Druva sarja : ದ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟನ ಎಂಟ್ರಿ..! ಯಾರು ಗೊತ್ತಾ..?

By Infoflick Correspondent

Updated:Monday, June 20, 2022, 16:26[IST]

Druva sarja : ದ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟನ ಎಂಟ್ರಿ..! ಯಾರು ಗೊತ್ತಾ..?

ಬಹುಬೇಡಿಕೆಯ ನಟ ಹಾಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಸ್ಟಾರ್ ನಟ ಧ್ರುವ ಸರ್ಜಾ ಅವರು ಅವರದೇ ಆದ ವಿಭಿನ್ನ ಶೈಲಿಯ ಅಭಿನಯದ ಮೂಲಕ ಹಾಗೂ ಮಾಸ್ ಮತ್ತು ಕ್ಲಾಸ್ ಡೈಲಾಗ್ ಮೂಲಕ ಲವರ್ ಬಾಯ್ ಆಗಿ ಆರಂಭದ ಮೊದಲ ಸಿನಿಮಾದಲ್ಲಿ ಅಭಿನಯ ಮಾಡಿ ಎಲ್ಲರ ಹೃದಯ ಕದ್ದು ಬಿಟ್ಟರು. ಮಾಸ್ ಆಕ್ಟಿಂಗ್ ಮೂಲಕ ಅವರದೇ ಆದ ಅಪಾರ ಅಭಿಮಾನಿ ಬಳಗವನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ ಧ್ರುವ ಸರ್ಜಾ. ಹೌದು ಧ್ರುವ ಸರ್ಜಾ ಅವರು ಮಾಡಿರುವುದು ಬೆರಳಣಿಕೆ ಸಿನಿಮಾಗಳು ಮಾತ್ರ. ಇವರು ಮಾಡಿರುವ ಮೂರ್ನಾಲ್ಕು ಸಿನಿಮಾದಲ್ಲಿ ಇಡೀ ಭಾರತದ ಸಿನಿಪ್ರಿಯರ ಮನಸ್ಸು ಗೆಲ್ಲುವಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ ಎನ್ನಬಹುದು. ಹೌದು ಧ್ರುವ ಸರ್ಜಾ ಅವರ ಮುಂಬರುವ ಮಾರ್ಟಿನ್ ಚಿತ್ರಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಶೂಟಿಂಗ್ ಕೂಡ ಆರಂಭ ಆಗಿದ್ದು ಸರ್ಕಸ್ ಮಾಡುತ್ತಿದ್ದಾರೆ. 

ಹೌದು ಶೂಟಿಂಗ್ ಸಹ ಆರಂಭವಾಗಿರುವ ಸುದ್ದಿ ಮೊನ್ನೆ ಒಂದು ಸಂದರ್ಶನದಲ್ಲಿ ಚಿತ್ರತಂಡದ ಮೂಲಕವೆ ಹೊರ ಬಿದ್ದಿದೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಕೂಡ ಹೆಚ್ಚು ವೈರಲ್ ಆಗಿತ್ತು. ನಟ ಧ್ರುವ ಸರ್ಜಾ ಅವರು ಮಾರ್ಟಿನ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ಹೊರಹೊಮ್ಮಲಿದ್ದಾರೆ. ಸಿನಿಮಾಗೆ ನಿರ್ದೇಶನ ಮಾಡಿದ್ದು ಸ್ಟಾರ್ ನಿರ್ದೇಶಕ ಎಪಿ ಅರ್ಜುನ್ ಅವರು. ಈ ಮಾರ್ಟಿನ್ ಚಿತ್ರವನ್ನು ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ. ಇದೇ ವರ್ಷ ಸೆಪ್ಟಂಬರ್ ಮೂವತ್ತಕ್ಕೆ ತೆರೆಗೆ ಅಪ್ಪಳಿಸಲಿದೆ ಮಾರ್ಟಿನ್ ಚಿತ್ರ. ಇದೀಗ ಇನ್ನೊಂದು ಹೊಸ ಸುದ್ದಿ ಚಿತ್ರತಂಡದಿಂದ ಕೇಳಿಬಂದಿದ್ದು, ಧ್ರುವ ಸರ್ಜಾರ ಮಾರ್ಟಿನ್ ಚಿತ್ರಕ್ಕೆ ಧ್ರುವ ಸರ್ಜಾ ಜೊತೆ ಸೆಣಸಾಡಲು ಬಾಲಿವುಡ್ನ ಖ್ಯಾತ ನಟ ವಿಲನ್ ಆಗಿ ಬರುತ್ತಿದ್ದಾರಂತೆ.

ಹೌದು ಖಳನಾಯಕನ ಪಾತ್ರದಲ್ಲಿ ಬಾಲಿವುಡ್ನ ಈ ಖ್ಯಾತ ನಟ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿಕಿತಿನ್ ಧೀರ್ ಒಬ್ಬ ಭಾರತೀಯ ನಟ, ಇವರು ಹಿಂದಿ ಮತ್ತು ತೆಲುಗು ಭಾಷೆಯ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಫಿಯರ್ ಫ್ಯಾಕ್ಟರ್ ಖತ್ರೋನ್ ಕೆ ಖಿಲಾಡಿ 5 ನಲ್ಲಿ ಸ್ಪರ್ಧಿಯಾಗಿದ್ದರು. ಚೆನ್ನೈ ಎಕ್ಸ್ಪ್ರೆಸ್ ಸಿನಿಮಾದಲ್ಲಿಯೂ ಸೈ ಎನಿಸಿಕೊಂಡವರು.. ಈಗ ಈ ಖ್ಯಾತ ಬಾಲಿವುಡ್ ನಟ ನಿಕಿತಿನ್ ಅವರು ಮಾರ್ಟಿನ್ ಚಿತ್ರದ ಮೂಲಕ ಕನ್ನಡದ ಸಿನಿ ಜರ್ನಿ ಆರಂಭಿಸಿದ್ದಾರೆ. ಎಲ್ಲರೂ ದ್ರುವ ಸರ್ಜಾ ಮಾರ್ಟಿನ್ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ಜೊತೆಗೆ ತಮಿಳು ಭಾಷೆಯಲ್ಲಿ ಮಾರ್ಟಿನ್ ಬರುತ್ತಿರುವ ಈ ಖುಷಿ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹೇಳಿ. ನಟಿ
ವೈಭವಿ ಶಾಂಡಿಲ್ಯ ಎಂಬುವವರು ನಟ ದ್ರುವ ಸರ್ಜಾ ಅವರಿಗೆ ನಾಯಕಿ ಆಗಿ ಕಾಣಿಸಲಿದ್ದಾರೆ. ಜೊತೆಗೆ ಸುಕೃತಾ ವಾಗ್ಲೆ ಹಾಗೂ ಅನ್ವೇಷಿ ಜೈನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎನ್ನಲಾಗಿದೆ...

Druva sarja : ದ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟನ ಎಂಟ್ರಿ..! ಯಾರು ಗೊತ್ತಾ..?