಸರ್ಜಾ ಅವರ ವಿಚಾರವಾಗಿ, ಮತ್ತು ಮೇಘನಾ ರಾಜ್ ಅವರ ವಿಚಾರವಾಗಿ ಕೆಲವೊಂದು ವಿಡಿಯೋಗಳು ತುಂಬಾ ವೈರಲ್ ಆಗುತ್ತಲೇ ಇವೆ. 

ಅಂದಹಾಗೆ ನಿನ್ನೆ ಇಡೀ ಸರ್ಜಾ ಕುಟುಂಬಕ್ಕೆ ಒಂದು ಒಳ್ಳೆಯ ಸಂತಸದ ದಿನವಾಗಿತ್ತು ಎಂದರೆ ತಪ್ಪಾಗಲಾರದು. ಏಕೆಂದರೆ ಇನ್ಸ್ಟಾಗ್ರಾಂ ನಲ್ಲಿ ಒಂದು ವಿಡಿಯೋ ಕಂಡು ಬಂದಿದ್ದು, ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ದಿನದಂದು ಮೇಘನಾ ರಾಜ್ ಅವರ ಮಗುವಿನ ಆಗಮನ ಆಗಬಹುದು ಎನ್ನುವ ಸುಳಿವೊಂದನ್ನು ಕೊಟ್ಟು ವಿಡಿಯೋವನ್ನು ಹರಿಬಿಟ್ಟಿದ್ದರು. ಇಂದು ಬೆಳಿಗ್ಗೆ ಮಾತನಾಡಿದ ಮೇಘನಾ ರಾಜ್ ಅವರು ಜೂನಿಯರ್ ಚಿರು ಆಗಮನ ಯಾವಾಗ ಆಗುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು,

"ಚಿರು ಅವರು ಇಚ್ಚಿಸಬೇಕು ಯಾವಾಗ ಬರಬೇಕು ಅಂತ" ಎಂದು ಹೇಳಿದ್ದಾರೆ. ಮತ್ತು ನಿಮಗೆ ಅವಳಿ ಜವಳಿ ಮಕ್ಕಳಾಗಬಹುದಾ ಎನ್ನುವ ಪ್ರಶ್ನೆಗೆ ಚಿರಂಜೀವಿ ಪತ್ನಿ ಮೇಘನಾ ಸರ್ಜಾ ಅವರು, ಆದರೂ ಆಗಬಹುದು ಎಂದು ನಗುತ್ತಾ ಉತ್ತರ ನೀಡಿದ್ದಾರೆ. ಮತ್ತು ಇಂದು ಚಿರಂಜೀವಿ ಸರ್ಜಾ ಅವರ ಹುಟ್ಟಿದ ದಿನವಾಗಿದ್ದು,ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತುಂಬಾ ಖುಷಿಯಲ್ಲಿದ್ದಾರೆ. ಜೂನಿಯರ್ ಚಿರು ಆಗಮನ ಇಷ್ಟರಲ್ಲೇ ಆಗುವುದು ಎಂಬುದಾಗಿ ಖಚಿತಪಡಿಸಿದ್ದಾರೆ.

ಇನ್ನು ಮೇಲೆಯಾದರೂ ಮೇಘನಾರಾಜ್ ತಮ್ಮ ಮಗುವಿನ ಮೂಲಕ ತಮ್ಮೆಲ್ಲ ನೋವುಗಳನ್ನು ಮರೆತು ಚೆನ್ನಾಗಿರಲಿ ಎಂದು ಆ ದೇವರಲ್ಲಿ ನೀವು ಬೇಡಿಕೊಳ್ಳಿ. ಮತ್ತು ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ, ಕಮೆಂಟ್ ಮಾಡಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ ಧನ್ಯವಾದಗಳು....