Darshan : ದರ್ಶನ್ ಹೇಗೆ ಸುದೀಪ್ ಹೇಗೆ ಎಂದು ತಿಳಿಸಿದ ಮಿಮಿಕ್ರಿ ದಯಾನಂದ್..! ಹೇಳಿದ್ದು ಕೇಳಿ ಶಾಕ್ ಆಗ್ತೀರಾ

By Infoflick Correspondent

Updated:Tuesday, May 24, 2022, 17:19[IST]

Darshan :  ದರ್ಶನ್ ಹೇಗೆ ಸುದೀಪ್ ಹೇಗೆ ಎಂದು ತಿಳಿಸಿದ ಮಿಮಿಕ್ರಿ ದಯಾನಂದ್..! ಹೇಳಿದ್ದು ಕೇಳಿ ಶಾಕ್ ಆಗ್ತೀರಾ

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಕಾಮಿಡಿ ಕಲಾವಿದರು ಬಂದು ಹೋಗಿದ್ದಾರೆ. ಆದರೆ ತೊಂಬತ್ತರ ದಶಕದಿಂದಲೂ ಸಹ ಇಂದಿಗೂ ಹೆಚ್ಚು ಜನರಲ್ಲಿ ಅದೆಷ್ಟೋ ಕನ್ನಡದ ಕಾಮಿಡಿ ನಟರು ಉಳಿದಿದ್ದಾರೆ. ಹೌದು ಹೆಚ್ಚು ಜನಪ್ರಿಯತೆ ಹೊಂದಿದ್ದು ಅದೆಷ್ಟೊ ಕಾಮಿಡಿ ಕಲಾವಿದರು ಈಗಲೂ ಕೂಡ ಜನರಿಗೆ ಅಚ್ಚುಮೆಚ್ಚು ಎನ್ನಬಹುದು. ಹೌದು ಕನ್ನಡದ ಯುವ ತಂಡ ಧೀರನ್ ಎನ್ನುವ ಸಿನಿಮಾ ಇದೇ 27ನೇ ತಾರೀಕು ರಾಜ್ಯದಲ್ಲಿ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದೆ. ಇದೇ ಸಂದರ್ಶನದಲ್ಲಿ ಮಾತನಾಡಿದ ಇನ್ನೊಬ್ಬ ಕಾಮಿಡಿ ನಟ ಮಿಮಿಕ್ರಿ ಮಾಡಿ ತುಂಬಾ ಹೆಸರು ಮಾಡಿರುವ ಮಿಮಿಕ್ರಿ ದಯಾನಂದ್ ಎಂದು ಹೆಸರು ಪಡೆದಿರುವ ನಟ ದಯಾನಂದ್ ಅವರು ಕೆಲವೊಂದಿಷ್ಟು ಈಗ ವಿಚಾರಗಳನ್ನು ಹಂಚಿಕೊಂಡರು.   

ನಟ ದರ್ಶನ್ ಅವರ ಮುಂದಿನ ಸಿನಿಮಾದಲ್ಲಿ ನೀವು ಕೂಡ ಅಭಿನಯ ಮಾಡುತ್ತಿದ್ದೀರ ಎಂಬ ಮಾತು ಕೇಳಿ ಬರುತ್ತಿದೆ, ಅದಕ್ಕೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆ ಮಾಡಿದಾಗ, ನಟ ದಯಾನಂದ್, ಅವರು ಕರೆದರೆ ನಾವು ಹೋಗುತ್ತೇವೆ ಅಭಿನಯ ಮಾಡುತ್ತೇವೆ, ನಾವು ಒಂದು ರೀತಿ ಕಡ್ಲೆಕಾಯಿ ಮಾರುವವರ ಹಾಗೆ. ಯಾರು ಬಂದರೂ ನಮ್ಮ ಕಡ್ಲೆಕಾಯಿ ಕೊಡುತ್ತೇವೆ, ಎಲ್ಲಿಂದ ಬೇಕಾದರೂ ಕಡ್ಲೆಕಾಯಿಯನ್ನು ತೆಗೆದುಕೊಂಡು ಬರುತ್ತೇವೆ, ನಾವು ನಟ ಅಂಥ ನೋಡಲ್ಲ, ಕನ್ನಡ ಅಂಥ ನೋಡುತ್ತೇವೆ, ಹಾಗಾಗಿ ಯಾರು ಕರೆದರೂ ಸಿನಿಮಾದಲ್ಲಿ ಅಭಿನಯ ಮಾಡುತ್ತೇವೆ ಎಂದರು. ಬಳಿಕ ನಟ ದರ್ಶನ್ ಅವರು ನಮಗೆ ತುಂಬಾ ಆತ್ಮೀಯ, ಒಳ್ಳೆಯ ಮನುಷ್ಯ, ಆದರೆ ಅವರು ಇದ್ದದ್ದನ್ನು ಇದ್ದ ಹಾಗೆನೆ, ಎದೆಗೆ ಹೊಡೆದ ಹಾಗೇನೇ ಹೇಳುತ್ತಾರೆ, ಅದು ಕೆಲವರಿಗೆ ಬೇರೆಯ ರೀತಿ ಎನ್ನಿಸುತ್ತದೆ.  

ಅದು ಅವರ ಸ್ಟೈಲ್ ಏನು ಮಾಡಲಿಕ್ಕಾಗದು, ಏನನ್ನೂ ಮಾಡಲು ಆಗುವುದಿಲ್ಲ. ಅವರ ರೀತಿ ಇದ್ದವರು ಕೂಡ ಹಿಂದೆಯೂ ಟಾಪ್ ಆಗಿದ್ದಾರೆ. ಆಮೇಲೆ ನಟ ಸುದೀಪ್ ಅವರದು ಬೇರೆ ಸ್ಟೈಲ್, ನಾನು ಎಲ್ಲರ ಜೊತೆ ಮಿಂಗಲ್ ಆಗುತ್ತಾರೆ ಎನ್ನುತ್ತಾರೆ. ನಟ ಉಪೇಂದ್ರ ಅವರದು ಬೇರೆ ಸ್ಟೈಲ್. ಉಪೇಂದ್ರ ಅವರು ಪ್ರತಿಭಟನೆ ಮಾಡುತ್ತಾರೆ,  ಆದರೆ ಮಾತಿನಲ್ಲಿ ಅಲ್ಲ, ಸಿನಿಮಾದಲ್ಲಿ ಮಾಡುತ್ತಾರೆ.  ಎಲ್ಲರಲ್ಲಿಯೂ ಪ್ರತಿಭಟನೆ ಇರಬೇಕು ಸಾರ್ ಸುಮ್ಮನೆ ಎಲ್ಲರೂ ಎಲ್ಲದನ್ನು ಒಳಗೆ ಇಟ್ಟುಕೊಂಡು, ಎಲ್ಲರೆದುರು ಕೈಮುಗಿದುಕೊಂಡು ಓಡಾಡಿದರೆ ಅದು ಸರಿ ಇರುವುದಿಲ್ಲ. ಮನುಷ್ಯ ಸತ್ಯವನ್ನು ಹೇಳಬೇಕು, ಹಾಗಾಗಿ ದರ್ಶನ್ ಎದೆಗೆ ಹೊಡೆದಂಗೆ ಹೇಳಿದರೂ ನನಗೆ ಇಷ್ಟ ಎನ್ನುತ್ತಾರೆ ನಟ ದಯಾನಂದ್. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು..