ಗಿಚ್ಚಿ‌ ಗಿಲಿ ಗಿಲಿ‌ ಶೋ ಇಂದ ಸೃಜನ್ ಹೊರನಡೆದಿದ್ಯಾಕೆ? ಜನರ ಆಕ್ರೋಶ !!

By Infoflick Correspondent

Updated:Thursday, July 14, 2022, 14:53[IST]

ಗಿಚ್ಚಿ‌ ಗಿಲಿ ಗಿಲಿ‌ ಶೋ ಇಂದ ಸೃಜನ್ ಹೊರನಡೆದಿದ್ಯಾಕೆ? ಜನರ ಆಕ್ರೋಶ !!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋ ಗಳನ್ನು ಪ್ರಸಾರ ಮಾಡುತ್ತಿದೆ. ಹೊಸ ಹೊಸ ಐಡಿಯಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಕೆಲ ಧಾರಾವಾಹಿಗಳು ಕೂಡ ಅದ್ಭುತವಾಗಿ ಮೂಡಿ ಬರುತ್ತಿವೆ. ಹೀಗಾಗಿ ಪ್ರೇಕ್ಷಕರು ಕಲರ್ಸ್ ಕನ್ನಡ ವಾಹಿನಿಯನ್ನು ನೋಡುತ್ತಿದ್ದಾರೆ. ಕನ್ನಡತಿ, ರಾಮಾಚಾರಿ, ದಾಸ ಪುರಂದರ ಸೇರಿದಂತೆ ಕೆಲ ಧಾರಾವಾಹಿಗಳ ಟಿಆರ್ ಪಿ ರೇಟಿಂಗ್ ಕೂಡ ಏರಿದೆ. ರಾಜಾ-ರಾಣಿ, ನಮ್ಮಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋಗಳು ಅದ್ಭುತವಾಗಿ ಮೂಡಿ ಬರುತ್ತಿವೆ. 

ಗಿಚ್ಚಿ ಗಿಲಿಗಿಲಿ ಕಾಮಿಡಿ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಮೂಡಿ ಬರುತ್ತಿದೆ. ಇದರಲ್ಲಿ ನಟಿ ಶೃತಿ, ಸಾಧು ಕೋಕಿಲ ಜಡ್ಜ್ ಆಗಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೇಲೆ ತುಂಬಾನೇ ಭರವಸೆಯನ್ನು ಇಟ್ಟುಕೊಂಡಿದ್ದರು. ಇದರಲ್ಲಿ ವಂಶಿಕಾ ಸ್ಕಿಟ್ ಗಳು ಅದ್ಭುತವಾಗಿದ್ದು, ಪ್ರೇಕ್ಷಕರು ವಂಶಿಕಾ ನೋಡುವ ಸಲುವಾಗಿಯೇ ಗಿಚ್ಚಿ ಗಿಲಿಗಿಲಿ ನೋಡುತ್ತಾರೆ ಎಂಬಂತಾಗಿದೆ. ಆದರೆ, ಈ ಕಾಮಿಡಿ ಸ್ಕಿಟ್ ಗಳೆಲ್ಲವೂ ಅಸಹ್ಯವಾಗಿವೆ. ಕುಟುಂಬ ಸಮೇತ ಕೂತು ನೋಡುವಂತಹ ಒಂದೇ ಒಂದು ಸ್ಕಿಟ್ ಕೂಡ ಇಲ್ಲ.  

ಇದರಿಂದ ನಟಿ ಶೃತಿ ಅವರ ಕೂಡ ತಮ್ಮ ಇಮೇಜ್ ಅನ್ನು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ, ವಂಶಿಕಾ ಬಾಯಲ್ಲೂ ಕೂಡ ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಹೇಳಿಸಲಾಗುತ್ತಿದೆ. ಇದರಿಂದ ಮಕ್ಕಳು ಕಲಿಯುವುದಾದರೂ ಏನು.? ವಂಶಿಕಾಗೂ ಮುಂದೆ ಕಷ್ಟವಾಗುತ್ತದೆ. ಡಬಲ್ ಮೀನಿಂಗ್ ಇಲ್ಲದೇ ಸ್ಕಿಟ್ ಮಾಡಲು ಸಾಧ್ಯವಿಲ್ಲವೇ ಎಂದು ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ವಂಶೀಕಾ ಭವಿಷ್ಯದ ಬಗ್ಗೆಯೂ ಕಾಳಜಿ ತೋರಿಸಿದ್ದು, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೇಲೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ವೀಕ್ಷಕರು ವ್ಯಕ್ತ ಪಡಿಸಿದ ಕೆಲವು ಅಭಿಪ್ರಾಯ ಇಲ್ಲಿದೆ ನೋಡಿ  :  ಮನರಂಜನೆ ಹೆಸರಲ್ಲಿ ನಮ್ಮ ನಾಡಿನ ಸಂಸ್ಕೃತಿ ಮಾನ ಮರ್ಯಾದೆ ಬೀದಿ ಪಾಲು ಮಾಡ್ತಿದ್ದಾರೆ ಅವನು ಯಾವ ಕಿತ್ತೋದ್ ನನ್ ಮಗ ಸಂಬಾಷಣೆ ಬರೀತಾನೋ ಗೊತ್ತಿಲ್ಲ ಒಂದು ಚೂರು ಭಯ ಭಕ್ತಿ ಇಲ್ಲ ಸಣ್ಣ ಮಕ್ಕಳ ಬಾಯಲ್ಲೂ ಡಬಲ್ ಮೀನಿಂಗ್ ಡೈಲಾಗ್ ಇವರಿಗೇನು ಯಾರ್ ಹಾಳಾದ್ರೂ ಪರವಾಗಿಲ್ಲ ದುಡ್ಡು ಬಂದ್ರೆ ಸಾಕು ಊರಲ್ಲಿ ಇರೋರೆಲ್ಲ ಕಲಾವಿದರೆ ಕಷ್ಟ ಪಟ್ಟು ಬೆವರು ಸುರಿಸಿ ದುಡಿದರೆ ಗೊತ್ತಾಗುತ್ತೆ ದುಡ್ಡಿನ ಬೆಲೆ

ಸರ್ ಮನೆಮಂದಿ ಎಲ್ಲ ಒಟ್ಟಿಗೆ ಕೂತು ಕಂಡಿತಾ ಈ ರಿಯಾಲಿಟಿ ಶೋ ನೋಡಲು ಸಾಧ್ಯ ಇಲ್ಲ....ಇತ್ತೀಚೆಗೆ ಕೆಲವು ಸಿನಿಮಾ ಗಳು ಕೂಡಾ ಹೀಗೆ ಇದೆ...

ಡಬಲ್ ಮೀನಿಂಗ್ ಡೈಲಾಗ್ ನ ಬ್ಯಾನ್ ಮಾಡಿ ಪಸ್ಟು ಕೆಟ್ಟ ಶೋ : ಇದು ವೀಕ್ಷಕರು ವ್ಯಕ್ತ ಪಡಿಸಿದ ಅಭಿಪ್ರಾಯ:  ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಮತ್ತು ಈ ಲೇಖನವನ್ನು ಮರೆಯದೆ ಶೇರ್ ಮತ್ತು ಲೈಕ್  ಮಾಡಿ । ಧನ್ಯವಾದಗಳು