KGF 2 : ಹೊಸ ದಾಖಲೆ ಬರೆದ ನಟ ಯಶ್! ಅದೇನು ಗೊತ್ತೆ ?
Updated:Monday, May 9, 2022, 07:40[IST]

ಭಾರತೀಯ ಚಿತ್ರರಂಗದ ಪಾಲಿಗೆ ದೊಡ್ಡ ದಾಖಲೆ ಬರೆದ 'ಕೆಜಿಎಫ್' ಮೂಲಕ ಯಶ್ ಟಾಪ್ ಸ್ಟಾರ್ ಆಗಿದ್ದಾರೆ. ಕೆಜಿಎಫ್ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿ ಹೊಸ ದಾಖಲೆ ಸೃಷ್ಟಿಸಿದೆ. ಇದೀಗ ಕೆಜಿಎಫ್2 ನಾಯಕ ಯಶ್ ಕೂಡ ಹೊಸ ದಾಖಲೆ ಬರೆದಿದ್ದಾರೆ.
ಕನ್ನಡದ ಯಾವ ನಟರು ಮಾಡದ ದಾಖಲೆ ನಟ ಯಶ್ ಮಾಡಿದ್ದಾರೆ. ಯಶ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುತ್ತಾರೆ. ಸಿನಿಮಾ ಮತ್ತು ವೈಯಕ್ತಿಕ ವಿಚಾರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಯಶ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿ ಹೊಸ ದಾಖಲೆ ಬರೆದಿದ್ದಾರೆ.
ಈಗ ಯಶ್ ಇನ್ಸ್ಟಾಗ್ರಾಂನಲ್ಲಿ 9 ಮಿಲಿಯನ್ ಗೂ ಹೆಚ್ಚು ಫಾಲೋವರ್ಸಗಳನ್ನು ಹೊಂದಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ನಟರಲ್ಲಿ ಯಶ್ ಮೊದಲ ಸ್ಥಾನದಲ್ಲಿ ಇದ್ದಾರೆ. ಚಂದನವದಲ್ಲಿ ಅತಿ ಹೆಚ್ಚು ಫಾಲವರ್ಸ ಹೊಂದಿದ ನಟ ಇವರೇ. ಇನ್ನು ಯಶ್ ಬಿಟ್ಟರೆ ನಟ ಪುನೀತ್ ರಾಜ್ಕುಮಾರ್ ಇನ್ಸ್ಟಾಗ್ರಾಂ ಖಾತೆಗೆ ಹೆಚ್ಚಿನ ಫಾಲೋವರ್ಸ್ಗಳಿವೆ . ನಂತರ ನಟ ಸುದೀಪ್ ಖಾತೆ ನಂತರ ನಟ ದರ್ಶನ್ ಇದ್ದಾರೆ.