Big Boss Ott : ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂದಿನಿ ಪಡೆದ ಸಂಭಾವನೆ ಎಷ್ಟು ಗೊತ್ತಾ..?

By Infoflick Correspondent

Updated:Monday, September 12, 2022, 16:17[IST]

Big Boss Ott : ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂದಿನಿ  ಪಡೆದ  ಸಂಭಾವನೆ ಎಷ್ಟು ಗೊತ್ತಾ..?

ಕನ್ನಡದ ಓಟಿಟಿ ಬಿಗ್‌ ಬಾಸ್ ಸೀಸನ್ ಸಾಕಷ್ಟು ವಿರೋಧಗಳ ನಡುವೆ ಆರಂಭವಾಯಿತು. ಆರಂಭವಾದ ಬಳಿಕ ಕೆಲ ಸ್ಪರ್ಧಿಗಳ ಆಯ್ಕೆ ವಿಚಾರವಾಗಿ ವಿರೋಧ ವ್ಯಕ್ತಪಡಿಸಿಕೊಂಡಿತು. ಈಗ ಕೊನೆಯ ಹಂತಕ್ಕೆ ಬಿಗ್ ಬಾಸ್ ಓಟಿಟಿ ಸೀಸನ್ ಒಂದು ಬಂದು ನಿಂತಿದೆ. ಈಗ 36 ದಿನಗಳನ್ನು ಮುಕ್ತಾಯ ಮಾಡಿರುವ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಬಿಗ್ ಬಾಸ್ ಮನೆಯಲ್ಲಿ ಒಟ್ಟು ಕೆಲವೇ ಮಂದಿ ಆಟದಲ್ಲಿ ಉಳಿಸಿಕೊಂಡಿದ್ದಾರೆ. ಹೌದು ಆರನೇ ವಾರದಲ್ಲಿ ಯಾರೆಲ್ಲಾ ಎಲಿಮಿನೇಟ್ ಆಗುತ್ತಾರೆ ಎಂದು ತುಂಬಾ ಕಾತುರರಾಗಿ ಬಿಗ್ ಬಾಸ್ ಮನೆ ಮಂದಿ ಸಹ ಎದುರು ನೋಡುತ್ತಿದ್ದಾರೆ.

ಹೀಗಿರುವಾಗ ಮೂವರು ಸೇಫ್ ಆಗಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ಹಾಗೂ ರಾಕೇಶ್ ಅಡಿಗ ಅವರು ಬಿಗ್ ಬಾಸ್ ಪಿನಾಲೆ ವಾರಕ್ಕೆ ಎಂಟ್ರಿ ಪಡೆದಿರುವ ಸ್ಪರ್ಧಿಗಳು. ವಿಕ್ಷಕರ ಆಯ್ಕೆ ಮಾಡಿದ ಪ್ರಕಾರ ರಾಕೇಶ್ ಅಡಿಗ ಫಿನಾಲೆ ವಾರಕ್ಕೆ ಟಿಕೆಟ್ ಪಡೆದುಕೊಂಡರೆ, ಈ ವಾರಕ್ಕೆ ನಾಯಕನಾಗಿ ರೂಪೇಶ್ ಶೆಟ್ಟಿ ಅವರು ಕಾಣಿಸಿದ್ದು ಇವರು ಸಹ ಫಿನಾಲೆ ವಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇನ್ನೊಬ್ಬರನ್ನು ಉಳಿಸಿಕೊಳ್ಳಬೇಕು ಎಂಬ ನಾಯಕನ ಆಯ್ಕೆಗೆ ರೂಪೇಶ್ ಶೆಟ್ಟಿ ಅವರ ಆಯ್ಕೆಯಂತೆ ಸಾನಿಯಾ ಅಯ್ಯರ್ ಕೂಡ ಬಿಗ್ ಬಾಸ್ ಫಿನಾಲೆ ವಾರಕ್ಕೆ ಎಂಟ್ರಿ ಪಡೆದುಕೊಂಡಿದ್ದಾರೆ. ಇನ್ನುಳಿದ ಒಟ್ಟು ಸ್ಪರ್ಧಿಗಳು ಈ ವಾರ ಸಕ್ಕತ್ತಾಗಿ ಆಟವನ್ನು ಆಡಬೇಕಿದೆ.    

ಇನ್ನು ಜಶ್ವಂತ್ ಬೋಪಣ್ಣ ಹಾಗೂ ನಂದಿನಿ ಇಬ್ಬರೂ ಲವರ್ಸ್. ಇವರಿಬ್ಬರು ಒಟ್ಟಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿ ಜಸ್ವಂತ್ ಸಾನ್ಯಾ ಜೊತೆಗೆ ಕ್ಲೋಸ್ ಆಗಿ ನಡೆದುಕೊಂಡಿದ್ದಾರೆ. ಇದರಿಂದ ನಂದಿನಿ ನೊಂದುಕೊಂಡಿದ್ದರು. ಈ ವಾರ ನಂದಿನಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಇದೀಗ ನಂದಿನಿ ಅವರು ಬಿಗ್ ಬಾಸ್ ಮನೆಗೆ ಬರಲು ಎಷ್ಟು ಸಂಭಾವನೆಯನ್ನು ಪಡೆಯುತ್ತಿದ್ದರು ಎಂಬ ವಿಚಾರ ಇದೀಗ ಬಯಲಾಗಿದೆ. ಒಂದು ವಾರಕ್ಕೆ ನಂದಿನಿ 30 ಸಾವಿರ ಸಂಭಾವನೆಯನ್ನು ಪಡೆಯುತ್ತಿದ್ದರಂತೆ.