ಚಿರು ಕನಸನ್ನು ನನಸು ಮಾಡೇ ಮಾಡ್ತಿನಿ ಎಂದು ಮನ ಬಿಚ್ಚಿ ಮಾತಾಡಿದ ಮೇಘನಾ..! ವಿಡಿಯೋ ವೈರಲ್

Updated: Sunday, September 12, 2021, 13:45 [IST]

ಸ್ನೇಹಿತರೆ ಇತ್ತೀಚಿಗಷ್ಟೇ ಎಲ್ಲರಿಗೂ ಗೊತ್ತಿರುವ ಪ್ರಕಾರ ನಮ್ಮ ಸ್ಯಾಂಡಲ್ ವುಡ್ ಜೋಡಿಯಾಗಿದ್ದ ಮೇಘನ ಹಾಗೂ ಚಿರಂಜೀವಿ ಸರ್ಜಾ ಅವರ ಪುತ್ರನ ನಾಮಕರಣ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಹೌದು ಚಿರಂಜೀವಿ ಮತ್ತು ಮೇಘನಾ ರಾಜ್ ಅವರ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಯಿತು. ಬಳಿಕ ನಾಮಕರಣದ ವಿಷಯದಲ್ಲಿ ಕೆಲವರು ತಲೆ ಹಾಕಿ ಜಾತಿ ಧರ್ಮದ ಹೆಸರಿನಲ್ಲಿ ನಾಮಕರಣ ಮಾಡಿದ್ದಾರೆ ರಾಯನ್ ಎಂಬುದು ಕ್ರಿಶ್ಚಿಯನ್ ಧರ್ಮದಲ್ಲಿ ಬರುತ್ತೆ, ಇದು ಕ್ರಿಶ್ಚಿಯನ್ ಹೆಸರು, ಹಿಂದೂ ನಾಮಕರಣ ಮಾಡಿಲ್ಲ ಬದಲಿಗೆ ಇದೊಂದು ಕ್ರಿಶ್ಚಿಯನ್ ಹೆಸರು ಎಂದು ಮಾತನಾಡಿದರು.

ಬಳಿಕ ಈ ವಿಷಯ ಹೆಚ್ಚು ವಿವಾದಕ್ಕೆ ಸಿಲುಕಿ, ದೊಡ್ಡ ದೊಡ್ಡ ಮಾತುಗಳೆಲ್ಲ ಕೇಳಿ ಬಂದವು. ಇದಾದ ಬಳಿಕ ಮೇಘನ ರಾಜ್ ಹಾಗೂ ಇವರ ಕುಟುಂಬ ಈ ಬಗ್ಗೆ ಸ್ಪಷ್ಟ ಹೇಳಿಕೆ ಕೊಟ್ಟು ಈ ವಿಚಾರವನ್ನು ಅಲ್ಲಿಗೆ ಬಿಡುವಂತೆ ಹೇಳಿದರು. ಇದಾದ ಬಳಿಕ ಇತ್ತೀಚಿಗಷ್ಟೇ ಮೇಘನರಾಜ್ ಅವರು ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಿದ್ದರು. ಆ ವೇಳೆ ತಮ್ಮ ಹಾಗೂ ಚಿರಂಜೀವಿ ಅವರ ಒಡನಾಟ ಹೇಗಿತ್ತು, ತಮ್ಮನ್ನು ಯಾವ ರೀತಿ ನೋಡಿಕೊಳ್ಳುತ್ತಿದ್ದರು. ಅವ್ರಿಗೆ ಯಾವ ರೀತಿ ಇರೋದಕ್ಕೆ ಇಷ್ಟ ಪಡುತ್ತಿದ್ದರು ಎಂದು ಹೇಳಿದರು.

ಜೊತೆಗೆ ಚಿರು ಮತ್ತು ಅವರ ತಂದೆಯ ನಡುವಿನ ಪ್ರೀತಿ ಯಾವ ರೀತಿ, ಹೇಗಿತ್ತು ಎಂಬುದನ್ನು ಮೇಘನಾ ರಾಜ್ ಅವರು ಹೇಳಿದರು. ಜೊತೆಗೆ ಚಿರುವಿನ ಆ ಒಂದು ಕನಸಿನ ಬಗ್ಗೆ ಮಾತನಾಡಿ ತುಂಬಾನೇ ಭಾವುಕರಾದರು. ಅಷ್ಟಕ್ಕೂ ಚಿರು ಕನಸು ಕಂಡಿದ್ದಾದ್ರು ಎನ್ ಗೊತ್ತಾ.? ಈ ವಿಡಿಯೋ ನೋಡಿ ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮಾಡಿ ನಮಗೆ ತಿಳಿಸಿ, ಧನ್ಯವಾದಗಳು....(ವಿಡಿಯೋ  ಕೃಪೆ ಒನ್ ಟೈಪ್ ರಕ್ಷಿ )