Nag Chaitanya : ಕನ್ನಡ ಚಿತ್ರರಂಗವನ್ನು ಎಲ್ಲರೂ ತಿರುಗಿ ನೋಡುವಂತಾಗಿದೆ ಎಂದ ನಾಗಚೈತನ್ಯ: ಯಾಕೆ ನೋಡಿ..

By Infoflick Correspondent

Updated:Sunday, June 26, 2022, 23:44[IST]

Nag Chaitanya :  ಕನ್ನಡ ಚಿತ್ರರಂಗವನ್ನು ಎಲ್ಲರೂ ತಿರುಗಿ ನೋಡುವಂತಾಗಿದೆ ಎಂದ ನಾಗಚೈತನ್ಯ: ಯಾಕೆ ನೋಡಿ..

ಟಾಲಿವುಡ್ ನಟ ನಾಗಚೈತನ್ಯ ಅಕ್ಕಿನೇನಿ ಬೆಂಗಳೂರಿಗೆ ಆಗಮಿಸಿದ್ದು, ಕನ್ನಡ ಫಿಲ್ಮ್ ಇಂಡಸ್ಟ್ರಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್ ಎಂದು ಹೇಳಿರುವ ನಾಗಚೈತನ್ಯ ಅವರು ಕನ್ನಡ ಸಿನಿಮಾಗಳನ್ನು ಹೊಗಳಿದ್ದಾರೆ. ಸಮಂತಾ ಜೊತೆಗೆ ಡಿವೋರ್ಸ್ ಪಡೆದ ಮೇಲೆ ಹೆಚ್ಚು ಮಾಧ್ಯಮಗಳಿಗೆ ಕಾಣಿಸಿಕೊಳ್ಳದ ನಾಗಚೈತನ್ಯ ಅವರು, ನಟಿ ಶೋಭಿತಾ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ನಡುವೆ ಬೆಂಗಳೂರಿಗೆ ಬಂದಾಗ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ.   

ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿ, ಅವರ ದೊಡ್ಡ ಫ್ಯಾನ್ ನಾನು. ನನಗೆ ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್ ತುಂಬಾ ಇಷ್ಟ. ಅವರಂತೆ ಡ್ಯಾನ್ಸ್ ಮಾಡಲು ನಮ್ಯಾರಿಂದಲೂ ಆಗುವುದಿಲ್ಲ. ಪುನೀತ್ ಸರ್ ಒಳ್ಳೆಯ ಡ್ಯಾನ್ಸರ್. ಪುನೀತ್ ಸರ್ ಅವರ ಡ್ಯಾನ್ಸ್ ನನಗೆ ಇನ್ಸ್ ಪಿರೇಷನ್ ಎಂದು ನಾಗಚೈತನ್ಯ ಹೇಳಿದ್ದಾರೆ.   ಅಲ್ಲದೇ ಈ ವೇಳೆ ಬೆಂಗಳೂರಿನ ಬಗ್ಗೆಯೂ ಮಾತನಾಡಿದ್ದು, ಬೆಂಗಳೂರು ಎಂದರೇನೇ ಒಂದು ಎನರ್ಜಿ. ಇಲ್ಲಿರುವ ಜನರೆಲ್ಲಾ ಸದಾ ಒಂದಲ್ಲ ಒಂದು ವಿಚಾರಕ್ಕೆ ತುಡಿಯುತ್ತಿರುತ್ತಾರೆ. ಯಾವಾಗಲೂ ಆಕ್ಟೀವ್ ಆಗಿರುತ್ತಾರೆ ಎಂದು ಹೇಳಿದ್ದಾರೆ. 

ಇನ್ನು ಕನ್ನಡ ಫಿಲ್ಮ ಇಂಡಸ್ಟ್ರಿ ಬಗ್ಗೆ ಮಾತನಾಡಿರುವ ನಾಗಚೈತನ್ಯ ಅವರು, ಇತ್ತೀಚೆಗೆ ಕೆಜಿಎಫ್ 2 ಚಿತ್ರ ನೋಡಿದ್ದು, ಸಿನಿಮಾ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಪ್ರತಿ ಬಾರಿ ತಮ್ಮ ಸಿನಿಮಾಗಳು ರಿಲೀಸ್ ಆದಾಗಲೆಲ್ಲಾ ಬೆಂಗಳೂರಿನಿಂದ ತುಂಬಾ ಒಳ್ಳೆಯ ರೆಸ್ಪಾನ್ಸ್ ಬರುತ್ತದೆ. ಇದು ನಮ್ಮನ್ನು ಇನ್ನಷ್ಟು ಹುರಿದುಂಬಿಸುತ್ತದೆ ಎಂದು ಹೇಳಿದ್ದಾರೆ. ಇನ್ನು ನಾಗಚೈತನ್ಯ ಅವರಿಗೆ ಕನ್ನಡದ ಹಲವು ಚಿತ್ರಗಳು ಇಷ್ಟವಾಗಿದ್ದು, ಅದರಲ್ಲಿ ಲೂಸಿಯಾ ಚಿತ್ರ ಸೂಪರ್. ತಮಗೆ ಲೂಸಿಯಾ ಚಿತ್ರ ತುಂಬಾ ಇಷ್ಟ ಎಂದು ಹೇಳಿದ್ದಾರೆ.