Pavithra Lokesh : ಜ್ಯೋತಿಷಿ ಆಕೆಯನ್ನ ಮದುವೆ ಆಗ್ಬೇಡ ಅಂದ್ರು ನರೇಶ್ ಅಂದು ಕೇಳಲಿಲ್ಲವಂತೆ..! ಜ್ಯೋತಿಷಿ ಮಾತು ನಿಜ ಆಯ್ತ..?

By Infoflick Correspondent

Updated:Tuesday, July 19, 2022, 08:03[IST]

Pavithra Lokesh :   ಜ್ಯೋತಿಷಿ ಆಕೆಯನ್ನ ಮದುವೆ ಆಗ್ಬೇಡ ಅಂದ್ರು ನರೇಶ್ ಅಂದು ಕೇಳಲಿಲ್ಲವಂತೆ..! ಜ್ಯೋತಿಷಿ ಮಾತು ನಿಜ ಆಯ್ತ..?

ಟಾಲಿವುಡ್ ಅಂಗಳದಲ್ಲಿ ಕಳೆದ 20 ದಿನಗಳಿಂದ ಹಿರಿಯ ನಟ ನರೇಶ್ ಮತ್ತು ಅವರ ಪತ್ನಿ ರಮ್ಯಾ ರಘುಪತಿ ಜೊತೆಗೆ ಕನ್ನಡದ ಹಿರಿಯ ಪೋಷಕ ನಟಿ ಪವಿತ್ರ ಲೋಕೇಶ್ ಅವರ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದ್ದವು. ಹಾಗೆ ಸಂಚಲನ ಸೃಷ್ಟಿ ಮಾಡಿದ್ದು, ನಟ ನರೇಶ್ ಮತ್ತು ಪವಿತ್ರ ಲೋಕೇಶ್ ಅವರು ಜೊತೆಗೆ ಕೆಲವು ವರ್ಷಗಳಿಂದ ಸಹಜೀವನ ನಡೆಸುತ್ತಿದ್ದಾರೆ ಎನ್ನಲಾಗಿ ಕೇಳಿ ಬಂದ ಹಾ*ಟ್ ಟಾಪಿಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅತ್ತ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಸಹ ಇವರಿಬ್ಬರನ್ನು ಮೈಸೂರಿನ ಒಂದೇ ಹೋಟೆಲ್ ನ ಒಳಗೆ ಒಂದೇ ರೂಮಿನಲ್ಲಿ ಹಿಡಿದಿದ್ದು ಇವರ ಪ್ರಕರಣಕ್ಕೆ ಬೇರೆ ಬೇರೆಯದ್ದೆ ರೀತಿಯ ತಿರುವುಗಳು ಕೂಡ ಸಿಕ್ಕಿವೆ. 

ರಮ್ಯಾ ನರೇಶ್ ಮೇಲೆ ಆರೋಪ ಮಾಡಿ ನನಗೆ ವಿಚ್ಚೇದನೆ ನೀಡದೆ ಅದ್ಹೇಗೆ ಇನ್ನೊಂದು ಮದುವೆ ಆಗ್ತಾರೆಂದು ಹೇಳಿ ಆಕ್ರೋಶ ಗಿರ ಹಾಕಿದ್ದರು. ಅತ್ತ ನರೇಶ್ ಸಹ ರಮ್ಯಾ ಅವರ ಮೇಲೆ ಆರೋಪಿಸಿ ಬೇರೆಯವರ ಜೊತೆ ಸಂಬಂಧ ಕಟ್ಟಿದ್ದು ಈಕೆಗೆ ನನ್ನ ದುಡ್ಡಿನ ಮೇಲೆ ಆಸೆ ಅದಕ್ಕಾಗಿಯೇ ಹೀಗೆಲ್ಲಾ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಪವಿತ್ರ ಲೋಕೇಶ್  ಬಗ್ಗೆ ಅಲ್ಲಿಯವರೆಗೆ ಕೆಲವರು ನಟಿ ಪವಿತ್ರಾ ಲೋಕೇಶ್ ಪರ ಮಾತನಾಡಿದ್ದರು. ಆದರೆ ಈ ದೃಶ್ಯ ಹೊರಬಂದ ಬಳಿಕ ಪವಿತ್ರ ಲೋಕೇಶ್ಗೆ ಹೆಚ್ಚು ಜನರು ನೀನು ಒಬ್ಬ ಹೆಣ್ಣಾಗಿ ಇನ್ನೊಂದು ಹೆಣ್ಣಿನ ಸುಖ ಸಂಸಾರ ಒಡೆಯುತ್ತಿದ್ದೀಯಲ್ಲ ಎಂದು ತಾರಾಟಿಗೆ ತೆಗೆದುಕೊಂಡದ್ದುಂಟು. ಹೀಗೆ ಒಂದಲ್ಲ ಒಂದು ವಿಚಾರವಾಗಿ ನರೇಶ್ ಮತ್ತು ಪವಿತ್ರ ಲೋಕೇಶ್ ಸುದ್ದಿ ಆದರು.

ಇದೀಗ ನಟ ನರೇಶ್ ಮತ್ತು ಅವರ ಪತ್ನಿ ರಮ್ಯ ರಘುಪತಿ ಅವರ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಿನಿಮಾ ಮತ್ತು ರಾಜಕೀಯ ಗಣ್ಯರ ವಿಚಾರಗಳ ಜಾತಕ ಹೇಳುವ ಖ್ಯಾತ ಜ್ಯೋತಿಷಿ ಈ ಮುಂಚೆ ಇವರಿಬ್ಬರ ಮದುವೆ ಕುರಿತು ಹೇಳಿದ್ದ ಭವಿಷ್ಯ ಇದೀಗ ನಿಜ ಆಗುತ್ತಿದೆ ಎಂದು ಕೇಳಿ ಬಂದಿದೆ. ನಟಿ ಸಮಂತಾ ಹಾಗೂ ನಾಗಚೈತನ್ಯ ಅವರ ವಿಚ್ಛೇದನದ ಬಗ್ಗೆ ಹೇಳಿ ಸುದ್ದಿಯಾಗಿದ್ದ ಜ್ಯೋತಿಷಿ ವೇಣು ಸ್ವಾಮಿ ಅವರು ಈ ಮುಂಚೆಯೇ ನರೇಶ್ ಮತ್ತು ರಮ್ಯಾ ರಘುಪತಿ ಅವರ ಮದುವೆ ಬಗ್ಗೆ ಜಾತಕ ಹೇಳಿದ್ದರಂತೆ. ಇವರಿಬ್ಬರನ್ನು ಮದುವೆ ಮಾಡಬೇಡಿ, ಇವರಿಬ್ಬರಿಗೂ ಜಾತಕ ಹೊಂದುವುದಿಲ್ಲ ಎಂದು ಜಾತಕ ಹೇಳಿದ್ದರಂತೆ. ಆದರೆ ಇವರ ಮನೆಯವರು ವೇಣು ಸ್ವಾಮಿ ಮಾತನ್ನು ಕೇಳದೆ ರಮ್ಯಾ ರಘುಪತಿ ಹಾಗೂ ನರೇಶ್ ಮದುವೆ ಮಾಡಿದ್ದು ಇದೀಗ ಅವರಿಬ್ಬರು ಬೇರೆ ಬೇರೆ ಆಗಿದ್ದಾರೆ. ನನ್ನ ಮಾತು ಮೀರಿ ಹೆಸರು ಬದಲಾಯಿಸಿ ಇವರಿಗೆ ಮದುವೆ ಮಾಡಿದರು ಆ ಜಾತಕ ಹೊಂದದ ಕಾರಣ ಇವರ ಮದುವೆ ಮುರಿದು ಇದೀಗ ಇಬ್ಬರು ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ವೇಣು ಸ್ವಾಮಿ ಇತ್ತೀಚಿಗೆ ಹೇಳಿದರು ಎಂದು ತಿಳಿದುಬಂದಿದೆ. ಹಾಗೆ ಆ ಜಾತಕ ನಿಜವಾಗಿದೆ ಎಂದು ಕೆಲವರ ಹೇಳುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...