Meghana Raj : ಇದ್ದಕ್ಕಿದ್ದಂತೆ ಎಲ್ಲರ ಮನ ಗೆಲ್ಲುವಂತೆ ಕ್ಯೂಟ್ ಡ್ಯಾನ್ಸ್ ಮಾಡಿದ ರಾಯನ್ ರಾಜ್ ಸರ್ಜಾ..!
Updated:Saturday, June 18, 2022, 12:52[IST]

ಸ್ಯಾಂಡಲ್ ವುಡ್ ಯುವ ನಾಯಕ ನಟ ಆಗಿ ಮಿಂಚುತ್ತಿದ್ದ ನಟ ಚಿರಂಜೀವಿ ಸರ್ಜಾ ಅವರು ಮೂಲತಹ ಕಲಾವಿದರ ಕುಟುಂಬದಿಂದ ಬಂದವರು. ಚಿರಂಜೀವಿ ಸರ್ಜಾ ಅವರು ನಮ್ಮ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಅಣ್ಣ ಕೂಡ ಹೌದು, ಜೊತೆಗೆ ನಟ ಅರ್ಜುನ್ ಸರ್ಜಾ ಅವರ ಅಳಿಯ ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಚಿರಂಜೀವಿ ಸರ್ಜಾ ಅವರು ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಸಿನಿಮಾಗಳ ಮಾಡುತ್ತಾ ತಕ್ಕಮಟ್ಟಿಗೆ ಅಭಿಮಾನಿಗಳನ್ನು ರಂಜಿಸುತ್ತಾ ಬರುತ್ತಿದ್ದರು. ಜೊತೆಗೆ ಅಷ್ಟೇ ಅಭಿಮಾನಿಗಳನ್ನು ಪ್ರೀತಿ ಮಾಡಿ ಎಲ್ಲರ ಸ್ನೇಹ ಗಳಿಸಿ ಹೆಚ್ಚು ಅಭಿಮಾನಿ ಬಳಗವನ್ನು ಕೂಡ ಹೊಂದಿದಂತಹ ನಟ ಇವರು. ಆದರೆ ವಿಧಿಯಾಟ ನಮ್ಮ ಕೈಯಲ್ಲಿಲ್ಲ, ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣಕ್ಕೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು ದೊಡ್ಡ ವಿಷಾದನೀಯ.
ನಟ ಚಿರಂಜೀವಿ ಅವರ ಅಗಲಿಕೆ ಇಂದಿಗೂ ಕೂಡ ಹೆಚ್ಚು ನೋವು ನೀಡುತ್ತದೆ. ಅವರ ಪತ್ನಿ ನಟಿ ಮೇಘನಾ ರಾಜ್ ಇದರಿಂದ ಈಗೀಗ ಸ್ವಲ್ಪ ಹೊರಗಡೆ ಬರುತ್ತಿದ್ದಾರೆ. ಮಗನ ಮೂಲಕ ಚಿರಂಜೀವಿ ಅವರ ಅಗಲಿಕೆಯ ನೋವನ್ನು ಕೊಂಚ ಕಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಬಹುದು. ಚಿರಂಜೀವಿ ಹಾಗೂ ಮೇಘನಾ ರಾಜ್ ಅವರಿಗೆ ಒಬ್ಬ ಪುತ್ರ ಇದ್ದು, ಚಿರಂಜೀವಿ ಅಗಲಿಕೆ ಆಗುತ್ತಿದ್ದಂತೆ ಮಗನ ಮೂಲಕವೇ ಚಿರಂಜೀವಿ ಸರ್ಜಾ ಮತ್ತೆ ಹುಟ್ಟಿಬಂದರು ಎನ್ನಬಹುದು. ಆ ದೇವರು ಒಂದು ಕಸಿದುಕೊಂಡರೂ, ಮತ್ತೊಂದು ಕೊಟ್ಟ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹೌದು ಚಿರಂಜೀವಿ ಪುತ್ರ ರಾಯನ್ ಸರ್ಜಾ ಇದೀಗ ಅವರ ತಾಯಿ ಮೇಘನಾ ರಾಜ್ ಅವರ ಜೊತೆ ಪ್ರೀತಿಯಲ್ಲಿಯೇ ಬೆಳೆಯುತ್ತಿದ್ದಾನೆ.
ಇದೀಗ ರಾಯನ್ ರಾಜ್ ಇದ್ದಕ್ಕಿದ್ದಂತೆ ಡ್ಯಾನ್ಸ್ ಮಾಡಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕ್ಯೂಟ್ ಆಗಿದೆ. ಮೇಘನಾ ರಾಜ್ ಅವರು ಆಗಾಗ ಮಗ ರಾಯನ್ ಅನ್ನು ಸಂದರ್ಶನದಲ್ಲಿ ಮತ್ತು ಕೆಲವೊಂದಿಷ್ಟು ವೇದಿಕೆಯಲ್ಲಿ ಕರೆದುಕೊಂಡು ಬಂದು ಕೆಲ ವಿಚಾರಗಳನ್ನು ಅವರ ಅಭಿಮಾನಿಗಳ ಎದುರು ಹಂಚಿಕೊಳ್ಳುತ್ತಾರೆ. ಇದೀಗ ರಾಯನ್ ಮಾಡಿರುವ ನೃತ್ಯದ ವಿಡಿಯೋ ನೀವು ಕೂಡ ಒಮ್ಮೆ ನೋಡಲೇಬೇಕು. ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ, ಮತ್ತು ಹೀಗೆ ಯಾವಾಗಲೂ ಖುಷಿಯಾಗಿರು ಕಂದ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು... ( video credit : chandanavana )