ಜೋಗಿಯಂತೆಯೇ ಅಪ್ಪನ ಶವದ ಮುಂದೆ ಕುಣಿದ ಜುನೆಜಾ ಪುತ್ರ..! ನಿಜ ಕಣ್ಣೀರು ತರಿಸುತ್ತೆ ಈ ದೃಶ್ಯ

By Infoflick Correspondent

Updated:Tuesday, May 10, 2022, 16:45[IST]

ಜೋಗಿಯಂತೆಯೇ ಅಪ್ಪನ ಶವದ ಮುಂದೆ ಕುಣಿದ ಜುನೆಜಾ ಪುತ್ರ..! ನಿಜ ಕಣ್ಣೀರು ತರಿಸುತ್ತೆ ಈ ದೃಶ್ಯ

ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟ ಹಾಗೂ ಹಾಸ್ಯ ಕಲಾವಿದ, ಪೋಷಕ ನಟ ಮೋಹನ್ ಜುನೇಜ ಅವರು ನಿನ್ನೆ ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. ಹೌದು ನಟ ಮೋಹನ್ ಜುನೇಜಾ ಅವರು ಕನ್ನಡ ಸಿನಿಮಾರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನೂರಾರು ಸಿನಿಮಾ ಹಾಗೆ ಧಾರವಾಹಿಗಳು, ಜೊತೆಗೆ ನಾಟಕ ಹೀಗೆ ಐದುನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಮೋಹನ್ ಜುನೇಜ ಅವರ ಮದುಮಗನ ಪಾತ್ರ ಇಂದಿಗೂ ಮರೆಯುವಂತಿಲ್ಲ. ಮೋಹನ್ ಜುನೇಜಾ ಅವರು ಇತ್ತೀಚೆಗೆ ಕೆಜಿಎಫ್ ಭಾಗ-1 ಭಾಗ-2 ರಲ್ಲಿ ಹೆಚ್ಚು ಗಮನ ಸೆಳೆದಿದ್ದರು. ಮಾನ್ಸ್ಟರ್ ಮತ್ತು ಬ್ರಾಂಡ್ ಗ್ರಾವಿಟೇಶನಲ್ ಪವರ್ ಡೈಲಾಗ್ ಮೂಲಕ ಶಿಳ್ಳೆ ಹೊಡೆಯುವಂತೆ ನಟಿಸಿದ್ದರು.

ಕೆಜಿಎಫ್ ಮೂಲಕ ಇಡೀ ಪ್ರಪಂಚಕ್ಕೆ ಆನಂದ್ ಇಂಗಳಿಗೆ ರಾಕಿ ಬಾಯ್ ಪರಿಚಯ ಮಾಡಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿದ್ದ ಮೋಹನ್ ಜುನೆಜಾ ಅವರ ಪಾತ್ರವನ್ನು ನಿಜಕ್ಕೂ ಯಾರು ಮರೆಯುವುದಿಲ್ಲ. ನಟ ಮೋಹನ್ ಜುನೇಜಾ ಅವರು ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದರಂತೆ. ನಿನ್ನೆಯಷ್ಟೇ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೋಹನ್ ಜುನೇಜ ಅವರ ಸಾವಿಗೆ ಕಂಬನಿ ಮಿಡಿದ ಹೆಚ್ಚು ಕನ್ನಡಿಗರು ಅವರ ನಟನೆ ಜೊತೆ ಅವರನ್ನು ಮಿಸ್ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಕೆಲ ಕಲಾವಿದರು ಮೋಹನ್ ಜುನೇಜ ಅವರ ಅಂತಿಮ ದರ್ಶನ ಪಡೆದಿದ್ದು ನಟ ಮೋಹನ್ ಅವರ ಅಂತಿಮ ಕಾರ್ಯವನ್ನು ತಮ್ಮೇನಹಳ್ಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.  

ಹೌದು ಇದೀಗ ಇವರ ಪುತ್ರ ನಿನ್ನೆ ಅವರ ಮನೆಯ ಮುಂದೆ ಕುಣಿದಿದ್ದು, ಜೋಗಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಹೇಗೆ ನಗುನಗುತ್ತಾ ಅವರ ತಾಯಿ ಹೆಣದ ಮುಂದೆ ಕುಣಿದು ಕಳಿಸಿಕೊಟ್ಟಿದ್ದರೋ, ಜೊತೆಗೆ ಅದೇ ಜೋಗಿಯಲ್ಲಿ ಮೋಹನ್ ಕುಡಿದುಕೊಂಡು ಕುಣಿಯುತ್ತಾ ಕಳ್ಸಿ ಕೊಡಬೇಕು  ಎಂದಿದ್ದರು. ಅದ್ರಂತೆ ಇದೀಗ ಮೋಹನ್ ಜುನೇಜ ಅವರ ಪುತ್ರ ಕೂಡ ಸಾವಿನ ಮನೆಯ ಮುಂದೆ ಹೆಜ್ಜೆ ಹಾಕಿ, ಹೆಚ್ಚು ನೋವಿನಲ್ಲಿಯೇ ಈ ರೀತಿ ದುಃಖ ವ್ಯಕ್ತಪಡಿಸಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ. ಅಂದು ಜೋಗಿಯಲ್ಲಿ ಹೇಳಿದ ಡೈಲಾಗ್ ಅವರ ನಿಜ ಜೀವನಕ್ಕೆ ಬಂದಿತೆಂದರೆ ಇದೆಂಥಾ ಕಾಕತಾಳೀಯ ಅಲ್ವಾ. ನಿಜ ಎಂಥವರಿಗಾದರೂ ಕಣ್ಣೀರು ತರಿಸುವಂತಿದೆ ಈ ದೃಶ್ಯ. ಈ ವಿಡಿಯೋ ನೋಡಿ ಮೋಹನ್ ಜುನೇಜ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮಾಡಿ ಧನ್ಯವಾದಗಳು.. ( video credit : cini buzz )