Meghna Raj : ಮಹಾಸಂಗಮ ವೇದಿಕೆಯಲ್ಲಿ ಮೇಘನಾ ರಾಜ್ ಗೆ ಭರ್ಜರಿ ಸರ್ಪ್ರೈಸ್..! ಅಮ್ಮ ಎಂದ ಕ್ಷಣ ನೋಡಿ..!
Updated:Tuesday, June 14, 2022, 20:31[IST]

ಕನ್ನಡ ಕಿರುತೆರೆ ಖ್ಯಾತ ರಿಯಾಲಿಟಿ ಕಾರ್ಯಕ್ರಮಗಳಾದ ಡ್ಯಾನ್ಸಿಂಗ್ ಚಾಂಪಿಯನ್ಸ್ ಹಾಗೂ ಕನ್ನಡದ ಮತ್ತೊಂದು ಕಾಮಿಡಿ ಕಾರ್ಯಕ್ರಮ ಗಿಚ್ಚಿ ಗಿಲಿ ಗಿಲಿ ಒಟ್ಟಿಗೆ ಸೇರಿಸಿ ಮಹಾಸಂಗಮ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ಚಾನೆಲ್ ಮೂಲಕ ನೆರವೇರಿಸಿತ್ತು. ಈ ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ಅವರು ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದರು ಎಂದು ಹೇಳಬಹುದು. ವೇದಿಕೆ ಮೇಲೆ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ತೀರ್ಪುಗಾರ ನಟ ಸೃಜನ್ ಲೋಕೇಶ್ ಜೊತೆಗೆ ಶ್ರುತಿ ಅವರು ಕೂಡ ಕಾಣಿಸಿದ್ದಾರೆ. ಇನ್ನೊಂದು ಕಡೆ ಡಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮದ ತೀರ್ಪುಗಾರರಾದ ನಟಿ ಮಯೂರಿ, ವಿಜಯ ರಾಘವೇಂದ್ರ ಹಾಗೆ ಮೇಘನಾರಾಜ್ ಅವರು ಕೂಡ ಕಾಣಿಸಿದರು.
ಈ ವೇದಿಕೆ ಮೇಲೆ ನಟಿ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಜೊತೆಗೆ ತಾಯಿ ಪ್ರಮೀಳಾ ಜೋಷಾಯ್ ಮತ್ತು ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾ ಕೂಡ ಆಗಮಿಸಿದ್ದು ಹೆಚ್ಚು ವಿಶೇಷವಾಗಿ ಕೂಡಿತ್ತು. ನಟಿ ಮೇಘನಾ ರಾಜ್ ಅವರ ಹುಟ್ಟುಹಬ್ಬಕ್ಕೆ ಕಂಟೆಸ್ಟೆಂಟ್ ಮತ್ತು ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ತೀರ್ಪುಗಾರರು ಪ್ರೀತಿಯ ಶುಭಾಶಯ ಕೋರಿದ್ದು ನೋಡುಗರಿಗೆ ಹೆಚ್ಚು ಖುಷಿ ನೀಡಿತು ಎಂದು ಹೇಳಬಹುದು. ನಟಿ ಮೇಘನರಾಜ್ ಅವರಿಗೆ ವಿಶೇಷವಾಗಿ ಮಲಯಾಳಂ ಖ್ಯಾತ ನಟಿ ನಜರಿಯ ಜೊತೆಗೆ ಧ್ರುವ ಸರ್ಜಾ ಕೂಡ ಶುಭಾಶಯ ತಿಳಿಸಿದರು. ಈ ವೇದಿಕೆ ಮೇಲೆ ಚಿರಂಜೀವಿ ಸರ್ಜಾ ಅವರನ್ನು ನೆನಪು ಮಾಡಿಕೊಂಡ ಮೇಘನರಾಜ್ ಅವರು ಅವರ ಜೀವನದ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಇದೀಗ ಹೇಗೆ ಜೀವನ ಮಾಡುತ್ತಿದ್ದಾರೆ ಎಂದು ಹೇಳಿದ್ದು ಹೆಚ್ಚು ವಿಶೇಷವಾಗಿದೆ.
VIDEO CREDIT : COLORS KANNADA
ಹಾಗೆ ಜೀವನದಲ್ಲಿ ಯಾವ ರೀತಿ ಸ್ಫೂರ್ತಿ ತೆಗೆದುಕೊಂಡು ಯಾರಿಂದ ಧೈರ್ಯ ತುಂಬಿಕೊಂಡರು ಎಂಬುದಾಗಿಯೂ ಕೂಡ ಮೇಘನಾ ರಾಜ್ ಅವರು ಹೇಳಿದರು. ಅಸಲಿಗೆ ಮೇಘನಾ ರಾಜ್ ಅವರ ಅವರ ಹುಟ್ಟುಹಬ್ಬದ ಸರ್ಪ್ರೈಸ್ ಹೀಗಿತ್ತು ನೋಡಿ. ರಾಯನ್ ಅಮ್ಮ ಎಂದ ಕ್ಷಣ ನೋಡಿ ನಿಜಕ್ಕೂ ಕಣ್ತುಂಬಿ ಬರುವಂತಿದೆ. ಈ ವಿಡಿಯೋ ನೋಡಿದ ಬಳಿಕ ಮೇಘನಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಕಮೆಂಟ್ ಮಾಡಿ ಧನ್ಯವಾದಗಳು...