ಕಿರುತೆರೆಯ ಹೊಸ ಸೀರಿಯಲ್ ಗೆ ಎಂಟ್ರಿ ಕೊಟ್ಟ ಅನು ಸಿರಿಮನೆ..! ಅಸಲಿಗೆ ಯಾವುದು ಗೊತ್ತಾ

By Shivaraj

Updated:Tuesday, March 15, 2022, 11:59[IST]

ಕಿರುತೆರೆಯ ಹೊಸ ಸೀರಿಯಲ್ ಗೆ ಎಂಟ್ರಿ ಕೊಟ್ಟ ಅನು ಸಿರಿಮನೆ..! ಅಸಲಿಗೆ ಯಾವುದು ಗೊತ್ತಾ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರವರ ಅಭಿನಯದ ಮೂಲಕ ಹೆಚ್ಚು ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಕಿರುತೆರೆಯ ಲೋಕದಲ್ಲಿ ಮಾತ್ರವಲ್ಲದೆ ಅದೃಷ್ಟ ಕೈ ಹಿಡಿದರೆ ಏನು ಬೇಕಾದರೂ ಆಗಬಹುದು ಜೊತೆಗೆ ಸತತ ಪರಿಶ್ರಮ ಇದ್ದರೆ ಎಂದೆಂದಿಗೂ ಕೂಡ ಸೋಲು ಬರುವುದಿಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ನಟಿ ಮೇಘ ಶೆಟ್ಟಿ ಅವರು ಸಾಧನೆ ಮಾಡಿದ್ದಾರೆ. ಮೇಘ ಶೆಟ್ಟಿ ಅವರು ಜೊತೆ ಜೊತೆಯಲಿ  ಮೂಲಕ ಕಿರುತೆರೆಗೆ ಕಾಲಿಟ್ಟವರು. ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನು ಸಿರಿಮನೆ ಪಾತ್ರದಲ್ಲಿ ಕಾಣಿಸಿದ್ದು ಮೇಘ ಶೆಟ್ಟಿ ಕನ್ನಡ ಜನತೆಗೆ ತುಂಬಾ ಹತ್ತಿರವಾದರು ಎಂದು ಹೇಳಬಹುದು.   

ತುಂಬಾ ಸರಳತೆ ಹೊಂದಿರುವ ಅನು ಪಾತ್ರದಲ್ಲಿ ಕಾಣಿಸಿದ ಮೇಘಾ ಶೆಟ್ಟಿ ಪ್ರತಿಯೊಬ್ಬರಿಗೂ ಹೆಚ್ಚು ಇಷ್ಟವಾದರು. ಹೌದು ಮೇಘ ಶೆಟ್ಟಿ ಅವರು ಕಿರುತೆರೆಯಿಂದ ಬೆಳ್ಳಿತೆರೆಗೆ ಕೂಡ ಕಾಲಿಡುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್ ಹಾಗೆ ಡಾರ್ಲಿಂಗ್ ಕೃಷ್ಣ ಅವರ ಜೊತೆ ದಿಲ್ಪಸಂದ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲದರ ಜೊತೆ ಇಷ್ಟು ದಿವಸ ನಟಿಯಾಗಿದ್ದ ಮೇಘ ಶೆಟ್ಟಿ ಅವರು ಈಗ ಕಿರುತೆರೆಯ ಹೊಸ ಧಾರಾವಾಹಿಗೆ ನಿರ್ಮಾಪಕಿಯಾಗಿ ಕೆಲಸ ಶುರು ಮಾಡಿದ್ದಾರಂತೆ. ಕೆಂಡಸಂಪಿಗೆ ಎನ್ನುವ ಹೊಸ ಧಾರಾವಾಹಿಗೆ ನಟಿ ಮೇಘ ಶೆಟ್ಟಿಯವರು ಹಣ ಹೂಡಿಕೆ ಮಾಡಿದ್ದಾರೆ ಎಂದು ಕೇಳಿ ಬಂದಿದೆ. ಸುಮನ ಎನ್ನುವ ಬಡಕುಟುಂಬದ ಹುಡುಗಿಯ ಕಥೆ ಇದಾಗಿದ್ದು, ತನ್ನ ಕುಟುಂಬಕ್ಕಾಗಿ ಏನೆಲ್ಲ ತ್ಯಾಗ ಮಾಡುತ್ತಾರೆ ಎಂಬುದೆ ಈ ಸೀರಿಯಲ್ ಕಥಾಹಂದರವಾಗಿದೆ.

ಹೌದು ನಟಿ ಮೇಘ ಶೆಟ್ಟಿ ಮತ್ತು ಇವರ ಸಹೋದರಿ ಸೇರಿ ಹೋಂ ಪ್ರೊಡಕ್ಷನ್ ನಲ್ಲಿ ಕೆಂಡಸಂಪಿಗೆ ಎಂಬ ಸೀರಿಯಲ್ ನಿರ್ಮಾಪಕಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಈಗಾಗಲೇ ಟೀಸರ್ ಮೂಲಕ ಹೊರ ಬಂದಿದ್ದು ಖಾಸಗಿ ಚಾನೆಲ್ ಒಂದರಲಿ ಪ್ರಸಾರವಾಗಲಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಚಿಕ್ಕ ವಯಸ್ಸಿಗೆ ಇಷ್ಟು ಹೆಸರು ಮಾಡಿರುವ ನಟಿ ಮೇಘ ಶೆಟ್ಟಿ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿ ಧನ್ಯವಾದಗಳು...