Pavithra Lokesh : ನರೇಶ್ ಅವರು ರಮ್ಯಾ ರಘುಪತಿ ಯನ್ನು ಈ ಕಾರಣಕ್ಕಾಗೇ ಮದುವೆ ಆಗಿದ್ದರ ,ಎಲ್ಲ ಬಟಾ ಬಯಲು

By Infoflick Correspondent

Updated:Monday, July 11, 2022, 19:37[IST]

Pavithra Lokesh : ನರೇಶ್ ಅವರು ರಮ್ಯಾ ರಘುಪತಿ ಯನ್ನು ಈ ಕಾರಣಕ್ಕಾಗೇ ಮದುವೆ ಆಗಿದ್ದರ ,ಎಲ್ಲ ಬಟಾ ಬಯಲು

ಹಿರಿಯ ನಟಿ ಪವಿತ್ರಾ ಲೋಕೇಶ್‌ ಹಾಗೂ ತೆಲುಗು ನಟ ನರೇಶ್‌ ಬಾಬು ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಹದಿನೈದು ದಿನದಿಂದ ಹರಿದಾಡುತ್ತಿದೆ. ಇಬ್ಬರೂ ಕಳೆದ ನಾಲ್ಕೈದು ವರ್ಷದಿಂದ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಲಿವ್‌ ಇನ್‌ ರಿಲೇಶನ್‌ ಶಿಪ್‌ ನಲ್ಲಿದ್ದರು. ಇದೀಗ ಮದುವೆಯಗಿದ್‌ದಾರೆ ಎನ್ನಲಾಗಿದೆ. ಆದರೆ ನರೇಶ್‌ ಬಾಬು ಈಗಾಗಲೇ ಮದುವೆಯಾಗಿದ್ದು, ಅವರ ಪತ್ನಿ ರಮ್ಯಾ ರಘುಪತಿ ಅವರಿಗೆ ವಿಚ್ಛೇಧನ ಕೊಡದೆ ಮತ್ತೊಂದು ಮದುವೆಯಾಗಿದ್ದಾರೆ ಎನ್ನಲಾಗಿದೆ. ಇನ್ನು ನರೇಶ್‌ ಅವರು ರಮ್ಯಾ ರಘುಪತಿ ಅವರಿಗೆ ಮಾಡಿದ ಮೋಸದ ಬಗ್ಗೆ ಬಟಾಬಯಲಾಗಿದೆ/  

ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ ಎರಡನೇ ಪತ್ನಿ ನಿರ್ಮಲ ಅವರ ಪುತ್ರ ನರೇಶ್‌ ಬಾಬು. ಈಗಾಗಲೇ ನರೇಶ್‌ ಅವರ ಬಳಿ ಆರು ಸಾವಿರ ಕೋಟಿಗೂ ಅಧಿಕ ಆಸ್ತಿ ಇದೆ. ನರೇಶ್‌ ಈ ಮೊದಲು ತಮಿಳುನಾಡು ಮೂಲದ ಮಹಿಳೆಯನ್ನು ಮದುವೆಯಾಗಿದ್ದರು. ಬಳಿಕ ವಿಚ್ಛೇಧನ ಪಡೆದಿದ್ದರು. ನರೇಶ್‌ ಬಳಿ ಕೋಟಿಗಟ್ಟಲೇ ಆಸ್ತಿ ಇದ್ದರೂ ರಾಜಕೀಯವಾಗಿ ಅಷ್ಟೇನು ಬಲವಿರಲಿಲ್ಲ. ಹೀಗಾಗಿ ರಾಜಕೀಯಕ್ಕೆ ಸೇರಬೇಕು, ಅಲ್ಲಿ ಹೆಸರು ಮಾಡಬೇಕು ಎಂದುಕೊಂಡಿದ್ದ ನರೇಶ್‌ ಕಣ್ಣಿಗೆ ಬಿದ್ದಿದ್ದೆ ರಮ್ಯಾ ರಘುಪತಿ. 

ಕರ್ನಾಟಕದ ಪ್ರತಿಷ್ಠಿತ ಕುಟುಂಬದ ಹಿನ್ನೆಲೆ ಹೊಂದಿದ್ದ ರಮ್ಯಾ ರಘುಪತಿ ಅವರ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಪ್ರತಿಷ್ಠಿತ ಮೋತಿ ಮಹಲ್ ಹೋಟೆಲ್ ಮಾಲೀಕರ ಪುತ್ರಿ ರಮ್ಯಾ. ರಮ್ಯಾ ತಂದೆ ರಘುಪತಿ ಅವರಿಗೆ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರಿತ್ತು. ಇನ್ನು ರಮ್ಯಾ ಅವರ ಚಿಕ್ಕಪ್ಪ ರಘುವೀರ್ ರೆಡ್ಡಿ ಆಂಧ್ರ ಪ್ರದೇಶದವರು. ಇವರು ಆಂಧ್ರದಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದರು. ಸಚಿವರಾಗಿ, ಆಂಧ್ರ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ರಮ್ಯಾ ರಘುಪತಿ ಅವರನ್ನು ನರೇಶ್‌ ಮದುವೆಯಾದರು. 

ಮೊದಮೊದಲು ಇವರಿಬ್ಬರು ಸುಖ ಸಂಸಾರವನ್ನು ನಡೆಸಿದ್ದರು. ಆದರೆ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ಇಬ್ಬಾಗವಾದಾಗ ರಘುವೀರ್‌ ಅವರಿಗೆ ರಾಜಕೀಯವಾಗಿ ಹಿನ್ನೆಡೆಯಾಯಿತು.  ಆಗ ನರೇಶ್‌ ಅವರಿಗೆ ರಮ್ಯಾ ಮೇಲಿದ್ದ ಪ್ರೀತಿಯೆಲ್ಲಾ ಕರಗಿತ್ತು. ಹಾಗಾಗಿ ರಮ್ಯಾ ಅವರು ವಿರುದ್ಧ ೫೦೦ ಕೋಟಿ ವಂಚನೆ ಆರೋಪ ಮಾಡಿದರು. ಈಗ ರಮ್ಯಾಗೆ ಮೋಸ ಮಾಡಲು ಮುಂದಾಗಿದ್ದಾರೆ.