ಮೋದಿ ಜನ್ಮದಿನಕ್ಕೆ ತಯಾರಾದ ಹೊಸ ತರಹದ ಥಾಲಿ ಇಷ್ಟು ನಿಮಿಷದಲ್ಲಿ ತಿಂದರೆ ಸಿಗಲಿದೆ ಈ ಎಲ್ಲಾ ಬಹುಮಾನ

By Infoflick Correspondent

Updated:Saturday, September 17, 2022, 11:54[IST]

ಮೋದಿ ಜನ್ಮದಿನಕ್ಕೆ ತಯಾರಾದ ಹೊಸ ತರಹದ ಥಾಲಿ ಇಷ್ಟು ನಿಮಿಷದಲ್ಲಿ ತಿಂದರೆ ಸಿಗಲಿದೆ ಈ ಎಲ್ಲಾ ಬಹುಮಾನ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಅವರ ದೆಹಲಿಯ ರೆಸ್ಟೋರೆಂಟ್‌ ಭರ್ಜರಿ ಭೋಜನ ಸ್ಪರ್ಧೆ ಏರ್ಪಡಿಸಿದೆ. ದೆಹಲಿಯ ರೆಸ್ಟೋರೆಂಟ್‌ ಈ ರೀತಿಯ ವಿಚಿತ್ರ ಸ್ಪರ್ಧೆ ಮೂಲಕ ಮೋದಿ ಅಭಿಮಾನಿಗಳಿಗೆ ವಿಶೇಷ ಬಹುಮಾನ ಘೋಷಿಸಿದೆ.

ವಿಶೇಷ ಏನಪ್ಪಾ ಅಂದರೆ ೫೬ ಭಿನ್ನ ಖಾದ್ಯಗಳ ಈ ಬೃಹತ್‌ ಥಾಲಿಯಲ್ಲಿ 40 ನಿಮಿಷದಲ್ಲಿ ಖಾಲಿ ಮಾಡಿದರೆ 8.5 ಲಕ್ಷ ರೂ. ಬಹುಮಾನ ಘೋಷಿಸಿದೆ. 
ಈ ಸ್ಪರ್ಧೆ ಸೆಪ್ಟೆಂಬರ್​​​ 17ರಿಂದ ಸೆ.26ರ ತನಕ ಇರಲಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಕೇದಾರನಾಥಕ್ಕೆ ತೆರಳಲು ಉಚಿತ ಟಿಕೆಟ್​​ ನೀಡಲಾಗುತ್ತದೆ. 

ಪ್ರಧಾನಿ ಮೋದಿ ಅವರನ್ನು 56 ಇಂಚಿನ ವಿಶಾಲ ಹೃದಯದವರು ಎಂದು ಹೇಳಲಾಗುತ್ತಿತ್ತು. ಇದರ ಪ್ರತಿರೂಪವಾಗಿ ಊಟಕ್ಕೆ 56 ಇಂಚ್​ ಮೋದಿಜಿ ಥಾಲಿ ಎಂಬ ಹೆಸರು ಇಡಲಾಗಿದೆ ಎಂದು ರೆಸ್ಟೋರೆಂಟ್​​​​ ಮಾಲೀಕ ಸುಮಿತ್​​​ ಕಲ್ರಾ ಈ ಘೋಷಣೆ ಮಾಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ನಮ್ಮ ಭಾರತದ ಹೆಮ್ಮೆ. ನಾನು ಸದಾ ಕಾಲಕ್ಕೂ ಅವರನ್ನು ಗೌರವಿಸುತ್ತೇನೆ. ಹೀಗಾಗಿ ಪ್ರಧಾನಿಯವರ ಈ ಬಾರಿಯ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಏನಾದರು ಮಾಡಲು ಮುಂದಾದೆವು. ಈ ವೇಳೆ ಮೋದಿ ಹೆಸರಿನಲ್ಲಿ ವಿಶೇಷ ತಿನಿಸುಗಳ ಥಾಲಿ ಮಾಡುವುದೆಂದು ನಿರ್ಧರಿಸಿದೆವು ಎಂದು ರೆಸ್ಟೋರೆಂಟ್​ನ್ ಮಾಲೀಕ ಸುಮಿತ್ ಕಲಾರ ತಿಳಿಸಿದ್ದಾರೆ.