Namitha : ಕೃಷ್ಣ ಜನ್ಮಾಷ್ಟಮಿ ದಿನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ನಮಿತಾ..! ಇಲ್ಲಿವೆ ಫೋಟೋಸ್

By Infoflick Correspondent

Updated:Sunday, August 21, 2022, 19:04[IST]

Namitha : ಕೃಷ್ಣ ಜನ್ಮಾಷ್ಟಮಿ ದಿನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ನಮಿತಾ..! ಇಲ್ಲಿವೆ ಫೋಟೋಸ್

ಬಹುಭಾಷಾ ನಟಿ ನಮಿತಾ ಇದೀಗ ಒಂದು ಸಂತಸದ ಸುದ್ದಿಯನ್ನು ಅವರ ಅಭಿಮಾನಿಗಳಿಗೆ ಮುಟ್ಟಿಸಿದ್ದಾರೆ. ಹೌದು ನಟಿ ನಮಿತಾ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ದಿನದಂದೇ ಅಂದರೆ ನಿನ್ನೆ ಶುಕ್ರವಾರವೇ ಎರಡು ಮುದ್ದಾದ ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಸ್ವತಹ ನಮಿತಾ ಅವರೇ ಅವರ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಖಾತೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಹೌದು, ಹರೇ ಕೃಷ್ಣ ಈ ಶುಭ ದಿನದಂದು ನಾನು ಒಂದು ಸಿಹಿ ಸುದ್ದಿಯ ನಿಮಗಾಗಿ ತಂದಿದ್ದೇನೆ. ನಾವು ಅವಳಿ ಜವಳಿ ಗಂಡು ಮಕ್ಕಳನ್ನು ಈ ಜಗತ್ತಿಗೆ ಪರಿಚಯಿಸಿದ್ದೇವೆ. ಇಲ್ಲಿಯವರೆಗೂ ನೀವು ಹೇಗೆ ನನಗೆ ಪ್ರೀತಿ ತೋರಿದಿರೋ ಅದೇ ರೀತಿ ಇನ್ನು ಮುಂದೆ ನನ್ನ ಮಕ್ಕಳಿಗೂ ಪ್ರೀತಿ ಪ್ರೇಮವನ್ನು ನಿಮ್ಮ ಆಶೀರ್ವಾದವನ್ನು ಅವರಿಗೆ ನೀಡುತ್ತೀರಿ ಅಂದುಕೊಂಡಿದ್ದೇನೆ.   

ನನ್ನ ಗರ್ಭಾವಸ್ಥೆಯ ಪ್ರಯಾಣ ರೇಲಾ ಆಸ್ಪತ್ರೆಯಲ್ಲಿ ಜರಗಿತು. ಅಲ್ಲಿಯ ಪ್ರತಿಯೊಬ್ಬ ಸಿಬ್ಬಂದಿ ಮತ್ತು ಆಸ್ಪತ್ರೆ ವರ್ಗದವರು ವೈದ್ಯರು ತುಂಬಾನೇ ಸಹಾಯ ಮಾಡಿದ್ದಾರೆ. ಹಾಗೆ ತಾಯಿತನದ ವಿಚಾರವಾಗಿ ಹೆಚ್ಚು ಮಾರ್ಗದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚು ಮಾರ್ಗದರ್ಶನ ನೀಡಿದ ಡಾ. ಭುವನೇಶ್ವರಿ ಮತ್ತು ಅವರ ತಂಡಕ್ಕೆ ತುಂಬಾ ಧನ್ಯವಾದಗಳು. ನನ್ನ ಹೆರಿಗೆಗೆ ಸಹಾಯ ಮಾಡಿದ್ದಾರೆ ಅವರಿಗೂ ನನ್ನ ಧನ್ಯವಾದಗಳು ಎಂದು ಆಸ್ಪತ್ರೆಗೂ ಕೂಡ ಧನ್ಯವಾದಗಳು ಎಂದರು ನಮಿತಾ. ಹೌದು ಈ ಮೂಲಕ ನಮಿತಾ ಅವರು ತಾಯಿಯಾಗಿದ್ದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದಂದೆ ಎರಡು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡಿ ಖುಷಿಯ ವಿಚಾರ ವ್ಯಕ್ತಪಡಿಸಿದ್ದಾರೆ. ಅವರ ತಾಯ್ತನವನ್ನು ಇದೀಗ ಸವಿಯುತ್ತಿರುವ ನಮಿತಾ 2017ರಲ್ಲಿ ನಟ ಮತ್ತು ಉದ್ಯಮಿಯಾಗಿದ್ದ ವೀರೇಂದ್ರ ಚೌದರಿಯವರ ಜೊತೆ ದಾಂಪತ್ಯ ಆರಂಭಿಸಿದ್ದರು. 

ಅವರ ಕುಟುಂಬಸ್ಥರ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಮಿತಾ ಇವರನ್ನು ಕೈ ಹಿಡಿದಿದ್ದು ಮೊನ್ನೆ ಇದೆ ವರ್ಷ ಮೇ ಒಂದರಲಿ ತಾವು ತಾಯಿ ಆಗುತ್ತಿರುವ ವಿಷಯವನ್ನು ಹೇಳಿ ಗಮನ ಸೆಳೆದಿದ್ದರು. ಹೌದು ನಟಿ ನಮಿತಾ 2002ರಲ್ಲಿ ಸಿನಿ ರಂಗಕ್ಕೆ ಪಾದರ್ಪಣೆ ಮಾಡಿದ್ದು ಕನ್ನಡ ಮಲಯಾಳಂ ಹಾಗೆ ತೆಲುಗು ತಮಿಳು ಚಿತ್ರದಲ್ಲಿಯೂ ನಟಿಸಿ ಒಟ್ಟು 40 ಚಿತ್ರದಲ್ಲಿ ಅಭಿನಯ ಮಾಡಿ ಗೆದ್ದಿದ್ದಾರೆ. ಇದೀಗ ಅವರ ಆನ್ ಸ್ಕ್ರೀನ್ ಕಡಿಮೆ ಆಗಿದೆ. ಅವರ ಮುಂದಿನ ಜೀವನ ಮತ್ತು ಅವರ ಮಕ್ಕಳ ಆರೈಕೆಯಲ್ಲಿ ಇನ್ನು ಹೆಚ್ಚು ಸಮಯ ಕಳೆಯಲಿ ನಮಿತಾ, ಮತ್ತು ಅವರ ಕುಟುಂಬ ಚೆನ್ನಾಗಿರಲಿ ಎಂದು ಹಾರೈಸೋಣ ಧನ್ಯವಾದಗಳು...