Nikil Kumaraswamy : ನಿಖಿಲ್ ಕುಮಾರಸ್ವಾಮಿ ಪುತ್ರನ ಅದ್ದೂರಿ ನಾಮಕರಣ..! ಖುಷಿಯಲ್ಲಿ ಇಡೀ ಗೌಡರ ಕುಟುಂಬ..!

By Infoflick Correspondent

Updated:Wednesday, June 8, 2022, 15:29[IST]

Nikil Kumaraswamy :  ನಿಖಿಲ್ ಕುಮಾರಸ್ವಾಮಿ ಪುತ್ರನ ಅದ್ದೂರಿ ನಾಮಕರಣ..! ಖುಷಿಯಲ್ಲಿ ಇಡೀ ಗೌಡರ ಕುಟುಂಬ..!

ಕನ್ನಡ ಚಿತ್ರರಂಗದ ನಟ ನಿಖಿಲ್ ಕುಮಾರಸ್ವಾಮಿ ಅವರು ಇಂದು ತಮ್ಮ ಮಗನ ನಾಮಕರಣದ ಕಾರ್ಯಕ್ರಮದಲ್ಲಿ ಖುಷಿಯಲ್ಲಿದ್ದಾರೆ. ಹೌದು ಕಳೆದ ಕೊರೋನ ಸಂದರ್ಭದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಅವರು ರೇವತಿ ಅವರ ಜೊತೆ ದಾಂಪತ್ಯ ಜೀವನವನ್ನು ಆರಂಭಿಸಿದರು. ಕರೋನಾ ಸಂದರ್ಭ ಇದ್ದ ಕಾರಣಕ್ಕಾಗಿ ಇವರ ಮದುವೆ ತುಂಬಾ ಸಿಂಪಲ್ ಆಗಿಯೇ ಜರುಗಿತ್ತು. ಕಳೆದ ಒಂದು ವರ್ಷದ ಹಿಂದೆ ರೇವತಿ ಅವರು ತಾಯಿ ಆಗುತ್ತಿರುವ ಸುದ್ದಿಯೂ ಹೊರಬಿದ್ದಿತ್ತು. ಈ ಸುದ್ದಿಯನ್ನು ಅವರ ಮಾವ ಹೆಚ್ ಡಿ ಕುಮಾರಸ್ವಾಮಿ ಅವರ ತಂದೆ ಹೆಚ್ ಡಿ ದೇವೇಗೌಡರು  ಸೋಶಿಯಲ್ ವಿಡಿಯೋದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದರು.

ಹೌದು ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರು ಈಗ ತಂದೆ-ತಾಯಿಗಳಾಗಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಹೆಚ್ಚು ಸಂತಸದಲ್ಲಿ ರೇವತಿ ಅವರು ಸಹ ಖುಷಿಯಲಿದ್ದಾರೆ. ಇಂದು ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಇಡೀ ಕುಟುಂಬ ಮಗನ ನಾಮಕರಣದ ಕಾರ್ಯದಲ್ಲಿ ತೊಡಗಿರರು. ಈ ಕಾರ್ಯಕ್ರಮ ರಂಗೇರಿತ್ತು ಎನ್ನಬಹುದು. ನಿಖಿಲ್ ಅವರ ಮಗನಿಗೆ ಅವ್ಯಾನ್ ದೇವ್ ಎನ್ನುವ ಹೆಸರಿಡುವ ಮೂಲಕ ನಾಮಕರಣ ಮಾಡಿದ್ದಾರೆ. ಹೌದು ಕಾರ್ಯಕ್ರಮಕ್ಕೆ ನಿಖಿಲ್ ಅವರ ತಂದೆ-ತಾಯಿ ಆಗಮಿಸಿದ್ದು, ಜೊತೆಗೆ ತಾತ ಎಚ್ ಡಿ ದೇವೇಗೌಡ ಅವರು ಕೂಡ ಆಗಮಿಸಿದ್ದರು. ಕೆಲವು ಕಾರ್ಯಗಳನ್ನು ಕೈಗೊಂಡ ಇಡೀ ಗೌಡರ ಕುಟುಂಬ ಶಾಸ್ತ್ರೋಕ್ತವಾಗಿ ಮೊಮ್ಮಗನ ನಾಮಕರಣ ಆಚರಣೆ ಮಾಡಿತು.   

ಈ ಪುಟ್ಟ ಕಂದನಿಗೆ ಅವ್ಯಾನ್ ದೇವ್ ಎನ್ನುವ ಹೆಸರು ಇಡುತ್ತಿದ್ದಂತೆ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಮಗನಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿ. ನೀವು ಕೂಡ ಶುಭಹಾರೈಸಿ ಅವ್ಯಾನ್ ದೇವ್ ಎನ್ನುವ ಹೆಸರಿನ ಒಳ ಅರ್ಥ ನಿಮಗೆ ಗೊತ್ತಿದ್ದರೆ ಕಾಮೆಂಟ್ ಮೂಲಕ ತಿಳಿಸಿ. ಹಾಗೇನೇ ಈ ಮಾಹಿತಿಯ ಶೇರ್ ಮಾಡಿ ಧನ್ಯವಾದಗಳು.( video credit : kannada pichhar )