ಅನುಕೂಲಕ್ಕೆ ತಕ್ಕಂತೆ ಬೇಡಿಕೆ ಸೂಕ್ತವಲ್ಲ ಎಂದು ನಟ ಪುನೀತ್ ಬಗ್ಗೆ ಮಾತಾಡಿದ ಚಂದ್ರು..! ಹೇಳಿದ್ದೇನು..?

Updated: Sunday, April 4, 2021, 12:34 [IST]

ಪುನೀತ್ ಅವರಾಗಲಿ, ಬೇರೆ ಕಲಾವಿದರು ಆಗಲಿ ಅನುಕೂಲಕ್ಕೆ ತಕ್ಕಂತೆ ಬೇಡಿಕೆ ಇಡುವುದು ಸೂಕ್ತವಲ್ಲ, ನಿಜ ಸಿನಿಮಾದಲ್ಲಿ ತೊಂದರೆಯಾಗುತ್ತೆ, ಹಾಗೇನೆ ಅನಾಹುತವಾಗುತ್ತದೆ, ಆದರೆ ಜೀವನ್ಮರಣದ ಪ್ರಶ್ನೆ ಇದ್ದಂತಹ ಸಮಯದಲ್ಲಿ ಸರ್ಕಾರದ ಕಟ್ಟುನಿಟ್ಟಿನ ಕಾನೂನು ಎಲ್ಲರಿಗೂ ಅಪ್ಲೈ ಆಗುತ್ತದೆ' ಎಂಬುದಾಗಿ ಮಾಧ್ಯಮ ಮೂಲಕ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿದರು. ಹೌದು ಮೊನ್ನೆ ರಾಜ್ಯ ಸರ್ಕಾರ ತೆಗೆದುಕೊಂಡ ಸಿನಿಮಾ ಥಿಯೇಟರ್ ಒಳಗಿನ ಪ್ರವೇಶ 50 ಪರ್ಸೆಂಟ್ ಸೀಟಿನ ಬರ್ತಿ ವಿಚಾರವಾಗಿ ಮುಖ್ಯಮಂತ್ರಿ ಚಂದ್ರು ಅವರು ಹೇಳಿದ್ದು ಹೀಗಿದೆ ನೋಡಿ..    

'ಕರೋನಾದಿಂದ ಇಡೀ ದೇಶವೇ ಸಂದಿಗ್ಧ ಪರಿಸ್ಥಿತಿಯಲ್ಲಿ ಇದೆ. ಬೇರೆ ಬೇರೆ ರಾಜ್ಯದಲ್ಲಿ ಯಾವುದೋ ಕಾರಣಕ್ಕೆ ಯಾವುದೋ ನಿರ್ಧಾರ ತೆಗೆದುಕೊಳ್ಳುತ್ತಾರೆ.  ಸಾರ್ವತ್ರಿಕವಾಗಿ ಜನರ ಜೀವನದ ಜೊತೆ ಆಟ ಆಡುವುದು ಸೂಕ್ತವಲ್ಲ, ಇದೀಗ 50 ಪರ್ಸೆಂಟ್ 50 % ಏನೇ ಮಾಡಲಿ ಎಲ್ಲಾ ಸಾರ್ವತ್ರಿಕವಾಗಿರಬೇಕು ಎಂದು ಮಾತನಾಡಿದರು. ಹೌದು ಇದೀಗ ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಾಗ ಸಿನಿಮಾರಂಗದವರಿಗೊಂದು, ರಂಗಭೂಮಿ, ಅವರಿಗೊಂದು, ಮದುವೆ ಮಾಡುವವರಿಗೊಂದು, ಮೆರವಣಿಗೆ ಮಾಡುವವರಿಗೊಂದು, ನಿಯಮ ಕೊಡುವುದು ಸಂವಿಧಾನಾತ್ಮಕ ಕ್ರಮವಲ್ಲ. ನಾನು ಸಿನಿಮಾರಂಗದವನೇ ಆದರೂ ಸಹ ನಮಗೆಷ್ಟೇ ಕಷ್ಟ ಆದರೂ ಜನರ ಪ್ರಾಬ್ಲಮ್ ಮುಖ್ಯವಾಗಿರುತ್ತದೆ.    

ಇನ್ನು ಸಿನಿಮಾದಲ್ಲಿ ಬಹಳಷ್ಟು ಜನ ನಿರ್ಮಾಪಕರಿಗೆ ಅಪಾಯ ಆಗುತ್ತದೆ, ಅದು ನನಗೂ ಗೊತ್ತು. ಹಾಗಂತ ಜೀವವೇ ಹೋಗೋ ಪರಸ್ಥಿತಿ ಇದ್ದಾಗ, ಸರ್ಕಾರ ಇನ್ಯಾರದ್ದೋ ಒತ್ತಡಕ್ಕೆ ಮಣಿದು ದ್ವಂದ್ವ ನಿರ್ಧಾರ ತೆಗೆದುಕೊಳ್ಳಬಾರದು. ಕೊರೋನಾದಿಂದ  ತಪ್ಪಿಸಿಕೊಳ್ಳಬೇಕಾದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ನಾವು ತೆಗೆದುಕೊಳ್ಳಬೇಕು. ನಾವು ಎಚ್ಚರಿಕೆಯಿಂದ ಇರಬೇಕು, ಸರ್ಕಾರ ವಿಚಿತ್ರ ರೀತಿಯನ್ನು ಮಾಡಬಾರದು ಮಾಡಿದರೆ, ಒಂದೇ ನಿರ್ಧಾರ ಮಾಡಬೇಕು. ಸಿನಿಮಾಗೆ ಹಂಡ್ರೆಡ್ ಪರ್ಸೆಂಟ್ ಬಿಟ್ರೆ, ಎಲ್ಲದಕ್ಕೂ ಬಿಡಿ. ಸಿನಿಮಾದವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ, ಒಬ್ಬೊಬ್ಬರ ಅನುಕೂಲಕ್ಕೊ, ಒಬ್ಬ ನಿರ್ಮಾಪಕರ ಅನುಕೂಲಕ್ಕೋ, ಒಂದು ಸಿನಿಮಾ ಅನುಕೂಲಕ್ಕೊ ನಿಯಮ ಮಾಡುವುದು ಸೂಕ್ತವಲ್ಲ. ಪ್ರಾಣ ಉಳಿಸಿ ಎಂದು ಮುಖ್ಯಮಂತ್ರಿ ಚಂದ್ರು ಅವರು ಮಾಧ್ಯಮ ಮುಂದೆ ಮಾತನಾಡಿ ಮನವಿ ಮಾಡಿಕೊಂಡರು...