ಸಿನಿಮಾ ರಿಯಾಲಿಟಿ ಶೋಗಳಲ್ಲಿ ಬಾಲನಟರು ಅಭಿನಯಿಸುವಾಗ ಇನ್ನು ಈ ನಿಯಮಗಳ ಪಾಲನೆ ಕಡ್ಡಾಯ

By Infoflick Correspondent

Updated:Sunday, June 26, 2022, 14:36[IST]

ಸಿನಿಮಾ ರಿಯಾಲಿಟಿ ಶೋಗಳಲ್ಲಿ ಬಾಲನಟರು ಅಭಿನಯಿಸುವಾಗ ಇನ್ನು ಈ ನಿಯಮಗಳ ಪಾಲನೆ ಕಡ್ಡಾಯ

ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಅನೇಕರು ಬಾಲ ನಟ-ನಟಿಯಾಗಿ ನಟಿಸಿ ಪ್ರಖ್ಯಾತಿ ಗಳಿಸಿದವರಿದ್ದಾರೆ, ಈಗಲೂ ಹಲವರು ಬಾಲ ಕಲಾವಿದರಾರಗಿ ಪರದೆ ಮೇಲೆ ಅಭಿನಯ ಮಾಡುತ್ತಿದ್ದಾರೆ. ಕನ್ನಡದ ಧಾರಾವಾಹಿಗಳಲ್ಲಿ ಅನೇಕ ಮಕ್ಕಳು ನಟಿಸಿದ್ದಾರೆ. 

ಸಿನಿಮಾ ರಿಯಾಲಿಟಿ ಶೋಗಳಲ್ಲಿ ಬಾಲನಟರು ದುರ್ಬಳಕೆಯನ್ನು ತಡೆಯಲು ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈಗಾಗಲೇ ಕರಡು ನಿಯಮವನ್ನು ರೂಪಿಸಿದೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಇಲಾಖೆಯು ಪ್ರಸ್ತಾವಿತ ನಿಯಂತ್ರಣ ಮಾನದಂಡಗಳ ಪ್ರಕಾರ, ನಿರ್ಮಾಪಕರು ಮಕ್ಕಳನ್ನು ಚಿತ್ರೀಕರಣದಲ್ಲಿ ಬಳಸಿಕೊಳ್ಳುವ ಮೊದಲು ಜಿಲ್ಲಾಧಿಕಾರಿಗಳ ಅನುಮೋದನೆಯನ್ನು ಪಡೆಯಬೇಕು ಮತ್ತು ಆ ಮಗುವು ನಿಂದನೆ ಅಥವಾ ಶೋಷಣೆಗೆ ಒಳಗಾಗದಂತೆ ತಡೆಯಲು ಅವರು ತೆಗೆದುಕೊಂಡ ಮುನ್ನೆಚ್ಚರಿಕೆಗಳ ಕುರಿತು ಲಿಖಿತ ಹೇಳಿಕೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು.