ಭಟ್ರು ತಂಡ ಹಾರಿಸಿದ ಗಾಳಿಪಟ ನೋಡಿ ಸಿನಿರಸಿಕರು ಏನೆಂದರು ? ಇಲ್ಲಿದೆ ಸಿನಿಮಾದ ವಿಮರ್ಶೆ

By Infoflick Correspondent

Updated:Saturday, August 13, 2022, 20:50[IST]

ಭಟ್ರು ತಂಡ ಹಾರಿಸಿದ ಗಾಳಿಪಟ ನೋಡಿ ಸಿನಿರಸಿಕರು ಏನೆಂದರು ? ಇಲ್ಲಿದೆ ಸಿನಿಮಾದ ವಿಮರ್ಶೆ

ಸಿನಿಮಾ ಸೆಟ್ಟೇರಿದ ದಿನದಿಂದಲೂ ಕುತೂಹಲ ಉಳಿಸಿಕೊಂಡು ಬಂದ ಚಿತ್ರವೆಂದರೆ ಅದು “ಗಾಳಿಪಟ-2′.ಯೋಗರಾಜ್​ ಭಟ್​ ಮತ್ತು 'ಗೋಲ್ಡನ್​ ಸ್ಟಾರ್​' ಗಣೇಶ್​  ಅವರ ಕಾಂಬಿನೇಷನ್​ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ಆಗಸ್ಟ್​ 11ರ ರಾತ್ರಿಯೇ ಕೆಲವೆಡೆ ಫ್ಯಾನ್ಸ್​ ಶೋ ನಡೆದಿದೆ.

ಗಾಳಿಪಟ 2 ಸಿನಿಮಾ ಫೈನಲಿ ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನವೇ ಕರ್ನಾಟಕದ ಹಲವು ಥೀಯೇಟರ್ ಹೌಸ್ ಫುಲ್ ಆಗಿದೆ. ಗಣಿ ಮತ್ತು ಭಟ್ಟರ ಕಾಂಬಿನೇಶನ್ ಗೆ ಜನ ಫುಲ್ ಮಾರ್ಕ್ ಕೊಟ್ಟಾಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಗಾಳಿಪಟ 2 ಕಥೆ ಹೇಗಿದೆ..? ಕಥೆಯಲ್ಲಿ ಏನೆಲ್ಲಾ ಟ್ವಿಸ್ಟ್​ಗಳಿವೆ..? ಫ್ಯಾನ್ಸ್​ಗೆ ಇಷ್ಟ ಆಯ್ತಾ..? ಅನ್ನೋದರ ಕಂಪ್ಲೀಟ್​​​​ ರಿಪೋರ್ಟ್ ಇಲ್ಲಿದೆ..

ಮಧ್ಯ ರಾತ್ರಿ ಊರು ಬಿಡುವ ಮೂವರು ಯುವಕರ ಫನ್​, ಎಮೋಷನ್​​​, ಕಾಮಿಡಿ, ರೊಮ್ಯಾಂಟಿಕ್​ ಲವ್​​ ಸ್ಟೋರಿ​ ನೋಡಿ ಎಂಜಾಯ್​ ಮಾಡ್ತಿದ್ದಾರೆ ಜನ. ಗಣೇಶ್​​​​ ಆಯಕ್ಟಿಂಗ್, ಡ್ಯಾನ್ಸ್​, ಡೈಲಾಗ್ಸ್​​​ ಧಮಾಕ ನೋಡಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ.

14 ವರ್ಷಗಳ ಹಿಂದೆ ಯೋಗರಾಜ್ ಭಟ್ ಮತ್ತು 'ಗೋಲ್ಡನ್ ಸ್ಟಾರ್‌' ಗಣೇಶ್ ಕಾಂಬಿನೇಷನ್‌ನ 'ಗಾಳಿಪಟ' ಸಿನಿಮಾ ತೆರೆಕಂಡಿತ್ತು. ಮಧ್ಯ ರಾತ್ರಿ ಊರು ಬಿಡುವ ಮೂವರು ಯುವಕರು, ಮುಗಿಲ್‌ಪೇಟೆ ಸೇರಿಕೊಂಡು ಏನೆಲ್ಲ ಮಾಡುತ್ತಾರೆ ಅನ್ನೋದೇ ಚಿತ್ರದ ಕಥೆ ಆಗಿತ್ತು.  ಗಾಳಿಪಟ - 2 ನಲ್ಲಿ ಕನ್ನಡ ಕಲಿಯುವ ಸುದುದ್ದೇಶದಿಂದ ನೀರುಕೋಟೆ ಕಾಲೇಜಿಗೆ ಗಣಿ ಸೇರಿಕೊಂಡಿದ್ದಾನೆ. ಅವನೊಂದಿಗೆ ದಿಗಂತ್ ಹಾಗೂ ಭೂಷಣ್ ಪಾತ್ರದಲ್ಲಿ ಇದ್ದಾರೆ. ಗಣಿಗೆ ಅದೇ ಕಾಲೇಜಿನ ಹುಡುಗಿ ಶ್ವೇತಾ ಮೇಲೆ ಪ್ರೀತಿ ಉಂಟಾಗಿದೆ. ದಿಗಂತ್‌ಗೆ ಬ್ರೇಕ್‌ಅಪ್ ಮಾಡಿಕೊಂಡ ಮಾಜಿ ಗೆಳತಿ ಸಿಕ್ಕಿದ್ದಾಳೆ. ಅದೇ ಕಾಲೇಜಿನ ಟೀಚರ್‌ಮೇಲೆ ಭೂಷಣ್‌ಗೆ ಅಪಾರವಾದ ಪ್ರೀತಿ ಉಕ್ಕಿದೆ. ಹೀಗೆ ಸಾಗುವ ಈ ಮೂವರ ಬದುಕನ್ನ ಕನ್ನಡ ಮೇಷ್ಟ್ರ ಬದಲಾಯಿಸುತ್ತಾರೆ .

ಪ್ರೀತಿ, ಹಾಸ್ಯ, ಹಳೇನೆನಪು, ನೋವು, ತಾಯಿಯ ಬಾಂಧವ್ಯ, ಅಪ್ಪನ ಹುಡುಕಾಟ, ಒಂದು ಗುರಿಯಿಲ್ಲದ ಪಯಣ..! ಇವುಗಳೇ ಗಾಳಿಪಟ-2 ಸಿನಿಮಾದ ಮೈನ್ ಹೈಲೇಟ್ಸ್. ಕಥೆ ಸಾಗುತ್ತಾ ಸಾಗುತ್ತಾ ವಿದೇಶಕ್ಕೆ ಹಾರುತ್ತದೆ. ಅದಕ್ಕೆ ಕಾರಣವೇನು? ಆ ಮೇಷ್ಟ್ರಿಗೂ ಈ ಮೂವರು ಯುವಕರಿಗೂ ಏನು ಸಂಬಂಧ ಅನ್ನೋದೇ ಈ ಸಿನಿಮಾದ ಹೈಲೆಟ್​​​. ಇನ್ನು ಕ್ಲೈಮ್ಯಾಕ್ಸ್​​ ಸಿಕ್ಕಾಪಟ್ಟೆ ರೋಚಕವಾಗಿದೆ.

ಭಟ್ಟರ ಸಿನಿಮಾದಲ್ಲಿ ಸದಾ ಸಿಗುವ ತುಂಟತನ, ಸ್ನೇಹ, ಲವ್‌ ಆಯಟ್‌ ಫಸ್ಟ್‌ ಸೈಟ್‌, ವಿರಹ, ಕಣ್ಣೀರು ಎಲ್ಲವೂ ಇಲ್ಲಿದೆ. ಮೊದಲ ಭಾಗದ ಕಥೆಗೂ ಎರಡನೇ ಭಾಗದ ಕಥೆಗೆ ಸಂಬಂಧವಿಲ್ಲ. ಕೆಲ ಪಾತ್ರಗಳಷ್ಟೇ ತಮ್ಮ ಮೂಲ ಹೆಸರು, ಗುಣಲಕ್ಷಣಗಳನ್ನು ಉಳಿಸಿಕೊಂಡು ಇಲ್ಲಿಯೂ ಮುಂದುವರಿದಿವೆ. ಗಣೇಶ್​, ದಿಗಂತ್​, ಪವನ್​ ಕುಮಾರ್​ ಹೇಳಿರುವ ಸ್ನೇಹ ಮತ್ತು ಪ್ರೀತಿಯ ಕಥೆ ಜನರಿಗೆ ಇಷ್ಟ ಆಗಿದೆ. 'ಗಾಳಿಪಟ 2' ಚಿತ್ರ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಯೋಗರಾಜ್​ ಭಟ್ರು ಒಳ್ಳೆ ಸೆಂಟಿಮೆಂಟ್ ಇಟ್ಟಿದಾರೆ', 'ಕೊಟ್ಟ ಕಾಸಿಗೆ ಮೋಸ ಇಲ್ಲ', 'ದಿಗಂತ್​ ಕಾಮಿಡಿ ತುಂಬ ಚೆನ್ನಾಗಿದೆ', 'ಮೊದಲ ಪಾರ್ಟ್​ಗೆ ಹೋಲಿಕೆ ಮಾಡದೇ ನೋಡಬೇಕು' ಎಂಬಿತ್ಯಾದಿ ಅಭಿಪ್ರಾಯ  ಕೇಳಿಬಂದಿದೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ಸಖತ್ ಮಜಾ ಕೊಟ್ಟಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾತ್ರ ಬೇರೇ ಲೆವೆಲ್ಲಿಗೆ ಇದೆ. ಭೂಷಣ್ ಪಾತ್ರದಲ್ಲಿ ಕಾಣಿಡಿಕೊಂಡ ಪವನ್ ಇನ್ನೋಸೆಂಟ್ ಲುಕ್ ಮಾತ್ರ ಆಹಾ ಅನ್ನುವಂತಿದೆ.