ಮೈಚಳಿ ಬಿಟ್ಟು ನೃತ್ಯ ಮಾಡಿದ ನಾಯಕಿ ನವ್ಯಾ ನಾಯರ್! ಜೊತೆಗೆ ನೃತ್ಯ ಮಾಡಿದ ಹುಡುಗ ಯಾರು ?

By Infoflick Correspondent

Updated:Sunday, June 19, 2022, 20:04[IST]

ಮೈಚಳಿ ಬಿಟ್ಟು ನೃತ್ಯ ಮಾಡಿದ ನಾಯಕಿ ನವ್ಯಾ ನಾಯರ್! ಜೊತೆಗೆ ನೃತ್ಯ ಮಾಡಿದ ಹುಡುಗ ಯಾರು ?

ಚಾಲೆಂಜ್ ಸ್ಟಾರ್ ದರ್ಶನ್ ಅಭಿನಯದ ‘ಗಜ’ ಸಿನೆಮಾದ ನಾಯಕಿ ನವ್ಯಾನಾಯರ್ ಅವರು ನಟನೆಯ ಜೊತೆಗೆ ನೃತ್ಯಗಾರ್ತಿಯೂ ಹೌದು. ಇವರು ಗಜ ಸಿನೆಮಾದಲ್ಲಿ ತಮ್ಮ ಅಭಿನಯದ ಮೂಲಕ ಕರ್ನಾಟಕದ ಮನೆಮಾತಾಗಿದ್ದರೂ ಕೂಡ.  

ಕನ್ನಡದಲ್ಲಿ ಇವರು ಶಿವಣ್ಣ ಅಭಿನಯದ ‘ಭಾಗ್ಯದ ಬಳೆಗಾರ’ ಸಿನೆಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಂತರ ಉದ್ಯಮಿಯೊಬ್ಬರ ಜೊತೆ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರು ಒಂದು ಗಂಡು ಮಗುವಿನ ತಾಯಿಯೂ ಕೂಡ. ಈಗ ರೌಡಿ ಬೇಬಿಯಾಗಿ ನೃತ್ಯ ಮಾಡಿದ್ದಾರೆ ನವ್ಯಾ‌. 

ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದರು ಕೂಡ ಇವರು ಸಾಕಷ್ಟು ಕನ್ನಡಿಗರ ಮನಸ್ಸನ್ನು ಕದ್ದವರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನವ್ಯ ನಾಯರ್ ಅವರು ಇತ್ತೀಚಿಗಷ್ಟೇ ಹೊಸದಾಗಿ ನೃತ್ಯ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ಜೊತೆಗೆ ನೃತ್ಯ ಮಾಡಿದ ಹುಡುಗ ಯಾರು ಎಂಬ ಪ್ರಶ್ನೆ ನೋಡುಗರಲ್ಲಿ ಮೂಡಿದೆ‌.   


ರೌಡಿ ಬೇಬಿ ಎಂಬ ಹಾಡಿಗೆ ಮೈಚಳಿ ಬಿಟ್ಟು ನೃತ್ಯ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಕ್ಕತ್ತಾಗಿ ಹೆಜ್ಜೆ ಹಾಕಿದ ನವ್ಯ ಜನಮನ ಗೆದ್ದಿದ್ದಾರೆ. ಆದರೆ ಜೊತೆಗೆ ಇದ್ದ ವ್ಯಕ್ತಿ ಮಗ ಎಂದು ಕೆಲವರು ಹೇಳಿದರೆ ಪ್ರಿಯತಮ, ಅಥವಾ ಗೆಳೆಯ ಎಂದು ಹಲವರು ಹೇಳುತ್ತಿದ್ದಾರೆ.