Namrata Gowda : ಕಾಶ್ಮೀರದಲ್ಲಿ ನಾಗಿಣಿ ನಟಿ ನಮೃತ ಗೌಡ..! ಮಾಡಿದ್ಯೇನು ನೋಡಿ

By Infoflick Correspondent

Updated:Monday, July 25, 2022, 16:27[IST]

Namrata Gowda : ಕಾಶ್ಮೀರದಲ್ಲಿ ನಾಗಿಣಿ ನಟಿ  ನಮೃತ  ಗೌಡ..!  ಮಾಡಿದ್ಯೇನು ನೋಡಿ

ಕನ್ನಡ ಕಿರುತೆರೆಯಲ್ಲಿ ಹೆಚ್ಚು ಸಕ್ರಿಯ ಆಗಿರುವ ನಟಿ ನಮೃತ ಗೌಡ (Namrata Gowda )ಅವರು ಪುಟ್ಟ ಗೌರಿ ಸೀರಿಯಲ್ ನಲ್ಲಿ ಮಿಂಚಿದ ನಟಿ. ಮಹೇಶ್ ಪಾತ್ರಧಾರಿ ನಟ ರಕ್ಷ್ ಅವರ ಲವ್ವರ್ ಪಾತ್ರದಲ್ಲಿ ಹಿಮಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದವರು ನಮೃತ ಗೌಡ. ಹೌದು ಈಗ ನಟಿ ನಮ್ರತಾ ಗೌಡ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಎರಡು ಸೀರಿಯಲ್ ನಲ್ಲಿ ಭರ್ಜರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆ ಸೀರಿಯಲ್ ಕೂಡ ಕೊನೆಯ ಹಂತಕ್ಕೆ ಬಂದಿದ್ದು ಸಖತ್ ಕೌತುಕದಿಂದ ಸೀರಿಯಲ್ ಮೂಡಿ ಬರುತ್ತಿದೆ. ಹೀಗಿರುವಾಗ ನಟಿ ಅಮೃತ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟಿವ್ ಆಗಿದ್ದು, ಅವರ ಅಭಿಮಾನಿಗಳು ಆಗಾಗ ಇವರ ಪ್ರಯಾಣದ ಬಗ್ಗೆ ಕೇಳುತ್ತಲೆ ಇರುತ್ತಾರಂತೆ. ವ್ಲಾಗ್ ಮಾಡಿ ವಿಡಿಯೋಗಳನ್ನು ಬಿಡಿ ಎಂದು ಕೇಳಿದರಂತೆ.

ಅದೇ ಪ್ರಕಾರ ನಟಿ ನಮೃತ ಗೌಡ ಅವರು ಥೈಲ್ಯಾಂಡ್ ಗೆ ತೆರಳಿದ್ದು ಅಲ್ಲಿಯ ಪ್ರವಾಸದ ಮೊದಲನೇ ವಿಡಿಯೋವನ್ನು ಹಂಚಿಕೊಂಡಿದ್ದರು. ಹಾಗೇ ಎರಡನೇ ಭಾಗದ ವಿಡಿಯೋ ಬಿಡುವ ಮುನ್ನ ಕಾಶ್ಮೀರದ ವಿಡಿಯೋವನ್ನ ಅಭಿಮಾನಿಗಳ ಮೇರೆಗೆ ನಮೃತ ಗೌಡ ಅವರು ಈಗ ವಿಡಿಯೋವನ್ನು ಹರಿ ಬಿಟ್ಟಿದ್ದಾರೆ ಎನ್ನಲಾಗಿದೆ.   

ಅವರ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿರುವ 19 ನಿಮಿಷದ ವಿಡಿಯೋದಲ್ಲಿ ಎಂಟು ದಿನಗಳ ಕಾಶ್ಮೀರಿ ಪ್ರವಾಸ ಹೇಗಿತ್ತು, ಹಾಗೆ ಯಾರ ಜೊತೆಗೆ ಹೋಗಿದ್ದೆವು ಎಂದು ನಟಿ ನಮೃತ ಗೌಡ ಅವರು ಮಾಹಿತಿ ಬಿಚ್ಚಿಟ್ಟಿದ್ದಾರೆ. ಅವರ ಗೆಳತಿಯರಾದ ಪ್ರಿಯಾಂಕ ಮತ್ತು ಪ್ರಿಯಾಂಕರ ಇಡಿ ಕುಟುಂಬದ ಜೊತೆ ನಮೃತ ಗೌಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. 

ಶ್ರೀನಗರದಿಂದ ಆರಂಭವಾದ ಈ ಪ್ರಯಾಣ ಹೇಗಿತ್ತು ಎಂಟು ದಿನಗಳ ಕಾಲಕ್ಕೆ ಸುಮಾರು ಖರ್ಚಾಗಿದ್ದು 50,000 ಎಂದು ಇದೀಗ ನಮ್ರತ ಅವರೆ ಹೇಳಿಕೊಂಡಿದ್ದಾರೆ. ಇಲ್ಲಿದೆ ನೋಡಿ ಆ ಪ್ರಯಾಣದ ವಿಡಿಯೋ. ನಿಮಗೂ ಇಷ್ಟವಾದ್ರೆ ಶೇರ್ ಮಾಡಿ, ಮತ್ತು ಮಂಜುವನ್ನ ನೋಡಿ ಬರುವಾಗ ರಸ್ತೆ ಮದ್ಯೆಯೇ ರೋಡ್ ಬ್ಲಾಕ್ ಆದಾಗ 4 ಗಂಟೆಗಳ ಕಾಲ -25 ಡಿಗ್ರಿ ಚಳಿಯಲ್ಲಿ ಕಳೆದ ಆ ಅನುಭವದ ಬಗ್ಗೆ ವಿಡಿಯೋದಲ್ಲಿ ತೋರಿಸಿದ್ದಾರೆ. ಈ ವ್ಲಾಗ್ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕಾದರೆ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ಶೇರ್ ಮಾಡಿ ಧನ್ಯವಾದಗಳು...