ಕುಮಾರಸ್ವಾಮಿ ಮನೆಯಲ್ಲಿ ಹಬ್ಬದ ವಾತಾವರಣ: ಸೊಸೆ ಸೀಮಂತಕ್ಕೆ ಯಾರು ಯಾರು ಬಂದಿದ್ದಾರೆ ನೋಡಿ..

Updated: Tuesday, September 14, 2021, 18:40 [IST]

ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಈಗ 8 ತಿಂಗಳ ಗರ್ಭಿಣಿಯಾಗಿರೋದು ಎಲ್ಲರಿಗೂ ಗೊತ್ತಿದೆ. ರೇವತಿ ಗರ್ಭಿಣಿಯಾಗಿರುವುದರಿಂದ ಮಾಜಿ ಸಚಿವ ಕುಮಾರಸ್ವಾಮಿ ಅವರ ಮನೆಯಲ್ಲಿ ಹಬ್ಬದ ಕಳೆ ಸೃಷ್ಟಿಯಾಗಿದೆ. ರೇವತಿಗೆ ಸೀಮಂತ ಕಾರ್ಯ ನಡೆಸಲು ಕುಮಾರಸ್ವಾಮಿ ಕುಟುಂಬ ತೀರ್ಮಾನಿಸಿದೆ. ಎಚ್‌ ಎಸ್‌ ಆರ್‌ ಲೇಔಟ್‌ ನಲ್ಲಿರುವ ಮಾನ್ವಿ ಕನ್ವೆನ್ಷನ್‌ ಹಾಲ್‌ ನಲ್ಲಿ ಸೀಮಂತ ಕಾರ್ಯಕ್ರಮ ನಡೆಸುತ್ತಿದ್ದಾರೆ. ಸಮಾರಂಭದಲ್ಲಿ ಕೇವಲ ಕುಟುಂಬಸ್ಥರು ಹಾಗೂ  ಆಪ್ತರಷ್ಟೇ ಭಾಗಿಯಾಗಿದ್ದಾರೆ. 

ಜೂನ್ ತಿಂಗಳು ರೇವತಿ ಹುಟ್ಟುಹಬ್ಬದ ದಿನದಂದು ಮಾಜಿ ಸಿಎಂ ಕುಮಾರಸ್ವಾಮಿ ಈ ಸಿಹಿ ಸುದ್ದಿಯನ್ನು ಬಹಿರಂಗ ಪಡಿಸಿದ್ದರು. ಕೊರೊನಾ ಸೋಂಕು ತಗುಲಿದ್ದರಿಂದ ರೇವತಿ ಹಾಗೂ ನಿಖಿಲ್ ಆತಂಕಕ್ಕೊಳಗಾಗಿದ್ದರು. ಹೀಗಾಗಿ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಹಲವು ದಿನ ಮುಚ್ಚಿಟ್ಟಿದ್ದರು. ಇನ್ನು ಈ ನಡುವೆ ರೇವತಿಗೆ ಯಾವ ಮಗುವಾಗುತ್ತೆ ಎಂಬ ಸುದ್ದಿಯು ಹೊರ ಬಿದ್ದಿದೆ. ಇತ್ತೀಚೆಗಷ್ಟೇ, ನಿಖಿಲ್ ಅವರ ಮನೆಗೆ ಭೇಟಿ ಕೊಟ್ಟ ವಿನಯ್ ಗುರೂಜಿ ಈ ಸತ್ಯವನ್ನು ಹೊರ ಹಾಕಿದ್ದಾರೆ. ಈ ಮಗು ಜನಿಸಿದ ಮೇಲೆ ನಿಖಿಲ್ ಲಕ್ ಡಬಲ್ ಆಗುತ್ತಂತೆ. ಇನ್ನು ಎತ್ತರಕ್ಕೆ ನಿಖಿಲ್ ಬೆಳೆಯುತ್ತಾರೆ ಎಂದು ಗುರೂಜಿ ಹೇಳಿದ್ದಾರೆ. ಶಾಸಕರಾಗುವ ಅದೃಷ್ಟವೂ ಇದೆಯಂತೆ. ಇನ್ನು ನಿಖಿಲ್-ರೇವತಿಗೆ ಗಂಡು ಮಗು ಆಗುತ್ತದೆ ಎಂದು ವಿನಯ್ ಗುರೂಜಿ ಹೇಳಿದ್ದರು. .

ಕಳೆದ ವರ್ಷ ಲಾಕ್ ಡೌನ್ ವೇಳೆ ನಿಖಿಲ್-ರೇವತಿ ಏಪ್ರಿಲ್ 17, 2020 ರಂದು ಬಿಡದಿ ತೋಟದ ಮನೆಯಲ್ಲಿ ಸಪ್ತಪದಿ ತುಳಿದಿದ್ದರು. ನಿಖಿಲ್ ಕುಮಾರಸ್ವಾಮಿ-ರೇವತಿ ದಂಪತಿ ಸದ್ಯದಲ್ಲೇ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಾತನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಇನ್ನು ಹಲವು ದಿನಗಳ ನಂತರ ನಿಖಿಲ್ ಕುಮಾರಸ್ವಾಮಿ ರೈಡರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೂ ಹೊರ ಬಿದ್ದಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದು ಮೂಡಿಬರುತ್ತಿದೆ. ಇದರಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕರಾಗಿ ನಟಿಸುತ್ತಿದ್ದಾರೆ. (ವಿಡಿಯೋ ಕೃಪೆ : ಪಬ್ಲಿಕ್ ಟಿವಿ )