Puneeth Rajkumar : ಅಪ್ಪು ತೀರಿದ ಹಿಂದಿನ ದಿನ ನಡೆದಿದ್ದೆ ಬೇರೆಯಂತೆ..! ಅವರು ಮೊದಲೇ ಹೋಗುವ ಬಗ್ಗೆ ಮಾತಾಡಿದ್ರಾ..?

By Infoflick Correspondent

Updated:Friday, June 17, 2022, 14:24[IST]

Puneeth Rajkumar :  ಅಪ್ಪು ತೀರಿದ ಹಿಂದಿನ ದಿನ ನಡೆದಿದ್ದೆ ಬೇರೆಯಂತೆ..! ಅವರು ಮೊದಲೇ ಹೋಗುವ ಬಗ್ಗೆ ಮಾತಾಡಿದ್ರಾ..?

ಸಿನಿಮಾ ನಟರು ಅಂದ್ರೆ ಹಾಗೇನೇ ಹೆಚ್ಚು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಪದೇಪದೇ ಸುದ್ದಿಯಾಗುತ್ತಲೇ ಇರುತ್ತವೆ. ಯಾರಿಗೂ ಗೊತ್ತಿರದ ಮತ್ತು ಕೆಲವೊಂದಿಷ್ಟು ಗೊತ್ತಿರುವ ವಿಚಾರಗಳು ಬಹುಬೇಗನೆ ಎಲ್ಲರಿಗೂ ಮುಟ್ಟುತ್ತವೆ, ಅದಕ್ಕೆ ಕಾರಣ ಸೋಶಿಯಲ್ ಮೀಡಿಯಾ ಎಂದು ಹೇಳಬಹುದು. ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ನಮ್ಮನ್ನಗಲಿ ಏಳು ತಿಂಗಳು ಮೇಲಾಗುತ್ತಿದೆ. ಇಂದಿಗೂ ಕೂಡ ಅವರ ಪ್ರೀತಿಯ ಅಭಿಮಾನಿಗಳು ಅವರ ಕುಟುಂಬಸ್ಥರು ನೋವಿನಲ್ಲಿಯೇ ಅವರ ನೆನಪಿನಲ್ಲಿ ಜೀವನ ಸಾಗಿಸುವಂತಾಗಿದೆ. ಪ್ರತಿಕ್ಷಣ ಅಪ್ಪು ಅಗಲಿಕೆ ಹೆಚ್ಚು ಮನಸ್ಸನ್ನು ಕುಟುಕುತಿದೆ ಎಂದು ಹೇಳಬಹುದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಐಕ್ಯ ಆಗುವ ಮುನ್ನ ಹಿಂದಿನ ರಾತ್ರಿ ಏನಾಗಿತ್ತು, ಎಲ್ಲಿದ್ದರೂ ಎಂಬ ಮಾಹಿತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.   

ಗುರುಕಿರಣ್ ಅವರ ಬರ್ತಡೆ ಪಾರ್ಟಿಯಲ್ಲಿದ್ದರೂ ಹಾಗೆ ಹಾಡನ್ನು ಕೂಡ ಹಾಡಿದ್ದರು ಎನ್ನಲಾಗಿ ಕೇಳಿ ಬಂದಿತ್ತು. ಆದರೆ ಅದು ಆಗಿಲ್ಲ, ಬೇರೆ ಹಳೆಯ ಕ್ಲಿಪ್ ಎನ್ನಲಾಗಿದ್ದು, ಕನ್ನಡದ ಹಿರಿಯ ನಟ ಕಾಮಿಡಿ ಕಲಾವಿದ ಪುನೀತ್ ಅವರ ಬಗ್ಗೆ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೌದು ಅಂದಿನ ರಾತ್ರಿ 12 ಗಂಟೆಯವರೆಗೆ ನಾನು ಪುನೀತ್ ಅವರೊಟ್ಟಿಗೆ ಇದ್ದೆ, ಗುರುಕಿರಣ್, ರಮೇಶ್ ಅರವಿಂದ್, ಹಾಗೂ ನಟಿ ತಾರಾ ಅವರು ಕೂಡ ಇದ್ದರು. ಪುನೀತ್ ಅಂದು ಹಾಡಿಲ್ಲ ಅದು ಹಳೆಯ ವಿಡಿಯೋ ಆಗಿದೆ.

ಅಂದು ಅವರ ನನ್ನನ್ನು ಅಲ್ಲಿ ನೋಡಿ ನೀವು ಬಿಡ್ರಿ ಯಾರದಾದರೂ ಧ್ವನಿಯನ್ನು ಮಾತನಾಡಿ, ಏನಾದರೂ ಮಾಡುತ್ತೀರಾ ಎಂಬುದಾಗಿ ಕಾಮಿಡಿ ಮಾಡಿದರು. ಕನ್ನಡ ಇಂಡಸ್ಟ್ರಿಯಲ್ಲಿ ಯಾರಾದರೂ ಹೋಗಿಬಿಟ್ಟರೆ ಅವರಿಗೆ ಸುಲಭವಾಗಿ ಡಬ್ ಮಾಡುವ ಕೌಶಲ್ಯ ನೀವು ಹೊಂದಿದ್ದೀರಿ ಎಂದು ಅಪ್ಪು ಈ ನಟನ ಜೊತೆ ಮಾತನಾಡಿದ್ದರಂತೆ. ಇದೆಲ್ಲಾ ನೋಡಿದರೆ ಅಪ್ಪು ಮೊದಲೇ ಹೋಗುವ ಮುನ್ಸೂಚನೆ ಕೊಟ್ಟಿದ್ದರ ಎಂದು ಎನಿಸುತ್ತದೆ. ಏನು ಮಾಡುವುದು ವಿಧಿ ಆಟವ ಬಲ್ಲವರು ಯಾರು.