ಮುಕ್ತಾಯಗೊಂಡಿತು ನಮ್ಮಮ್ಮ ಸೂಪರ್‌ ಸ್ಟಾರ್:‌ ವಿನ್ನರ್‌ ಗೆ ಕೊಟ್ಟ ಟ್ರೋಫಿ ಎಷ್ಟು ಕೆಜಿ ಇದೆ ಗೊತ್ತಾ..?

By Infoflick Correspondent

Updated:Thursday, April 7, 2022, 15:05[IST]

ಮುಕ್ತಾಯಗೊಂಡಿತು ನಮ್ಮಮ್ಮ ಸೂಪರ್‌ ಸ್ಟಾರ್:‌ ವಿನ್ನರ್‌ ಗೆ ಕೊಟ್ಟ ಟ್ರೋಫಿ ಎಷ್ಟು ಕೆಜಿ ಇದೆ ಗೊತ್ತಾ..?

     

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ನಮ್ಮಮ್ಮ ಸೂಪರ್‌ ಸ್ಟಾರ್‌ ಕಾರ್ಯಕ್ರಮ ಅಂತ್ಯಗೊಂಡಿದೆ. ತಾಯಿ-ಮಕ್ಕಳ ಹನ್ನೆರಡು ಜೋಡಿಗಳು ಸ್ಫರ್ಧೆಯಲ್ಲಿ ಭಾಗವಹಿಸಿ, ಒಂದು ಜೋಡಿ ವಿನ್ನರ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಮತ್ತು ಪತ್ನಿ ಯಶಸ್ವಿನಿ ವಿನ್‌ ಆಗಿದ್ದಾರೆ. ಫಿನಾಲೆಯಲ್ಲಿ ತಾಯಿ-ಮಗಳಾದ ಯಶಸ್ವಿನಿ ಹಾಗೂ ವಂಶಿಕಾ ಜೋಡಿ ಈ ಟ್ರೋಫಿ ಗೆದ್ದಿದ್ದಾರೆ.

ನನ್ನಮ್ಮ ಸೂಪರ್ ಸೂಪರ್ ಸ್ಟಾರ್ ಕಾರ್ಯಕ್ರಮ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡಿತ್ತು. ಆರು ಜೋಡಿಗಳು ಅಂದರೆ, ವಿದ್ಯಾ-ರೋಹಿತ್, ಪುನೀತಾ-ಆರ್ಯ, ಯಶಸ್ವಿನಿ-ವಂಶಿಕಾ, ಸುಪ್ರಿತಾ-ಇಬ್ಬನಿ, ಜಾನ್ವಿ-ಗ್ರಂಥ್, ನಂದಿನಿ-ಅದ್ವಿಕ್ ಅವರು ಫಿನಾಲೆ ತಲುಪಿದ್ದರು. ನಟಿ ತಾರಾ ಅನುರಾಧ ಅವರು ವಿನ್ನರ್‌ ಹೆಸರನ್ನು ಘೋಷಿಸಿದರು. ವಂಶಿಕಾ ಮತ್ತು ಯಶಸ್ವಿನಿಗೆ ಟ್ರೋಫಿ ಅನ್ನು ಎತ್ತಿ ಹಿಡಿದಿದರು. ಜೊತೆಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಕೂಡ ದೊರಕಿದೆ. 

ಇನ್ನು ನಮ್ಮಮ್ಮ ಸೂಪರ್‌ ಸ್ಟಾರ್‌ ಟ್ರೋಫಿ ಸರಿಸುಮಾರು ಹತ್ತರಿಂದ ಹನ್ನೆರಡು ಕೆಜಿ ತೂಕವಿದೆ. ಮಗುವನ್ನು ತಾಯಿ ಎತ್ತಿಕೊಂಡಿರುವ ರೀತಿಯಲ್ಲಿ ಟ್ರೋಫಿಯನ್ನು ವಿನ್ಯಾಸಗೊಳಿಸಲಾಗಿದೆ. ವಿನ್ನರ್‌ ಗೆ ಗೋಲ್ಡ್‌ ಬಣ್ಣದ ಟ್ರೋಫಿ ನೀಡಲಾಯ್ತು. ರನ್ನರಪ್‌ ಗೆ ಸಿಲ್ವರ್‌ ಬಣ್ಣದ ಟ್ರೋಫೀ ಣೀಡಿದರು. ಟ್ರೋಫಿ ಪಡೆದ ಯಶಸ್ವಿನಿ ಅದೇ ರೀತಿಯಲ್ಲಿ ವಂಶಿಕಾ ಳನ್ನು ಎತ್ತಿ ಹಿಡಿದು ಪೋಸ್ ಕೊಟ್ಟದರು.

ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೂಪರ್ ಆಗಿ ಹಿಟ್ ಆಗಿದೆ. ಈ ರಿಯಾಲಿಟಿ ಶೋ ನ ಜಡ್ಜ್ ಗಳಾಗಿ ನಟ ಅನುಪ್ರಭಾಕರ್, ನಟಿ ತಾರಾ ಹಾಗೂ ನಟ ಸೃಜನ್ ಲೋಕೇಶ್ ಇದ್ದರು. ಈ ಶೋ ನಲ್ಲಿ ಪುಟಾಣಿಗಳದ್ದೇ ಕಾರು ಬಾರು. ಈ ಕಾರ್ಯಕ್ರಮವನ್ನು ಅನುಪಮಾ ಗೌಡ ಅವರು ನಡೆಸಿಕೊಟ್ಟರು. ಒಳ್ಳೊಳ್ಳೆ ಪರರ್ಮೆನ್ಸ್ ಮಾಡಿ ವೇದಿಕೆ ಮೇಲೆ ಚಿನಕುರಳಿಗಳು ಧೂಳ್ ಎಬ್ಬಿಸಿದರು.