ಅಪ್ಪು ಅಭಿಮಾನಿಗಳ ಬಗ್ಗೆ ಮಿಲನಾ ನಾಗರಾಜ್ ಕಣ್ಣೀರು ಹಾಕಿಕೊಂಡು ಹೀಗೆ ಹೇಳಿದ್ಯಾಕೆ..?

By Infoflick Correspondent

Updated:Thursday, March 3, 2022, 08:33[IST]

ಅಪ್ಪು ಅಭಿಮಾನಿಗಳ ಬಗ್ಗೆ ಮಿಲನಾ ನಾಗರಾಜ್ ಕಣ್ಣೀರು ಹಾಕಿಕೊಂಡು ಹೀಗೆ ಹೇಳಿದ್ಯಾಕೆ..?

ಲವ್ ಮಾಕ್ಟೇಲ್ ಚಿತ್ರ ಅತಿ ಹೆಚ್ಚು ಪ್ರೇಕ್ಷಕರಿಗೆ ಬಲು ಇಷ್ಟವಾದ ಸಿನಿಮಾ. ಈ ಸಿನಿಮಾದಲ್ಲಿ ಪ್ರಮುಖವಾಗಿ ಬರುವ ಮೂರು ಹುಡುಗಿಯರ ಸುತ್ತವೇ ಇಡೀ ಸಿನಿಮಾ ನಡೆಯುತ್ತೆ. ಡಾರ್ಲಿಂಗ್ ಕೃಷ್ಣ ನ ಜೀವನದಲ್ಲಿ ನಡೆದ ಲವ್ ಸ್ಟೋರಿಯೇ ಈ ಸಿನಿಮಾ ಕಥೆ. ಇನ್ನು ಈ ಸಿನಿಮಾ ರಿಲೀಸ್ ಆದಾಗ ಥೀಯೇಟರ್ ಗಳು ಖಾಲಿ ಹೊಡೆಯುತ್ತಿತ್ತು. ಸಿನಿಮಾ ಸೋತೋಯ್ತು ಅಂತ ಅಂದುಕೊಳ್ಳುವಷ್ಟರಲ್ಲಿ ದೇಶದಲ್ಲಿ ಮೊದಲ ಲಾಕ್ ಡೌನ್ ಘೋಷಿಸಲಾಯ್ತು. ಆಗ ಓಟಿಟಿಯಲ್ಲಿ ಲವ್ ಮಾಕ್ಟೈಲ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತು. ಥೀಯೇಟರ್ ನಲ್ಲಿ ಠುಸ್ ಆದ ಸಿನಿಮಾ ಒಟಿಟಿಯಲ್ಲಿ ಸಕ್ಸಸ್ ಕಂಡಿತು.

ಈ ಸಕ್ಸಸ್ ನಿಂದ ಪ್ರೇರಿತಗೊಂಡ ಮೂಡಿ ಬಂದ ಚಿತ್ರವೇ ಲವ್ ಮಾಕ್ಟೇಲ್ 2. ಲವ್ ಮಾಕ್ಟೇಲ್ 2 ಚಿತ್ರ ಕಳೆದ ತಿಂಗಳು ರಿಲೀಸ್ ಆಗಿ ಹೌಸ್ ಫುಲ್ ಆಗಿದೆ. ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಎಲ್ಲೂ ಅಸಮಾಧಾನವಾಗದಂತೆ ಚಿತ್ರತಂಡ ಗಮನ ಹರಿಸಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೊತೆಗೂಡಿ ನಿರ್ದೇಶಿಸಿದ್ದು, ಚಿತ್ರ ಕಥೆಯನ್ನು ಮುದ್ದಾಗಿ ಹೆಣೆಯಲಾಗಿದೆ. ನಗು, ಅಳು ಜೊತೆಗೆ ಭಾವನೆಗಳಿಗೂ ಹೆಚ್ಚು ಒತ್ತು ಕೊಡಲಾಗಿದೆ. 

ಇನ್ನು ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನೀಡಿದ್ದು, ಶ್ರೀ ಕ್ರೇಜಿಮೈಂಡ್ಸ್ ಅವರ ಛಾಯಾಗ್ರಹಣವಿದೆ. ಲಡಾಕ್ ನಲ್ಲಿ ಶೂಟಿಂಗ್ ಮಾಡಲಾಗಿದ್ದು, ಮನಮೋಹಕ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಆದರೆ ಇದೀಗ ಮಿಲನಾ ನಾಗರಾಜ್ ಕಣ್ಣೀರು ಹಾಕಿದ್ದಾರೆ. ಅದಕ್ಕೆ ಕಾರಣ ಲವ್ ಮಾಕ್ಟೇಲ್ 2 ಚಿತ್ರದ ಡೈಲಾಗ್ ಗಳನ್ನು ಪುನೀತ್ ರಾಜ್ ಕುಮಾರ್ ಅವರ ಫೋಟೋ ಹಾಗೂ ವೀಡಿಯೋಗಳಿಗೆ ಸಿಂಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ.    

ಅಭಿಮಾನಿಗಳು ಮಾಡುವ ಈ  ಕೆಲಸ  ದಿಂದ ತುಂಬಾ ನೋವಾಗುತ್ತಿದೆ. ಒಂದೊಂದು ಡೈಲಾಗ್ ಕೂಡ ಅಪ್ಪು ಅವರಿಗೆ ಹೇಳಿ ಮಾಡಿಸಿದಂತಿದೆ. ಈ ಮಾತುಗಳನ್ನು ಕೇಳುತ್ತಿದ್ದರೆ ಕಣ್ಣೀರು ಬರುತ್ತದೆ. ಅಪ್ಪು ಅವರು ನಮ್ಮೊಂದಿಗೆ ಜೀವಂತವಾಗಿದ್ದಾರೆ ಎನ್ನುವಾಗ ಈ ವೀಡಿಯೋ ಹಾಗೂ ಫೋಟೋಗಳನ್ನು ನೋಡಿದರೆ ನೋವಾಗುತ್ತೆ ಎಂದು ಮಿಲನಾ ನಾಗರಾಜ್ ಕಣ್ಣೀರು ಹಾಕಿದ್ದಾರೆ.