ನಟ ಸತೀಶ್ ವಜ್ರ ಬರ್ಬರ ಕೊಲೆ! ಮಂಡ್ಯ ಮೂಲದ ಯುವನಟ ಸತೀಶ್ ವಜ್ರಗೆ ನಿಜಕ್ಕೂ ಏನಾಯ್ತು..!

By Infoflick Correspondent

Updated:Saturday, June 18, 2022, 21:08[IST]

ನಟ ಸತೀಶ್ ವಜ್ರ ಬರ್ಬರ ಕೊಲೆ! ಮಂಡ್ಯ ಮೂಲದ ಯುವನಟ ಸತೀಶ್ ವಜ್ರಗೆ ನಿಜಕ್ಕೂ ಏನಾಯ್ತು..!

ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದ ನಟ ಸತೀಶ್ ವಜ್ರ (Satish Vajra) (36) ಅವರನ್ನು ಕೊಲೆ ಮಾಡಲಾಗಿದೆ. ಸತೀಶ್ ಕನ್ನಡದ ಲಗೋರಿ ಚಿತ್ರದಲ್ಲಿ ನಟಿಸಿದ್ದರು. ಇವರು ನಟ ದರ್ಶನ್‌ ಹಾಗೂ ಪ್ರಜ್ವಲ್ ದೇವರಾಜ್‌ರ ಅಭಿಮಾನಿಯೂ ಆಗಿದ್ದರು. ನಟನಾಗಿ ಚಂದನವನದಲ್ಲಿ ಮಿಂಚಬೇಕು ಎಂಬ ಆಸೆ ಹೊಂದಿದ್ದ ಸತೀಶ್ ವಜ್ರ ಕೆಲವು ಕಿರು ಚಿತ್ರಗಳಲ್ಲಿ ನಟಿಸಿದ್ದರು.

ಸತೀಶ್ ಅವರ ಬಾಮೈದನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 7 ತಿಂಗಳ ಹಿಂದೆ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಸಹೋದರಿಯ ಹತ್ಯೆಗೆ ಸತೀಶ್ ಬಾಮೈದ ಸೇಡು ತೀರಿಸಿಕೊಂಡಿರುವ ಶಂಕೆ ಇದೆ. ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸತೀಶ್​ ನಿನ್ನೆ ರಾತ್ರಿ ತಡವಾಗಿ ಮನೆಗೆ ಬಂದಿದ್ದ,  ಬೆಳಿಗ್ಗೆ ಮನೆ ಮುಂಭಾಗದ ಆವರಣ ಕ್ಲೀನ್ ಮಾಡುವಾಗ ರಕ್ತದ ಕಲೆ ನೋಡಿದ್ದ ಮನೆ ಮಾಲೀಕ, ಸಿಸಿ ಕ್ಯಾಮೆರಾ ಚೆಕ್ ಮಾಡಿದಾಗ 12:30ರ ಸುಮಾರಿಗೆ ಇಬ್ಬರು ಅಪರಿಚಿತರು ಒಳ ಹೋಗಿರೋದು ಪತ್ತೆಯಾಗಿದೆ. ಸತೀಶ್ ಬೈಕ್​ನನ್ನು ಸಹ ಹಂತಕರೇ ತೆಗೆದುಕೊಂಡು ಹೋಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ‌ ನೀಡಿದ್ದ ಮನೆ ಮಾಲೀಕ ಹೇಮಂತ್, ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸ್ತಿದ್ದಾರೆ.

ಯಾರೋ ಪರಿಚಯ ಇರೋರೆ ಬಂದು ಕೊಲೆ ಮಾಡಿದ್ದಾರೆ ಎಂದು ಮನೆ ಮಾಲೀಕ ಹೇಮಂತ್​ ಕುಮಾರ್​ಅನುಮಾನ ವ್ಯಕ್ತಪಡಿಸಿದ್ದಾರೆ. ಡೋರ್ ಹೊಡೆಯೋದು ಏನೂ ಮಾಡಿಲ್ಲ. ನಂಬಿಸಿ ಈತರ ಮಾಡಿ ಹೋಗಿದ್ದಾರೆ ಎಂದು ಮನೆ ಮಾಲೀಕ ಹೇಮಂತ್ ಹೇಳಿಕೆ.

ನಟ ಸತೀಶ್ ವಜ್ರ​​ ಅವರು ತಮ್ಮ ಮನೆಯಲ್ಲಿ ಇದ್ದರು. ಈ ವೇಳೆ ಮನೆಗೆ ಬಂದ ಬಾಮೈದನು ಸತೀಶ್​ಗೆ ಚಾಕುವಿನಿಂದ ಇರಿದಿದ್ದಾನೆ. ಸತೀಶ್​ ದೇಹಕ್ಕೆ ಹಲವು ಬಾರಿ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ರಸ್ರಾವ ಉಂಟಾಗಿ ಸತೀಶ್ ವಜ್ರ ಮೃತಪಟ್ಟಿದ್ದಾರೆ. ಎಂಬ ಅನುಮಾನಗಳಿವೆ.

ಸತೀಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ, ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.