Nayantara : ಅಬ್ಬಾ ನಯನತಾರ ಮದುವೆ ವಿಡಿಯೋಗೇ ನೆಟ್ ಫ್ಲಿಕ್ಸ್ ಕೊಟ್ಟದ್ದು ಎಷ್ಟು ಕೋಟಿ ಗೊತ್ತಾ..? ಎಲ್ರೂ ಶಾಕ್

By Infoflick Correspondent

Updated:Thursday, June 9, 2022, 22:30[IST]

Nayantara : ಅಬ್ಬಾ ನಯನತಾರ ಮದುವೆ ವಿಡಿಯೋಗೇ  ನೆಟ್ ಫ್ಲಿಕ್ಸ್  ಕೊಟ್ಟದ್ದು ಎಷ್ಟು ಕೋಟಿ ಗೊತ್ತಾ..? ಎಲ್ರೂ ಶಾಕ್

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರು ಇಂದು ತುಂಬಾ ಗ್ರಾಂಡ್ ಆಗಿ ನಿರ್ಮಾಪಕರಾದ ವಿಘ್ನೇಶ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ನಯನತಾರಾ ಮತ್ತು ಖ್ಯಾತ ನಿರ್ಮಾಪಕ ವಿಜ್ಞೇಶ್ ಅವರು ಕಳೆದ ಕೆಲವು ತಿಂಗಳಿನಿಂದ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿ ಕೇಳಿ ಬಂದಿತ್ತು. 2015ರಲ್ಲಿ ಹಿಟ್ ಸಿನಿಮಾ ಆಗಿದ್ದ ನಾನು ರೌಡಿ ದಾನ್ ಚಿತ್ರಕ್ಕೆ ನಿರ್ಮಾಪಕ ವಿಜ್ಞೇಶ್ ಅವರು ಹಣ ಹೂಡಿಕೆ ಮಾಡಿದ್ದರು. ಈ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ನಟಿ ನಯನತಾರ ಅವರು ಕೂಡ ಅಭಿನಯ ಮಾಡಿದ್ದರು ಎನ್ನಲಾಗಿದೆ. ಹೌದು ನಟಿ ನಯನತಾರಾ ಮತ್ತು ವಿಜ್ಞೇಶ್ ನಡುವೆ ಆಗಲೇ ಸ್ನೇಹ ಆರಂಭವಾಗಿದ್ದು ತದನಂತರದ ದಿನಗಳಲ್ಲಿ ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿತ್ತು. 

ಇತ್ತೀಚಿಗೆ ನಟಿ ನಯನತಾರಾ ಜೋಡಿ ಅತ್ತ ತಮಿಳುನಾಡಿನ ಸಿಎಂ ಭೇಟಿಯಾದ ಮೇಲೆ ಇವರಿಬ್ಬರು ಪಕ್ಕಾ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಖಾತ್ರಿಯಾಗಿತ್ತು ಎಂದು ಹೇಳಬಹುದು. ಆರಂಭದಲ್ಲಿ ಎಲ್ಲಾ ಮದುವೆ ಸಿದ್ಧತೆಗಳನ್ನು ನಡೆಸಿಕೊಂಡಿದ್ದು ತಿರುಪತಿಯಲ್ಲಿ ಮದುವೆಮಾಡಿಕೊಳ್ಳಲು ಇವರು ನಿರ್ಧಾರ ಮಾಡಿದ್ದರು. ಆದರೆ ಕಾರಣಾಂತರದಿಂದ ಅಲ್ಲಿ ಮದುವೆ ಮಾಡಿಕೊಳ್ಳಲಿಲ್ಲ, ಇದೀಗ ಇಂದು ಅತ್ತ ಮಹಾಬಲಿಪುರಂ ಎನ್ನುವ ಸ್ಥಳದಲ್ಲಿ ಸ್ಟಾರ್ ನಟರ ಮತ್ತು ಕುಟುಂಬ ಸ್ನೇಹಿತರ ಸಮ್ಮುಖದಲ್ಲೇ ನಟಿ ನಯನತಾರಾ ವಿಘ್ನೇಶ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ನಟಿ ನಯನತಾರಾ ಮತ್ತು ನಿರ್ಮಾಪಕ ವಿಜ್ಞೇಶ್  ಅವರ ಮದುವೆ ವಿಡಿಯೋ ರೈಟ್ಸ್ ಅನ್ನು ಅತ್ತ ನೆಟ್ಫ್ಲಿಕ್ಸ್ ಪಡೆದಿದ್ದು ಸುಮಾರು 25 ಕೋಟಿ ಹಣ ನೀಡಿ ಎಂದು ಕೇಳಿ ಬಂದಿದೆ.    

ಇವರ ಮದುವೆ ವಿಡಿಯೋವನ್ನ ನೆಟ್ ಫ್ಲಿಕ್ಸ್ 25 ಕೋಟಿ ಹಣ ಕೊಟ್ಟು ಖರೀದಿ ಮಾಡಿಕೊಂಡಿದ್ದಾರೆ. ನೀವು ಕೂಡ ನಟಿ ನಯನತಾರಾ ವಿಜ್ಞೇಶ್ ಮದುವೆ ವಿಡಿಯೋವನ್ನು ನೆಟ್ಫ್ಲಿಕ್ಸ್ ನಲ್ಲಿ ವೀಕ್ಷಿಸಬಹುದು. ಈ ಜೋಡಿಗೆ ಶುಭಕೋರಿ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.