Meghana Raj: ಧೃವ, ರಾಯನ್ ಈಗ ಚಿರಂಜೀವಿ ಸರ್ಜಾ ಸಮಾಧೀ ಬಳಿ ಏನ್ ಮಾಡ್ತಿದ್ದಾರೆ ಗೊತ್ತಾ..?
Updated:Tuesday, June 7, 2022, 13:58[IST]

2020ರ ಜೂನ್ 7. ಕೋವಿಡ್ ಮೊದಲನೇಯ ಅಲೆಯಿಂದ ಇಡೀ ಕರ್ನಾಟಕ ಸುಧಾರಿಸಿಕೊಳ್ಳುತ್ತಿತ್ತು. ಆದರೆ ಮಾಧ್ಯಮದಲ್ಲಿ ಹರಿದು ಬಂದು ಹಠಾತ್ ಸುದ್ದಿಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಅದೇ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ತೆರಳಿದ್ದರು. ಅಂದು ಇಡೀ ಕರುನಾಡೇ ಕಂಬನಿ ಮಿಡಿದಿತ್ತು. ಸರ್ಜಾ ಕುಟುಂಬ ಮಗನನ್ನು ಕಳೆದುಕೊಂಡ ದುಖಃದ ಕತ್ತಲೆಗೆ ಜಾರಿದ್ದರು. ಇದೀಗ ಚಿರಂಜೀವಿ ಸರ್ಜಾ ಸಾವನ್ನಪ್ಪಿ ಹತ್ತಿರ ಹತ್ತಿರ ಎರಡು ವರ್ಷವಾಗುತ್ತಿದೆ. ಧೃಉವ ಸರ್ಜಾ ಇಂದಿಗೂ ಅಣ್ಣನ ನೆನಪಿನಲ್ಲಿ ದಿನ ಕಳೆಯುತ್ತಿದ್ದಾನೆ.
ಇನ್ನು ಚಿರು ಸಾವನ್ನಪ್ಪಿದ ನಾಲ್ಕೇ ತಿಂಗಳಲ್ಲಿ ರಾಯನ್ ಜನಿಸಿದ್ದ. 2020ರ ಅಕ್ಟೋಬರ್ 22ರಂದು ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಜೂನಿಯರ್ ಚಿರು ಜನಿಸಿದ್ದು, ಎಲ್ಲರಲ್ಲೂ ಸಂತಸ ತಂದಿದ್ದ. ಇದೀಗ ಮನೆಯಲ್ಲಿ ಮಗು ಜೊತೆ ಮೇಘನಾ ರಾಜ್, ಸುಂದರ್ ರಾಜ್, ಪ್ರಮೀಳಾ ಜೋಶಾಯಿ ಆಡಿ ನಲಿಯುತ್ತಿದ್ದಾರೆ. ಆದರೂ ಧೃವ ಸರ್ಜಾ ಮಾತ್ರ ತನ್ನ ಅಣ್ಣನ ನೆನಪಿನಿಂದ ಹೊರ ಬಂದಿಲ್ಲ. ವಾರಕ್ಕೊಮ್ಮೆಯಾದರೂ ಅಣ್ಣನ ಸಮಾಧಿ ಬಳಿ ಹೋಗಿ ಕೆಲ ಸಮಯ ಅಲ್ಲೇ ಕಳೆದು, ಕಣ್ಣೀರಿಟ್ಟು ಬರುತ್ತಾನೆ.
ಇಂದು ಅಣ್ಣನ ಎರಡನೇ ವರ್ಷದ ತಿಥಿ ಇರುವುದರಿಂದ ಕುಟುಂಬಸ್ತಎಲ್ಲರು ಈಗ ಚಿರಂಜೀವಿ ಸರ್ಜಾ ಅವರ ಸಮಾಧಿ ಗೆ ತೆರಳಿದ್ದಾರೆ. ಅಲ್ಲಿ ಮನೆಯವರೆಲ್ಲರೂ ಪೂಜೆ ಮಾಡಲಿದ್ದಾರೆ. ಧೃವ ಸರ್ಜಾ ರಾಯನ್ ರಾಜ್ ಸರ್ಜಾನನ್ನು ಎತ್ತಿಕೊಂಡು ಸಮಾಧಿ ಬಳಿ ಕೂತಿದ್ದಾರೆ. ಚಿರಂಜೀವಿ ತಂದೆ-ತಾಯಿ, ಪ್ರೇರಣ, ಮೇಘನಾ ರಾಜ್, ಸುಂದರ್ ರಾಜ್, ಪ್ರಮೀಳಾ ಜೋಶಾಯಿ ಎಲ್ಲರೂ ಕೂಡ ಭಾಗಿಯಾಗಿದ್ದಾರೆ. ಧೃವ ಸರ್ಜಾ ಹಾಗೂ ಮೇಘನಾ ರಾಜ್ ಸಮಾಧಿ ಎದುರು ಕುಳಿತು ಕಣ್ಣೀರಿಡುತ್ತಿದ್ದಾರೆ ( video credit : public tv ).