Pavithra Lokesh : ಪವಿತ್ರಾ ಲೋಕೇಶ್‌ ಗೆ ದೇವಸ್ಥಾನವನ್ನು ಉಡುಗೊರೆಯಾಗಿ ಕೊಟ್ಟ ನರೇಶ್..!!‌

By Infoflick Correspondent

Updated:Saturday, July 2, 2022, 08:49[IST]

Pavithra Lokesh :  ಪವಿತ್ರಾ ಲೋಕೇಶ್‌ ಗೆ   ದೇವಸ್ಥಾನವನ್ನು ಉಡುಗೊರೆಯಾಗಿ ಕೊಟ್ಟ ನರೇಶ್..!!‌

ಹಿರಿಯ ನಟಿ ಪವಿತ್ರಾ ಲೋಕೇಶ್‌ ಹಾಗೂ ಹಿರಿಯ ನಟ ನರೇಶ್‌ ಬಾಬು ಇಬ್ಬರೂ ಮದುವೆಯಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಈ ವಿಚಾರವಾಗಿ ಮೊನ್ನೆ ಪ್ರತಿಕ್ರಿಯಿಸಿರುವ ಪವಿತ್ರಾ ಲೋಕೇಶ್‌ ಅವರು ಇದೆಲ್ಲಾ ಸುಳ್ಳು ಎಂದಿದ್ದರು. ಆದರೆ, ಸ್ಪಷ್ಟವಾಗಿ ಏನನ್ನೂ ಹೇಳಿರಲಿಲ್ಲ. ಇನ್ನು ನರೇಶ್‌ ಅವರ ಪತ್ನಿ ತಮಗೆ ಮೋಸವಾಗಿದೆ ಎಂದು ಹೇಳಿದ್ದರು. ನರೇಶ್‌ ಪವಿತ್ರಾ ಅವರನ್ನು ಮದುವೆಯಾಗುವ ಸಲುವಾಗಿ ತಮಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದ್ದರು, 

ಪವಿತ್ರಾ ಲೋಕೇಶ್‌ ಅವರು ರಮ್ಯ ರಘುಪತಿ ಅವರ ಮಾತನ್ನು ಕೂಡ ತಳ್ಳಿ ಹಾಕಿದ್ದರು. ಆದರೆ, ಈ ಸುದ್ದಿಯ ಬಗ್ಗೆ ಎಲ್ಲೂ ಯಾರಿಗೂ ಸ್ಪಷ್ಟತೆ ಸಿಕ್ಕಿರಲಿಲ್ಲ. ಬಟ್‌ ಈಗ ಸ್ವತಃ ನರೇಶ್‌ ಅವರೇ ಮಾಧ್ಯಮವೊಂದಕ್ಕೆ ಮಾತನಾಡಿದ್ದಾರೆ. ಸಮಸ್ಯೆ ಎಲ್ಲಿ ಉದ್ಭವ್ ಆಯಿತು . ಯಾಕೆ ಹೀಗಾಗುತ್ತಿದೆ. ಅಸಲಿ ಸತ್ಯವೇನು ಎಂಬುದನ್ನು ಒಂದೇ ನಿಮಿಷದಲ್ಲಿ ಹೇಳಿದ್ದಾರೆ. ಆದರೆ ನರೇಶ್‌ ಅವರ ಹೇಳಿಕೆ ಮತ್ತೊಂದು ತಿರುವನ್ನು ಪಡೆದಿದೆ. ಅದೇನು ಎಂದು ನೋಡೋನ ಬನ್ನಿ  ..

ಕಳೆದ ನಾಲ್ಕು ವರ್ಷಗಳಿಂದ ನರೇಶ್‌ ಹಾಗೂ ಪವಿತ್ರಾ ಅವರು ಒಟ್ಟಿಗೆ ಕೆಲಸ ಮಾಡಿದ್ದು, ಒಟ್ಟು ೬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಒಳ್ಳೆಯ ಬರಹಗಾರ್ತಿಯಾಗಿರುವ ಪವಿತ್ರಾ ಅವರು ನರೇಶ್‌ ಅವರ ಸಿನಿಮಾಗೆ ಸ್ಕ್ರಿಪ್ಟ್‌ ಬರೆದಿದ್ದರಂತೆ. ಹೀಗೆ ಸಹಾಯ ಮಾಡಿದ ಪವಿತ್ರಾ ಅವರಿಗೆ ನರೇಶ್‌ ಅವರು ದೇವಸ್ಥಾನವನ್ನು ದತ್ತು ಪಡೆದು ಗಿಫ್ಟ್‌ ಮಾಡಿದ್ದಾರೆ. ಪವಿತ್ರಾ ಅವರು ಶಿವ ಭಕ್ತೆಯಾದ್ದರಿಂದ ಶಿವನ ದೇವಾಲಯನ್ನು ಉಡುಗೊರೆಯಾಗಿ ಕೊಟ್ಟಿದ್ದು, ಒಟ್ಟಿಗೆ ಸ್ವಾಮೀಜಿಯನ್ನು ಭೇಟಿಯಾಗಿದ್ದಾರೆ. ಹಾಗಾಗಿ ಈ ಸುದ್ದಿ ಈಗ ಎಲ್ಲೆಲ್ಲೋ ಹೋಗಿದೆ ಎಂದು ಸ್ವತಃ ನರೇಶ್‌ ಅವರೇ ಸ್ಪಷ್ಟನೆ ನೀಡಿದ್ದಾರೆ.