ಪತ್ನಿ ರೇವತಿ ಹಾಗೂ ಮಗನ ಬಗ್ಗೆ ವಿಶೇಷವಾದ ವಿಚಾರ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ
Updated:Saturday, April 23, 2022, 09:35[IST]

ದೇವೇಗೌಡರ ಕುಟುಂಬಕ್ಕೆ ಯುವರಾಜ ಬಂದು ಅದಾಗಲೇ ಏಳು ತಿಂಗಳಾಗಿದೆ. ರೇವತಿ ಗಂಡು ಮಗುವಿಗೆ ಜನ್ಮ ನೀಡಿದಾಗ ಮಗುವಿನ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಅದು ಬಿಟ್ಟರೆ ನಿಖಿಲ್ ಆಗಲೀ ಅಥವಾ ಅವರ ಕುಟುಂಬದವರಾಗಲೀ ಮಗುವಿನ ಫೋಟೋವನ್ನು ಎಲ್ಲೂ ಹಂಚಿಕೊಂಡಿರಲಿಲ್ಲ. ಆದರೆ ನಿಖಿಲ್ ಅಭಿಮಾನಿಗಳು ಮಾತ್ರ ಮಗುವನ್ನು ಮಾಧ್ಯಮದ ಎದುರು ಕರೆದುಕೊಂಡು ಬಂದು ಕರುನಾಡಿಗೆ ಪರಿಚಯಿಸುತ್ತಾರೆ ಎಂದು ಕಾಯುತ್ತಲೇ ಇದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಮಾಧ್ಯಮದ ಎದುರು ಮಾತನಾಡಿದ ನಿಖಿಲ್ ಶಾಕ್ ಕೊಟ್ಟಿದ್ದರು.
ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ದ ನಿಖಿಲ್ ಕುಮಾರಸ್ವಾಮಿ ಅವರು ಬೇಸರ ಮೂಡಿಸಿದ್ದರು. ತಮ್ಮ ಮಗುವಿನ ಬಗ್ಗೆ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ನಮ್ಮ ಮಗು ರಾಜ, ಯುವರಾಜನಲ್ಲ. ಆತನನ್ನು ಎಕ್ಸ್ ಪೋಸ್ ಮಾಡುವುದು ನನಗೆ ಇಷ್ಟವಿಲ್ಲ. ಹಾಗಾಗಿ ಅವನ ಬಗ್ಗೆಯಾಗಲೀ, ಅವನ ಫೋಟೋ ಆಗಲೀ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಮಗು ಜನಿಸಿದಾಗಲೂ ಮಾಧ್ಯಮಕ್ಕೆ ಫೋಟೋ ಸಿಕ್ಕಿದ್ದು ಆಕಸ್ಮಿಕವಷ್ಟೇ. ನನ್ನ ಮಗನನ್ನು ಸಿಂಪಲ್ ಆಗಿ ಬೆಳೆಸಬೇಕು. ಜೀವನದ ಬಗ್ಗೆ ಮಕ್ಕಳಿಗೆ ನಾವು ಪೋಷಕರು ಪ್ರತೀ ಹಂತದಲ್ಲೂ ತಿಳಿಸಿಕೊಡಬೇಕು. ನನ್ನ ಮಗನನ್ನು ಸಾಮಾನ್ಯನಂತೆ ಬೆಳೆಸಬೇಕು. ಹಾಗಾಗಿ ನಾನು ನನ್ನ ಪುತ್ರನನ್ನು ಹೆಚ್ಚು ಎಕ್ಸ್ ಪೋಸ್ ಮಾಡೋದಿಲ್ಲ ಎಂದಿದ್ದಾರೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170
ನನ್ನ ಮಗ ಯಾರ ಥರ ಇದ್ದಾನೆ ಎಂಬುದು ಇನ್ನೂ ಗೊತ್ತಾಗಿಲ್ಲ. ಅವನಿಗೆ ಇನ್ನೂ ಹೆಸರಿಟ್ಟಿಲ್ಲ. 9ನೇ ತಿಂಗಳಿಗೆ ನಾಮಕರಣ ಮಾಡೋದು ಹಾಗಾಗಿ ಆಗಲೇ ಹೆಸರು ಇಡೋದು. ಅವನು ಸಾಮಾನ್ಯರಂತೆ ಬೆಳೆಯುತ್ತಿದ್ದಾನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಇನ್ನು ರೇವತಿ ಅವರು ಸೆಪ್ಟೆಂಬರ್ 24ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಪ್ಪನಾದ ಸಂಭ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮಗುವನ್ನು ಎತ್ತಿಕೊಂಡು ತಂದೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತೋರಿಸುತ್ತಿದ್ದ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಅದೊಂದು ಫೋಟೋ ಬಿಟ್ಟು ನಿಖಿಲ್ ಪುತ್ರನ ಫೋಟೋ, ವೀಡಿಯೋ ಯಾರಿಗೂ ಸಿಕ್ಕಿಲ್ಲ. ಇದೀಗ ಮಗನ ಫೋಟೋವನ್ನು ನಿಖಿಲ್ ಅವರೇ ಹಂಚಿಕೊಂಡಿದ್ದಾರೆ.
ನಿಖಿಲ್ ಹಾಗೂ ರೇವತಿ ಪುತ್ರನಿಗೆ ಏಳು ತಿಂಗಳು. ಮಗನಿಗೆ ಒಂಭತ್ತನೇ ತಿಂಗಳಿನಲ್ಲಿ ನಾಮಕರಣ ಮಾಡುವುದಾಗಿ ಈ ಹಿಂದೆಯೇ ತಿಳಿಸಿದ್ದರು. ಇನ್ನು ಇದೀಗ ಕುಟುಂಬ ಸಮೇತ ಗೋವಾಗೆ ಪ್ರವಾಸ ಹೋಗಿರುವ ನಿಖಿಲ್ ಕುಮಾರಸ್ವಾಮಿಅವರು. ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಮಗನ ಫೋಟೋ ಹಂಚಿಕೊಂಡಿದ್ದಾರೆ. ಐ ಲವ್ ಯೂ ಮಗನೇ ಎಂದು ಬರೆದುಕೊಂಡಿದ್ದಾರೆ. ಬಳಿಕ ಪತ್ನಿ ರೇವತಿಯೊಂದಿಗಿನ ಫೋಟೋ ಹಾಕಿದ್ದು, ನೀನೆ ಎಲ್ಲಾ. ನಿನ್ನಿಂದಲೇ ನಾನು ಹಾಗೂ ನನ್ನ ಜೀವನ ಸಂಪೂರ್ಣಗೊಂಡಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.