Meghana Raj : ಮೇಘನಾ ರಾಜ್ ಫೋನ್ ನಲ್ಲಿ ಇಂದಿಗೂ ಯಾವ ಫೋಟೋ ಇದೆ ಗೊತ್ತಾ..? ಅಚ್ಚರಿಯ ವಿಡಿಯೋ
Updated:Tuesday, May 31, 2022, 18:19[IST]

ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದ ಖ್ಯಾತ ನಟಿ. ಹಾಗೆ ಕನ್ನಡ ಸಿನಿಮಾರಂಗದ ನಾಯಕ ನಟ ಚಿರಂಜೀವಿ ಸರ್ಜಾ ಅವರ ಪತ್ನಿ ಕೂಡ ಹೌದು. ಕ್ಯೂಟ್ ಕಪಲ್ ಎಂದೇ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರು ಕರೆಸಿಕೊಂಡಿದ್ದರು. ಆರಂಭದ ದಿನಗಳಲ್ಲಿ ಈ ಜೋಡಿಯೂ ತುಂಬಾ ಚೆನ್ನಾಗಿ ಎಲ್ಲರೊಟ್ಟಿಗೆ ಖುಷಿ ಖುಷಿಯಾಗಿ ಕೆಲ ಕಾರ್ಯಕ್ರಮಗಳ ಭೇಟಿ ಕೊಡುತ್ತಾ ತುಂಬಾ ಚೆನ್ನಾಗಿದ್ದರು. ಆದರೆ ಈ ಜೋಡಿ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ದೇವರಿಗೆ ಇವರಿಬ್ಬರ ಪ್ರೀತಿ ಸಹಿಸಿಕೊಳ್ಳಲು ಆಗಲಿಲ್ಲವೋ ಗೊತ್ತಿಲ್ಲ, ಬಹುಬೇಗ ನಟ ಚಿರಂಜೀವಿ ಸರ್ಜಾ ಅವರನ್ನು ನಮ್ಮಿಂದ ಮತ್ತು ಅವರ ಪತ್ನಿ ಮೇಘನಾರಾಜ್ ಅವರಿಂದ ಹಾಗೂ ಅವರ ಇಡೀ ಕುಟುಂಬದಿಂದ ಕಿತ್ತುಕೊಂಡುಬಿಟ್ಟ. ನಟ ಚಿರು ಅವರ ಅಕಾಲಿಕ ಮರಣ ಈಗಲೂ ಕೂಡ ಹೆಚ್ಚು ನೋವು ನೀಡುತ್ತದೆ.
ಆದರೆ ಮತ್ತೆ ಮಗನ ಮೂಲಕ ಜೂನಿಯರ್ ಚಿರಂಜೀವಿ ಸರ್ಜಾ ಮೇಘನಾ ಅವರ ಹೊಟ್ಟೆಯಲ್ಲಿ ಹುಟ್ಟಿ ಇದೀಗ ಅವರ ಮನೆಯಲ್ಲಿ ಸ್ವಲ್ಪ ಕೊಂಚ ನೋವು ಕಡಿಮೆಯಾಗಿದೆ ಎನ್ನಬಹುದು. ಮಗ ರಾಯನ್ ರಾಜ್ ಸರ್ಜಾ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ನಟಿ ಮೇಘನಾ ರಾಜ್ ಅವರು ಇದೀಗ ಫೋನ್ ವಿಚಾರಕ್ಕೆ ಸಂಬಂಧಪಟ್ಟ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ನಿಮ್ಮ ಫೋನ್ ಯಾವುದು ಎಂದು ಕೇಳಿದಾಗ, ಐಫೋನ್ ಲೆವೆನ್ ಎಂದು ಹೇಳುತ್ತಾರೆ ಆದರೆ ಇದರ ವರ್ಷನ್ ಗೊತ್ತಿಲ್ಲ ಕೇಳಬೇಡಿ ಎಂದರು. ಜೊತೆಗೆ ಚಿರು ನನಗೆ ಕ್ರಿಸ್ಮಸ್ ಹಬ್ಬದಂದು ಇದನ್ನು ಗಿಫ್ಟ್ ಮಾಡಿದ್ದರು ಎನ್ನುತ್ತಾರೆ ಮೇಘನಾ. ನಿಮ್ಮ ಮೊಬೈಲ್ ವಾಲ್ಪೇಪರ್ ಈಗ ಯಾವುದು ಇದೆ ಎಂದಾಗ ಚಿರಂಜೀವಿ ಜೊತೆ ಇರುವ ಫೋಟೋವನ್ನು ತೋರಿಸುತ್ತಾರೆ ಮೇಘನಾ.
ಹಾಗೆ ನಿಮ್ಮ ಫೋನ್ ನಲ್ಲಿ ಕೊನೆಯಬಾರಿ ಗೂಗಲ್ ಸರ್ಚ್ ಮಾಡಿದ್ದು ಏನು, ಯಾರ ಫೋನ್ಗಳನ್ನು ಹೆಚ್ಚಾಗಿ ಅವೈಡ್ ಮಾಡುತ್ತೀರಿ, ಯಾರಾದರೂ ಫೋನ್ ಮಾಡಿದಾಗ ರಿಸೀವ್ ಮಾಡದೆ ಇದ್ದಾಗ ಹೇಳುವ ನಿಮ್ಮ ಕಾರಣಗಳು ಯಾವುವು, ಜೊತೆಗೆ ದರ್ಶನ್ ಅವರ ಫೋನ್ ಕಾಲ್ ಬಂದರೆ ಹೇಗೆ ನೀವೂ ರಿಯಾಕ್ಟ್ ಮಾಡುತ್ತೀರಿ ಎಂದು ಕೆಲವು ಪ್ರಶ್ನೆಗಳ ಮಾಡಲಾಗಿದೆ. ಎಲ್ಲಾ ಪ್ರಶ್ನೆಗಳಿಗೂ ನಟಿ ಮೇಘನ ಅವರು ಸಿಂಪಲ್ಲಾಗಿ ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ.. ಹೌದು ರಾಪಿಡ್ ರಶ್ಮಿ ಅವರು ಸಂದರ್ಶನ ತೆಗೆದುಕೊಂಡಿದ್ದು ಮೇಘನ ರಾಜ್ ಅವರು ಕೊಟ್ಟ ಉತ್ತರ ಮತ್ತು ಫೋನಿಗೆ ಸಂಬಂಧಪಟ್ಟ ಕೆಲ ಅಪ್ಲಿಕೇಶನ್ ಬಗ್ಗೆ ಹೇಳಿರುವ ಮಾಹಿತಿ ತುಂಬಾನೇ ಅದ್ಭುತವಾಗಿದೆ ಎನ್ನಬಹುದು. ಇಲ್ಲಿದೆ ನೋಡಿ ಆ ವಿಡಿಯೋ. ಮೇಘನಾ ಅವರ ಅಸಲಿ ವಿಡಿಯೋ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತು ವಿಡಿಯೋ ನಿಮಗೆ ಇಷ್ಟವಾದಲ್ಲಿ ಶೇರ್ ಕೂಡ ಮಾಡಿ ಧನ್ಯವಾದ.. ( video credit ; rapid rashmi )
