ರಾಕೇಶ್ ನನ್ನವನು ಎಂದು ಸೋನುಗೌಡ ಹೇಳಿದ್ದೇನು ಇಲ್ಲಿದೆ ಸೋನು ಹೊಸ ಪ್ರೇಮಕಹಾನಿ

By Infoflick Correspondent

Updated:Friday, August 12, 2022, 21:09[IST]

ರಾಕೇಶ್ ನನ್ನವನು ಎಂದು ಸೋನುಗೌಡ ಹೇಳಿದ್ದೇನು ಇಲ್ಲಿದೆ ಸೋನು ಹೊಸ ಪ್ರೇಮಕಹಾನಿ

ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಲವ್​ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವರು ಬಿಗ್ ಬಾಸ್​ ಮನೆಯಲ್ಲಿ ಫೇಮಸ್​ ಆಗಲು ಪ್ರೀತಿ-ಪ್ರೇಮದ ಆಟ ಆಡಿದರೆ ಇನ್ನೂ ಕೆಲವರು, ನಿಜವಾಗಿ ಪ್ರೀತಿಸಿ ಮನೆಯಿಂದ ಹೊರಬಂದು ಮದುವೆ ಆಗಿದ್ದಾರೆ. ಇದೀಗ ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ಬಾಸ್ ಮನೆಯಲ್ಲಿ ಇದೀಬ ಸೋನು ಶ್ರೀನಿವಾಸ್​ ಗೌಡಗೆ ರಾಕೇಶ್​ ಮೇಲೆ ಲವ್ ಆಗಿದೆಯಾ?

ಬಿಗ್ ಬಾಸ್ ಮನೆಯಲ್ಲಿ ಸ್ಫೂರ್ತಿ ಗೌಡ ಹಾಗೂ ರಾಕೇಶ್ ಅಡಿಗ ಮಧ್ಯೆ ಏನೋ ನಡೀತಿದೆ ಎಂಬ ಅನುಮಾನ ಶುರುವಾಗಿದೆ. ಈ ಬೆನ್ನಲ್ಲೇ ರಾಕೇಶ್‌ ಅಡಿಗ ಹೆಸರಿಟ್ಟುಕೊಂಡೇ ಸೋನು ಗೌಡ ಆಗಾಗ ಸ್ಫೂರ್ತಿ ಗೌಡ ಜೊತೆ ಜಗಳವಾಡುತ್ತಿರುತ್ತಾರೆ.

ರಾಕೇಶ್ ಅವರು ಎಲ್ಲರ ಜತೆಯೂ ಫ್ಲರ್ಟ್ ಮಾಡುತ್ತಿದ್ದಾರೆ. ಸ್ಫೂರ್ತಿ ಗೌಡ ಅವರ ಜತೆ ಅವರು ಕ್ಲೋಸ್ ಆಗಿದ್ದಾರೆ. ಈ ವಿಚಾರಕ್ಕೆ ಸೋನು ಗೌಡ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದು ಇದನ್ನು ಸೋನು ಅವರೇ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.

ರೂಪೇಶ್‌ ಜೊತೆ ಮಾತನಾಡುವಾಗ, ''ಅವಳು ರಾಕೇಶ್‌ ಜೊತೆ ಅಂಟಿಕೊಂಡು ಕೂತಿದ್ದಳು. ಅದಕ್ಕೆ ನಾನು ಹೇಳಿದೆ ಹೇ ಯಾಕೆ ಅವನೊಟ್ಟಿಗೆ ಅಂಟಿಕೊಂಡೇ ಕೂರುತ್ತೀಯ ಅವನು ನನ್ನ ಹುಡುಗ ಎಂದು ಹೇಳಿದೆ ಎಂದು ಹೇಳಿದ್ದಾರೆ. ಇದಕ್ಕೆ ರೂಪೇಶ್​, ನೀನು ಸೀರಿಯಸ್​ ಆಗಿ ಇದ್ದೀಯಾ? ಎಂದು ಕೇಳಿದ್ದಾರೆ. ಇದಕ್ಕೆ ಸೋನು ಶ್ರೀನಿವಾಸಗೌಡ ಹೌದು ಎಂದು ಹೇಳುತ್ತಾರೆ. ಆದರೆ ರಾಕೇಶ್ ಗಂಭೀರವಾಗಿಲ್ಲ, ನಾನು ಎಲ್ಲರೊಟ್ಟಿಗೆ ಫ್ಲರ್ಟ್ ಮಾಡಿಕೊಂಡು ಇರುತ್ತೀನಿ ಎಂದು ಹೇಳುತ್ತಾನೆ ಏನು ಮಾಡುವುದು ಎಂದು ಹೇಳುತ್ತಾನೆ ಅಂತ ಬೇಸರ ಮಾಡಿಕೊಂಡಿದ್ದಾರೆ ಸೋನು ಶ್ರೀನಿವಾಸಗೌಡ.

ನನಗೆ ರಾಕೇಶ್ ಇಷ್ಟವಾಗಿದ್ದಾನೆ. ಆದರೆ, ಆತ ಎಲ್ಲರ ಜತೆಯೂ ಫ್ಲರ್ಟ್ ಮಾಡುತ್ತಾನೆ. ಅದು ನನಗೆ ಇಷ್ಟವಿಲ್ಲ' ಎಂದರು. ಆ ಬಳಿಕ ರಾಕೇಶ್ ಬಳಿ ತೆರಳಿದ ಸೋನು ಗೌಡ, 'ನಿನ್ನ ಮೇಲೆ ನಿಜಕ್ಕೂ ಫೀಲಿಂಗ್ಸ್​ ಇದೆ' ಎಂದರು. ಇದಕ್ಕೆ ರಾಕೇಶ್​ 'ನಿಜನಾ?' ಎಂದು ಮರು ಪ್ರಶ್ನೆ ಮಾಡಿದ್ದರು. 'ನಿನ್ನ ಮೇಲೆ ಫೀಲಿಂಗ್ಸ್​ ಇದೆ. ಬೇಕು ಅಂದರೆ ಒಪ್ಪಿಕೋ, ಇಲ್ಲ ಅಂದ್ರೆ ಇಲ್ಲ. ನಾನು ಹೇಳಬೇಕು ಅನ್ನಿಸ್ತು ಹೇಳಿದೆ' ಎಂದರು ಸೋನು. ಇದಕ್ಕೆ ರಾಕೇಶ್ ಪ್ರತಿಕ್ರಿಯಿಸಿದ್ದು, 'ನಿನ್ನ ಫೀಲಿಂಗ್ಸ್​​ ಜತೆ ಆಡಲ್ಲ' ಎಂದಿದ್ದಾರೆ.