Pavithra lokesh : ನರೇಶ್ ಪವಿತ್ರಾ ಜೊತೆ ಡೇಟಿಂಗ್ ಗೆ ಎಷ್ಟು ಲಕ್ಷ ಕೊಡುತ್ತಿದ್ದಾರೆ ಗೊತ್ತಾ..? ಕೈ ಕೊಟ್ಟರೆ ಕೋಟಿ ನೀಡಬೇಕಂತೆ

By Infoflick Correspondent

Updated:Wednesday, August 10, 2022, 12:24[IST]

Pavithra lokesh : ನರೇಶ್ ಪವಿತ್ರಾ ಜೊತೆ ಡೇಟಿಂಗ್ ಗೆ ಎಷ್ಟು ಲಕ್ಷ ಕೊಡುತ್ತಿದ್ದಾರೆ ಗೊತ್ತಾ..? ಕೈ ಕೊಟ್ಟರೆ ಕೋಟಿ ನೀಡಬೇಕಂತೆ

ಟಾಲಿವುಡ್ ಅಂಗಳದಲ್ಲಿ ನಟಿ ಪವಿತ್ರ ಲೋಕೇಶ್ ಹಾಗೂ ಕೃಷ್ಣರ ಪುತ್ರ ನಟ ನರೇಶ್ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಕಳೆದ ತಿಂಗಳು ಕೆಲ ಮಾಧ್ಯಮಗಳಲ್ಲಿ ಇವರಿಬ್ಬರ ವಿಚಾರವಾಗಿ ದೊಡ್ಡದಾಗಿಯೇ ಸುದ್ದಿಯಾಗಿತ್ತು. ನರೇಶ್ ಮತ್ತು ಪವಿತ್ರ ಲೋಕೇಶ್ ಅಫೇರ್ ಇಟ್ಟುಕೊಂಡಿದ್ದಾರೆ ಎಂದು ಚರ್ಚೆಯಾಗಿತ್ತು. ಅದರ ಮುನ್ನೆಲೆ ಇದೀಗ ಮತ್ತಷ್ಟು ಚುರುಕಾಗಿದೆ ಎನ್ನಬಹುದು. ಇವರಿಬ್ಬರ ವಿಚಾರಕ್ಕೆ ಇನ್ನಷ್ಟು ವೈರಲ್ ಮಾಹಿತಿಗಳು ಹೊರ ಬರುತ್ತಿವೆ. ಹೌದು ನಟಿ ಪವಿತ್ರ ಲೋಕೇಶ್ ಜೊತೆಗೆ ನಟ ನರೇಶ್ ಆರಂಭದಲ್ಲಿ ನಾವಿಬ್ಬರು ಜೊತೆಗೆ ಇದ್ದೇವೆ, ಆದರೆ ಮದುವೆ ಆಗಿಲ್ಲ ಎನ್ನುವ ಹೇಳಿಕೆ ನೀಡಿ ಎಲ್ಲರಿಗೂ ಶಾಕ್ ನೀಡಿದ್ದರು. ಹಾಗೆ ಅತ್ತ ನಟಿ ಪವಿತ್ರ ಲೋಕೇಶ್ ಅವರು ಕೂಡ ನಾನು ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಅಭಿನಯದಿಂದ ಗುರುತಿಸಿಕೊಂಡಿದ್ದೇನೆ, ನರೇಶ್ ಅವರ ಬಗ್ಗೆ ಏನು ಹೇಳಬೇಕಿಲ್ಲ, ನಿಮಗೆ ಅದರ ಬಗ್ಗೆ ಈಗಾಗಲೇ ಎಲ್ಲವೂ ಗೊತ್ತಿದೆ ಎಂದಿದ್ದರು..

ಆದರೆ ರಮ್ಯಾ ಅವರ ಕೈಗೆ ಇವರಿಬ್ಬರು ಮೈಸೂರಿನ ಒಂದು ಹೋಟೆಲ್ ರೂಮಿನ ಒಳಗೆ ಸಿಕ್ಕಿಹಾಕಿಕೊಂಡಾಗ ಆದ ಅವಾಂತರ ನೀವು ಕೂಡ ನೋಡಿದ್ದೀರಿ, ನರೇಶ್ ಮೂರನೇ ಹೆಂಡತಿ ರಮ್ಯಾ ಅವರು ಇವರಿಬ್ಬರ ಮೇಲೆ ದೂರನ್ನು ನೀಡಿದ್ದಾರಂತೆ. ಇದರೊಟ್ಟಿಗೆ ಇದೀಗ ನಟ ನರೇಶ್ ಮತ್ತು ಪವಿತ್ರ ಲೋಕೇಶ್ ಒಪ್ಪಂದದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿ ಸುದ್ದಿಯಾಗಿದೆ. ಜೊತೆಗೆ ಇವರಿಬ್ಬರ ಸಂಬಂಧ ಕುರಿತು ಅಷ್ಟೇ ಚರ್ಚೆ ಆಗುತ್ತಿದೆ. ಡೇಟಿಂಗ್ ಗಾಗಿ ತಿಂಗಳಿಗೆ ಪವಿತ್ರ ಲೋಕೇಶ್ ಅವರಿಗೆ ನರೇಶ್ ಅವರು 25 ಲಕ್ಷ ಹಣ ಕೊಡಬೇಕಂತೆ, ಅವರ ಜೊತೆ ಡೇಟಿಂಗ್ ಮಾಡಲು ಅಷ್ಟೇ ಎನ್ನಲಾಗಿ ಕೇಳಿಬಂದಿದೆ. ಹಾಗೆ ಒಂದು ವೇಳೆ ನಟಿ ಪವಿತ್ರ ಲೋಕೇಶ್ ಅವರನ್ನ ಬಿಟ್ಟು ಬೇರೆ ಮಹಿಳೆ ಜೊತೆ ಸಂಬಂಧ ಹೊಂದಿದರೆ ನರೇಶ್ ಅವರು 50 ಕೋಟಿ ಹಣವನ್ನು ಪವಿತ್ರ ಲೋಕೇಶ್ ಅವರಿಗೆ ನೀಡಬೇಕು ಎಂದು ಒಪ್ಪಂದ ಆಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.  

ಇದನ್ನೆಲ್ಲಾ ನೋಡಿದ ನೆಟ್ಟಿಗರು ನಿಜ ಜೀವನದಲ್ಲಿ ಇವರು, ಆ ಚಿತ್ರಗಳಲ್ಲಿ ಮಾಡುವ ಹಾಗೆ ಒಪ್ಪಂದದ ಮೇರೆಗೆನೇ ಈ ರೀತಿ ಸಂಬಂಧವನ್ನ ಇಟ್ಟುಕೊಂಡು ಜೀವನ ನಡೆಸುತ್ತಾರ ದೇವರೇ, ಇದೆಂತ ದುರ್ವಿದೆಯೇ ಎಂದು, ಇವರ ಈ ನಡೆ ನಿಜಕ್ಕೂ ನಿಜವಾಗಿದ್ದರೆ ನಾವು ಇದನ್ನು ಖಂಡಿಸುತ್ತೇವೆ ಎನ್ನುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..