ಚೇತನಾ ರಾಜ್ ಸಾವಿನ ಬಗ್ಗೆ ಕಹಿ ಸತ್ಯ ಬಿಚ್ಚಿಟ್ಟ ನಟಿ ನೀತು..

By Infoflick Correspondent

Updated:Friday, May 20, 2022, 08:47[IST]

ಚೇತನಾ ರಾಜ್ ಸಾವಿನ ಬಗ್ಗೆ ಕಹಿ ಸತ್ಯ ಬಿಚ್ಚಿಟ್ಟ ನಟಿ ನೀತು..

ಬಣ್ಣದ ಲೋಕವೇ ಹಾಗೆ. ನೋಡುವುದಕ್ಕಷ್ಟೇ ಕಲರ್ ಫುಲ್ ಆಗಿರುತ್ತೆ. ಆದರೆ ಅಲ್ಲಿ ನಡೆಯುವ ಒಂದೊಂದು ಟನೆಯೂ ಎಲ್ಲರಿಗೂ ಕಹಿಯನ್ನೇ ಉಣಿಸುತ್ತದೆ. ಸಿನಿ ರಂದಗದಲ್ಲಿರುವವರೆಲ್ಲಾ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿವಹಿಸುತ್ತಾರೆ. ಕೆಲವರು ಡಯೆಟ್ ಮೂಲಕ ತಮ್ಮ ಆಂಗಿಕ ಸೌಂದರ್ಯ ಕಾಪಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ವಿವಿಧ ರೀತಿಯ ಸರ್ಜರಿ ಮೂಲಕ ತಮ್ಮ ಮೈಕಾಂತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ವಿವಿಧ ರೀತಿಯ ಕಾಸ್ಮೆಟಿಕ್ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. 

ಆದರೆ ಇದರಲ್ಲಿ ಕೆಲವರಷ್ಟೇ ಯಶಸ್ವಿಯಾಗುತ್ತಾರೆ. ಮತ್ತೆ ಕೆಲವರು ಪ್ರಾಣ ಕಳೆದುಕೊಂಡಿದ್ದರೆ, ಮತ್ತೂ ಕೆಲವರು ಅಂದವನ್ನೇ ಕಳೆದುಕೊಳ್ಳುತ್ತಾರೆ. ನಟಿ ಚೇತನಾ ರಾಜ್ ತೆಳ್ಳಗಾಗುವ ಚಿಕಿತ್ಸೆಯಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಸ್ವತಃ ಪಾಲಕರಿಗೂ ಹೇಳಿರಲಿಲ್ಲವಂತೆ. ಬೆಂಗಳೂರಿನ ನವರಂಗ್ ಸರ್ಕಲ್ ಬಳಿ ಇರುವ ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿ ಮಾಡಿಸಲು ನಿರ್ಧಾರ ಮಾಡಿದ್ದಳು. ತಮ್ಮ ಸ್ನೇಹಿತೆಯರ ಜೊತೆಗೆ ಹೋಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ. ಈ ವಿಷಯ ಪಾಲಕರಿಗೆ ಗೊತ್ತಾಗುವ ಮುಂಚೆಯೇ ಚೇತನಾ ರಾಜ್ ಅವರನ್ನು ಸ್ನೇಹಿತೆಯರು ಆಪರೇಷನ್ ಥಿಯೇಟರ್ಗೆ ಕರೆದುಕೊಂಡು ಹೋಗಿದ್ದರು.    

ಸೋಮವಾರ ಬೆಳಗ್ಗೆ ಅಡ್ಮಿಟ್ ಆಗಿ, ಸರ್ಜರಿ ಮಾಡಿಸಿಕೊಂಡಿದ್ದಾರೆ. ಆದರೆ ಸರ್ಜರಿ ಮಾಡುವ ಸಮಯದಲ್ಲಿ ಶ್ವಾಸಕೋಶಕ್ಕೆ ನೀರು ಸೇರಿಕೊಂಡು, ನಂತರ ಉಸಿರಾಟಕ್ಕೆ ಸಮಸ್ಯೆ ಆಗಲು ಶುರುವಾಗಿದೆ. ಬಳಿಕ ನಾಲ್ಕು ಗಂಟೆಗಳ ಕಾಲ ಚೇತನಾ ಅವರಿಗೆ ಚಿಕಿತ್ಸೆ ನೀಡಿ, ಅದು ಫಲಕಾರಿಯಾಗದೆ, ಬೇರೆ ಆಸ್ಪತ್ರೆಗೆ ಕಳಿಸಿದ್ದಾರೆ. ಆದರೆ ಬೇರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಚೇತನಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಸುದ್ದಿ ಕೇಳಿದಾಗಿನಿಂದ ಿಡೀ ಚಿತ್ರರಂಗದ ನಟಿಯರು ತಮ್ಮ ತಮ್ಮ ಬಾಡಿಶೇಮಿಂಗ್ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಿನ್ನೆ ನಟಿ ರಮ್ಯಾ ಚಿತ್ರರಂಗದ ಬಗ್ಗೆ ಬೇಸರವನ್ನು ತೋಡಿಕೊಂಡಿದ್ದರು. ಇದೀಗ ನಟಿ ನೀತು ಕೂಡ ಸಿನಿಮಾ ಕ್ಷೇತ್ರದಲ್ಲಿ ತಮಗಾದ ಅವಮಾನವನ್ನು ನೆನಪು ಮಾಡಿಕೊಂಡಿದ್ದಾರೆ. ತಾವು ದಪ್ಪಗಿದ್ದಾರೆ ಎಂಬ ಕಾರಣಕ್ಕೆ ಸಿನಿಮಾಗಳ ಆಫರ್ ಸಿಗುತ್ತಿರಲಿಲ್ಲವಂತೆ. ಆದರೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದರಂತೆ. ಆದರೆ ಇದರಿಂದ ತಮಗಾದ ನೋವನ್ನು ಹಂಚಿಕೊಂಡಿದ್ದಾರೆ.