Neetu Shetty : ದೇಹದ ಬಗ್ಗೆ ಕಾಮೆಂಟ್ ಮಾಡಿದವರಿಗೆ ನಟಿ ನೀತು ಯಿಂದ ಖಡಕ್ ಉತ್ತರ
Updated:Wednesday, June 15, 2022, 20:48[IST]

ಗಾಳಿಪಟ ಸಿನಿಮಾದಲ್ಲಿ ದಿಗಂತ್ ಹಾಗೂ ನೀತು ಅವರ ಜೋಡಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ನಂತರದಲ್ಲಿ ಮನಸಾರೆ ಸಿನಿಮಾದಲ್ಲಿಯೂ ಕೂಡ ದಿಗಂತ್ ಅವರ ಜೊತೆ ಅಭಿನಯಿಸಿದರು. ನೀತು ಮೊದಲಿಗಿಂತಲೂ ಬಹಳ ದಪ್ಪಗಾಗಿದ್ದು ಸಾಕಷ್ಟು ಜನ ನೀತು ಅವರ ಫೋಟೋಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿರುತ್ತಾರೆ. ಇದಕ್ಕೆ ಸಂದರ್ಶನವೊಂದರಲ್ಲಿ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ ನೀತು.
ಚೆನ್ನಾಗಿರೋ ಊಟ ತಿನ್ನದೇ ಬದುಕಿ ಏನ್ ಪ್ರಯೋಜನ. ನಾನು ಚಿಕ್ಕ ಚಿಕ್ಕ ಹೊಟೇಲನಲ್ಲೂ ತಿಂಡಿ ತಿಂದಿದ್ದೇನೆ. ನಾನು ನನ್ನ ಗೆಳೆಯರೆಲ್ಲ ಸೇರಿ ದೂರ ತಿರುಗಲು ಹೋದಾಗ, ಅಲ್ಲಿ ಕೆಲವೊಂದು ಚಿಕ್ಕ ಚಿಕ್ಕ ಹೊಟೇಲ್ನಲ್ಲಿ ಟೀ ಕುಡಿತೇವೆ. ಫುಡ್ ಸ್ಟ್ರೀಟ್ಗೆ ಹೋಗಿ ತಿಂತೇನೆ ಎಂದು ನಟಿ ನೀತು ಹೇಳಿದ್ದಾರೆ.
ಯಾರ್ ಏನೇ ಅಂದ್ರು, ನಾನ್ ಇರೋದೇ ಹಿಂಗೆ. ನನ್ನ ದೇಹಾಕಾರದ ಬಗ್ಗೆ ಮಾತಾಡೋಕ್ಕೆ ಯಾರಿಗೂ ಅರ್ಹತೆ ಇಲ್ಲಾ ಅಂತಾ ಡೈರೆಕ್ಟ್ ಆಗಿ ಹೇಳಿದ್ದಾರೆ ನಟಿ ನೀತು.
ಒಬ್ಬೊಬ್ಬರ ದೇಹ ಒಂದೊಂದು ರೀತಿ ಇರುತ್ತದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು… ಜನರು ಯೋಚನೆ ಮಾಡುವ ರೀತಿ ಬದಲಾಗಬೇಕು ಎಲ್ಲರೂ ಅವರವರ ಕೆಲಸ ನೋಡಿಕೊಳ್ಳಬೇಕು ಪ್ರತಿಯೊಬ್ಬರಿಗೂ ಗೌರವ ಪ್ರೀತಿ ಸಿಗಬೇಕು ಎಂದು ಹೇಳಿದ್ದಾರೆ ನಟಿ ನೀತು.