Meghana Raj : ಮೇಘನಾ ರಾಜ್ ಎರಡನೇ ಮದುವೆಯಾಗುವುದು ಗ್ಯಾರೆಂಟಿನಾ..? ಮೇಘನಾ ಏನಂತಾರೆ ನೋಡಿ ?

By Infoflick Correspondent

Updated:Friday, August 26, 2022, 21:07[IST]

Meghana Raj : ಮೇಘನಾ ರಾಜ್ ಎರಡನೇ ಮದುವೆಯಾಗುವುದು ಗ್ಯಾರೆಂಟಿನಾ..?  ಮೇಘನಾ ಏನಂತಾರೆ ನೋಡಿ ?

ದಿವಂಗತ ಚಿರಂಜೀವಿ ಸರ್ಜಾ ಇಹಲೋಕ ಎರಡು ವರ್ಷ ಕಳೆದಿದೆ. ಜೂನ್ 2020ರಿಂದ ಮೇಘನಾ ರಾಜ್ ತಮ್ಮ ತವರು ಮನೆಯಲ್ಲೇ ಇದ್ದಾರೆ. ರಾಯನ್ ಹುಟ್ಟಿ ಎರಡು ವರ್ಷವಾಗುತ್ತಾ ಬಂದಿದೆ. ಮೇಘನಾ ಅವರ ಬಾಣಂತನವೂ ಮುಗಿದಿದೆ. ಇಷ್ಟು ದಿನವಾದರೂ ಇನ್ನು ಮೇಘನಾ ಸರ್ಜಾ ಮನೆಗೆ ಹೋಗುವ ಯೋಚನೆಯನ್ನೇ ಮಾಡಿಲ್ಲವಂತೆ. ಇನ್ನು ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಮಗುವಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ. 

ರಾಯನ್ ಎಂಬ ಹೆಸರು ಕ್ರೈಸ್ತ ಧರ್ಮದ ಹೆಸರಿನಂತಿದೆ ಎಂಬ ವಿವಾದವೂ ಸೃಷ್ಟಿಯಾಗಿತ್ತು. ಈ ವೇಳೆ,  ಮಗನ ಹೆಸರಿನ ಬಗ್ಗೆ ಮಾತನಾಡಿದ್ದ ಮೇಘನಾ ರಾಜ್, ಕತ್ತಲೆಯಲ್ಲಿದ್ದ ನಮಗೆ ಬೆಳಕು ಕೊಟ್ಟ. ಅವನಿಂದ ನಮ್ಮೆರಡೂ ಮನೆಯಲ್ಲಿ ನಗು, ಖುಷಿ, ಸಂತಸ ಮನೆ ಮಾಡಿದೆ. ಅವನು ಎಂದಿಗೂ ರಾಯನ್. ಹಾಗಾಗಿ ಅವನಿಗೆ ಈ ಹೆಸರು ಇಟ್ಟಿದ್ದೇವೆ ಎಂದು ಹೇಳಿದ್ದರು. ಇನ್ನು ಮೇಘನಾ ಸರ್ಜಾ ಮನೆಗೆ ಯಾವಾಗ ಹೋಗುತ್ತಾರೆ ಎಂಬ ಪ್ರಶ್ನೆಗೆ ಸರ್ಜಾ ಮನೆಗೆ ಹೋಗುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದರು. ಆ ಬಗ್ಗೆ ಯೋಚನೆಯನ್ನೂ ಮಾಡಿಲ್ಲ ಎಂದಿದ್ದರು.  

ಮೇಘನಾ ರಾಜ್ ಅವರ ಈ ಹೇಳಿಕೆಯಿಂದ ಹಲವರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ನಿಜಕ್ಕೂ ಸರ್ಜಾ ಮನೆಗೆ ಮೇಘನಾ ಹೋಗುತ್ತಾರಾ ಇಲ್ಲವೇ ಇನ್ನೊಂದು ಮದುವೆಯಾಗುತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದವು. ಇದೀಗ ಈ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಮೇಘನಾ ಅವರು, ಹಲವರು ಎರಡನೇ ಮದುವೆಯಾಗುವಂತೆ ಹೇಳುತ್ತಿದ್ದಾರೆ. ಇನ್ನೂ ಕೆಲವರು ಬೇಡ ಎನ್ನುತ್ತಿದ್ದಾರೆ. ಆದರೆ ನಾನು ಇನ್ನೂ ಆ ಬಗ್ಗೆ ಯೋಚಿಸಿಲ್ಲ. ಇನ್ಮುಂದೆ ಹೇಗೋ ಗೊತ್ತಿಲ್ಲ. ಸದ್ಯ ಚಿರು ದಾರಿಯಲ್ಲಿ ಬದುಕಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.