Pavithra Lokesh : ನರೇಶ್- ಪವಿತ್ರಾ ಒಂದೇ ರೂಂನಲ್ಲಿದ್ದ ಸಂಗತಿ ಹಾಗು ಜಾಗ ಪತ್ನಿ ರಮ್ಯಾಗೆ ತಿಳಿಸಿದ್ದು ಯಾರು ಗೊತ್ತಾ? ಇಲ್ಲಿದೆ ಬಿಗ್ ಟ್ವಿಸ್ಟ್

By Infoflick Correspondent

Updated:Saturday, July 16, 2022, 11:40[IST]

Pavithra Lokesh : ನರೇಶ್- ಪವಿತ್ರಾ ಒಂದೇ ರೂಂನಲ್ಲಿದ್ದ ಸಂಗತಿ ಹಾಗು ಜಾಗ ಪತ್ನಿ ರಮ್ಯಾಗೆ ತಿಳಿಸಿದ್ದು ಯಾರು ಗೊತ್ತಾ? ಇಲ್ಲಿದೆ ಬಿಗ್ ಟ್ವಿಸ್ಟ್

ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ವಿಷಯ ತಣ್ಣಗಾಗುವುದರೊಳಗೆ ಘಟನೆಗೆ ಹೊಸ ಟ್ವಿಸ್ಟ್ ದೊರಕಿದೆ.ಇದು ಶಾಕಿಂಗ್ ಸುದ್ದಿಯಾಗಿದೆ. ಮೈಸೂರಿನಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್​ ಒಂದೇ ರೂಂನಲ್ಲಿದ್ದಾಗ ರಮ್ಯಾ ರಘುಪತಿ ಹೋಟೆಲ್​ಗೆ ತೆರಳಿ ಗಲಾಟೆ ಮಾಡಿದ್ದರು.

ಮೈಸೂರಿನ ಹೋಟೆಲ್‌ವೊಂದರಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೋಗಿದ್ದರು. ಆ ವಿಷಯ ತಿಳಿದ ರಮ್ಯಾ ರಘುಪತಿ ಅಲ್ಲಿಗೆ ಹೋಗಿ ರಂಪಾಟ ಮಾಡಿದ್ದರು. ಹೊಟೇಲ್ ರೂಮಿನ ಮುಂದೆ ಹೈಡ್ರಾಮಾವನ್ನೇ ಸೃಷ್ಟಿಸಿದ್ದರು.‌ ನರೇಶ್ ಪತ್ನಿ ರಮ್ಯಾ ಅವರಿಗೆ ನರೇಶ್ ಹಾಗು ಪವಿತ್ರಾ ಹೋಟೇಲಿನ ಒಂದೇ ರೂಂ ನಲ್ಲಿದ್ದ ವಿಷಯ ತಿಳಿಸಿದ್ಯಾರು ಗೊತ್ತೆ ?! ಕೇಳಿದ ಜನತೆ ಶಾಕ್ ಆಗಿದ್ದಾರೆ.

ಈ ರೀತಿ ಘಟನೆ ಆಗಲಿ ಅಂತ ಮೊದಲೇ ನರೇಶ್​ ಪ್ಲ್ಯಾನ್​ ಮಾಡಿದ್ದರಂತೆ. ಹೌದು, ಇಬ್ಬರು ಒಂದೇ ರೂಮ್​ನಲ್ಲಿದ್ದರ ಬಗ್ಗೆ ನರೇಶ್​ ಸ್ವತಃ ರಮ್ಯಾ ರಘುಪತಿಗೆ ಕಾಲ್​ ಮಾಡಿದ್ದರು ಅಂತ ಹೇಳಲಾಗುತ್ತಿದೆ. ಈ ರೀತಿ ಗಲಾಟೆ ಮಾಡಿ  ಪವಿತ್ರಾ ಲೋಕೇಶ್​ ನರೇಶ್​ ಒಟ್ಟಿಗೆ ಇದ್ದಾರೆ ಎಂದು ಎಲ್ಲಿರಗೂ ತಿಳಿಸಬೇಕಿತ್ತು. ಈ ರೀತಿ ಮಾಡಿದರೆ ರಮ್ಯಾ ರಘುಪತಿ ಬೇಗ ಡಿವೋರ್ಸ್ ಕೊಡುತ್ತಾರೆ ಅಂದುಕೊಂಡು ನರೇಶ್​ ಈ ಕೆಲಸ ಮಾಡಿದರು ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಕಾನೂನಿನಲ್ಲಿ ಬದಲಾವಣೆಯಾಗಿದ್ದರಿಂದ ಇಬ್ಬರೂ ಸ್ವ ಇಚ್ಚೆಯಿಂದ ಒಟ್ಟಿಗೆ ಇರುವುದು ಅಪರಾಧವಲ್ಲ ಎಂಬುದು ನರೇಶ್ ಗೊತ್ತಿತ್ತು. ಹೀಗಾಗಿಯೇ ನರೇಶ್, ನಟಿ ಪವಿತ್ರಾ ಲೋಕೇಶ್ ಅವರ ಜೊತೆಯಲ್ಲಿ ಇದ್ದರು. ಅಲ್ಲದೆ ಈ ವಿಷಯವನ್ನು ಪರೋಕ್ಷವಾಗಿ ಮೂರನೇ ಪತ್ನಿ ರಮ್ಯಾ ರಘುಪತಿಯವರಿಗೂ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ. ನರೇಶ್ ಉದ್ದೇಶಪೂರ್ವಕವಾಗಿಯೇ ಇಬ್ಬರೂ ಮೈಸೂರಿನ ಹೋಟೆಲ್‌ನಲ್ಲಿ ಇರುವುದಾಗಿ ಹೇಳಿದ್ದರು. ಎಂದು ಬಲ್ಲಮೂಲಗಳು ವರದಿ ಮಾಡಿದೆ‌.