ಸಪ್ತಪದಿ ತುಳಿದ ನಾಗಿಣಿ-2 ಧಾರಾವಾಹಿಯ ತ್ರಿಶೂಲ್ ಅಲಿಯಾಸ್ ನಿನಾದ್ ಹರಿತ್ಸ

By Infoflick Correspondent

Updated:Friday, May 27, 2022, 07:56[IST]

ಸಪ್ತಪದಿ ತುಳಿದ ನಾಗಿಣಿ-2 ಧಾರಾವಾಹಿಯ ತ್ರಿಶೂಲ್ ಅಲಿಯಾಸ್ ನಿನಾದ್ ಹರಿತ್ಸ

ಮೇ ತಿಂಗಳೆಂದರೆನೇ ಮದುವೆಯ ತಿಂಗಳು ಎಂದರ್ಥ. ಎಲ್ಲಿ ನೋಡಿದರೂ ಮದುವೆ.. ಮದುವೆ.. ಮದುವೆಗಳೇ. ಯಾವ ಸಂಬಂಧಿಕರು, ಸ್ನೇಹಿತರು, ಸೆಲಬ್ರಿಟಿಗಳು ಎಲ್ಲರ ಮನೆಯಲ್ಲೂ ಮದುವೆಯ ಸಂಭ್ರಮವೇ. ಈ ತಿಂಗಳು ಸೆಲಬ್ರಿಟಿಗಳ ಮದುವೆಗಳು ಸಾಲು ಸಾಲಾಗಿ ನಡೆದಿವೆ. ನಟಿಯರಾದ ನಿಕ್ಕಿ ಗಲ್ರಾನಿ, ರಶ್ಮಿ ಪ್ರಭಾಕರ್, ಐಶ್ವರ್ಯ ಸಾಲಿಮಠ್, ದೀಪಾ ಜಗದೀಶ್ ಸೇರಿದಂತೆ ಹಲವು ಸಪ್ತಪದಿ ತುಳಿದಿದ್ದಾರೆ. ಇದೀಗ ಈ ಸಾಲಿಗೆ ನಾಗಿಣಿ ಧಾರಾವಾಹಿಯ ನಿನಾದ್ ಹರಿತ್ಸ ಕೂಡ ಸೇರಿಕೊಂಡಿದ್ದಾರೆ.     

ನಾಗಿಣಿ 2 ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರದ ಮೂಲಕ ಜನಮನ ಗೆದ್ದಿರುವ ನಟ ನಿನಾದ್ ಹರಿತ್ಸ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಿನಾದ್, ಅರಮನೆ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ. ತಮ್ಮ ಬಹುಕಾಲದ ಸ್ನೇಹಿತೆಯಾದ ರಮ್ಯ ಎಂಬುವರನ್ನು ನಿನಾದ್ ಅವರು ಮದುವೆಯಾಗಿದ್ದಾರೆ. ಫೆಬ್ರವರಿ 7 ರಂದು ನಿನಾದ್ ಅವರು ತಮ್ಮ ಪ್ರೇಯಸಿ ಜೊತೆಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಇದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು.   

ಇನ್ನು ನಿನಾದ್ ಅವರ ಮದುವೆ ಮೇ 20 ರಂದು ಬೆಂಗಳೂರಿನಲ್ಲಿ ನೆರವೇರಿತು. ವಿವಾಹ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಕೆಲ ಕಲಾವಿದರು ಕೂಡ ಭಾಗಿಯಾಗಿದ್ದರು. ಮದುವೆ ಸಮಾರಂಭಕ್ಕೆ ನಟಿ ನಮ್ರತಾ ಗೌಡ ಸೇರಿದಂತೆ ನಾಗಿಣಿ ಧಾರಾವಾಹಿಯ ತಂಡ ಕೂಡ ಆಗಮಿಸಿತ್ತು. ನವ ಜೋಡಿಗೆ ಗಣ್ಯರು ಶುಭಹಾರೈಸಿದ್ದಾರೆ. ಮದುವೆಯಲ್ಲಿ ನಿನಾದ್ ಹಾಗೂ ರಮ್ಯ ಇಬ್ಬರೂ ಕೂಡ ಗ್ರ್ಯಾಂಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿನಾದ್ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.( video credit : ma star kannada tv)