ನಟ ನಿಖಿಲ್ ಹಾಗೂ ರೇವತಿ ಮಗ ಅದೆಷ್ಟು ಚೆಂದವಾಗಿ ಆಡುತ್ತಾನೆ ಗೊತ್ತಾ..? ಕ್ಯೂಟ್ ವಿಡೀಯೋ ವೈರಲ್

By Infoflick Correspondent

Updated:Wednesday, June 22, 2022, 07:42[IST]

ನಟ ನಿಖಿಲ್ ಹಾಗೂ ರೇವತಿ ಮಗ ಅದೆಷ್ಟು ಚೆಂದವಾಗಿ ಆಡುತ್ತಾನೆ ಗೊತ್ತಾ..? ಕ್ಯೂಟ್ ವಿಡೀಯೋ ವೈರಲ್

ಇತ್ತೀಚೆಗಷ್ಟೇ ಗೌಡರ ಕುಟುಂಬದಲ್ಲಿ ಒಂದು ಸಂತಸದ ಕಾರ್ಯಕ್ರಮ ನಡೆಯಿತು. ಹೌದು ನಿಖಿಲ್ ಕುಮಾರಸ್ವಾಮಿ  (Nikil Kumaraswamy) ಹಾಗೂ ಅವರ ಪತ್ನಿ ರೇವತಿ ಅವರು ಕಳೆದ ಕೋರನ ಸಂದರ್ಭದಲ್ಲಿ ಸರಳವಾಗಿಯೇ ಸ್ನೇಹಿತರ ಸಮ್ಮುಖದಲ್ಲಿ ಹಾಗೂ ಕುಟುಂಬಸ್ಥರ ನಡುವೆ ವಿವಾಹವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರು ಮದುವೆಯಾದ ಹೊಸತನದರಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ ಎನ್ನಬಹುದು. ಆಗಾಗ ಅವರ ತೋಟದ ಮನೆಯ ಮುಂಭಾಗದಲ್ಲಿ ಹಾಗೆ ವಾಯುವಿಹಾರ ಮಾಡುವಾಗ ಕಾಣಿಸಿಕೊಳ್ಳುತ್ತಿದ್ದರು. ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಯವರು ತಂದೆ ತಾಯಿ ಆಗುತ್ತಿದ್ದಾರೆ ಎನ್ನುವ ವಿಚಾರವನ್ನು ಅವರ ತಂದೆ ಕುಮಾರಸ್ವಾಮಿ, ಹಾಗೂ ತಾತ ಎಚ್ಡಿ ದೇವೇಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮುಂದೆ ಹೇಳಿದ್ದ ಪರಿ ನಿಜಕ್ಕೂ ನೋಡುವಂತಿತ್ತು.

ಹೌದು ಇತ್ತೀಚಿಗಷ್ಟೇ ನಟ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರಿಗೆ ಒಂದು ಮುದ್ದಾದ ಗಂಡು ಮಗು ಆಗಿದೆ. ಆ ಮುದ್ದು ಮಗುವಿಗೆ ಈಗಾಗಲೇ ನಾಮಕರಣ ಕಾರ್ಯ ಕೂಡ ಮುಗಿದಿದೆ. ನಾಮಕರಣ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಆಗಮಿಸಿದ್ದರು. ಹಾಗೆ ರಾಜಯಕಿಯದ ಪ್ರಭಾವ ವ್ಯಕ್ತಿಗಳು ಸಹ ಆಗಮಿಸಿ ದಂಪತಿಗೆ ಹಾಗೂ ಮಗುವಿಗೆ ಶುಭ ಕೋರಿ ಹೋದರು. ಮಗುವಿಗೆ ಮುದ್ದಾಗಿ ಅವ್ಯಾನ್ ದೇವ್ ಗೌಡ ಎಂಬುದಾಗಿ ಹೆಸರನ್ನ ಸಹ ಇಡಲಾಯಿತು. ಅವ್ಯಾನ್ ದೇವ್ ನೋಡಲು ತುಂಬಾ ತುಂಟ ಮಗುವಿನಂತೆ ಕಾಣುತ್ತಿದ್ದಾನೆ. ಇದೀಗ ತಂದೆ ತಾಯಿ ಮಡಿಲಲ್ಲಿ ಕ್ಯೂಟ್ ಕ್ಯೂಟ್ ಆಗಿ ಆಟವನ್ನು ಆಡುತ್ತಿದ್ದಾನೆ ಅವ್ಯಾನ್ ಎಂದು ಹೇಳಬಹುದು. ರೇವತಿ ಹಾಗೂ ನಿಖಿಲ್ ಕುಮಾರಸ್ವಾಮಿ ಜೋಡಿಗೆ ಮುದ್ದಾದ ಅವ್ಯಾನ್ ದೇವ ಹುಟ್ಟಿದ್ದು ಸಂತಸ ಕ್ಷಣದ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಅಸಲಿಗೆ ನಿಖಿಲ್ ಕುಮಾರಸ್ವಾಮಿ ಪುತ್ರ ಹೇಗೆಲ್ಲಾ ಆಟ ಆಡುತ್ತಾನೆ ಗೊತ್ತಾ ಇಲ್ಲಿದೆ ನೋಡಿ ವಿಡಿಯೋ. ಒಮ್ಮೆ ನೀವೂ ಸಹ ನೋಡಿ. ನಿಜಕ್ಕೂ ಮಗುವಿನ ಆಟವನ್ನು ನೋಡಿ ಹಾಗೆ ಆ ನಗುವನ್ನ ನೋಡಿ, ನಿಖಿಲ್ ಹಾಗೂ ರೇವತಿ ಅದೆಷ್ಟು ಖುಷಿ ಪಟ್ಟಿದ್ದಾರೆ ಎಂದು ತಿಳಿಯುತ್ತದೆ. ವಿಡೀಯೋಗೆ ಒಂದು ಮೆಚ್ಚುಗೆ ತಿಳಿಸಿ, ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....