ನಿಶ್ಚಿತಾರ್ಥದಲ್ಲಿ ಭಾವುಕರಾದ ಸಂಜನಾ ಗಲ್ರಾನಿ ತಂಗಿ..! ವಾವ್ ಎಂಗೇಜ್ಮೆಂಟ್ ವಿಡೀಯೋ ಹೇಗಿದೆ ನೋಡಿ..!

By Infoflick Correspondent

Updated:Tuesday, April 5, 2022, 12:42[IST]

ನಿಶ್ಚಿತಾರ್ಥದಲ್ಲಿ ಭಾವುಕರಾದ ಸಂಜನಾ ಗಲ್ರಾನಿ ತಂಗಿ..! ವಾವ್ ಎಂಗೇಜ್ಮೆಂಟ್ ವಿಡೀಯೋ ಹೇಗಿದೆ ನೋಡಿ..!

ಕನ್ನಡ ಚಿತ್ರರಂಗದ ಖ್ಯಾತ ನಟಿ ಸಂಜನಾ ಗಲ್ರಾನಿ ಅವರು ಅವರದೇ ಆದ ಅಭಿನಯದ ಮೂಲಕ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಎಲ್ಲಾ ಸಿನಿ ಕ್ಷೇತ್ರಗಳಲ್ಲಿಯೂ ಹೆಚ್ಚು ಬೇಡಿಕೆಯ ನಟಿಯಾಗಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಸಕತ್ ಅಭಿನಯದ ಮೂಲಕವೇ ಸೈ ಎನಿಸಿಕೊಂಡಿದ್ದಾರೆ. ಹೌದು ಸಂಜನಾ ಗಲ್ರಾನಿ ಅವರ ಸಹೋದರಿ ನಿಕ್ಕಿ ಗಲ್ರಾನಿ ಇತ್ತೀಚಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ತೆಲುಗು ಖ್ಯಾತ ಸಹ ನಟ ಆಗಿ ಒಳ್ಳೆಯ ಕಲಾವಿದ ಎಂದೆನಿಸಿಕೊಂಡ ಆದಿ ಪಿನಿಶೆಟ್ಟಿ ನಟಿ ನಿಕ್ಕಿ ಅವರನ್ನ ಕೈ ಹಿಡಿಯಲಿದ್ದಾರೆ.

ಸಂಜನ ಗಲ್ರಾನಿ ಅವರ ಸಹೋದರಿಯಾದ ನಿಕ್ಕಿ ಗಲ್ರಾನಿ ಅವರು ತೆಲುಗಿನಲ್ಲಿ ಹೆಚ್ಚು ಖ್ಯಾತಿ ಹೊಂದಿದ್ದಾರೆ. ಹಾಗೆಯೇ ಕೆಲವು ವರ್ಷಗಳ ಹಿಂದೆ ನಟಿ ನಿಕ್ಕಿ ಹಾಗೂ ನಟ ಆದಿ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿ ತಿಳಿದುಬಂದಿತ್ತು. ಈಗ ಈ ವಿಷಯ ನಿಜ ಆಗಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಆದಿ ಮತ್ತು ನಿಕ್ಕಿ ಅವರ ಮದುವೆ ನಿಶ್ಚಯ ನಿಶ್ಚಿತಾರ್ಥ ಕಾರ್ಯಕ್ರಮ ಭರ್ಜರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ತೆಲುಗು ಖ್ಯಾತ ನಟ ನ್ಯಾಚುರಲ್ ಸ್ಟಾರ್ ನಾನಿ ಅವರು ಸಹ ಆಗಮಿಸಿದ್ದರು. ಹಾಗೇ  ನವ ಜೋಡಿಗೆ ಶುಭಕೋರಿ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಹೌದು ಈ ಕಾರ್ಯಕ್ರಮದ ನಡುವೆ ಸಂಜನಾ ಗಲ್ರಾನಿ ತಂಗಿ ನಿಕ್ಕಿ ಗಲ್ರಾನಿ ಭಾವುಕರಾಗಿದ್ದಾರೆ. 

ನಟ ಆದಿ ಅವರನ್ನು ಇಷ್ಟಪಟ್ಟು ಮದುವೆಯಾಗುತ್ತಿದ್ದಾರೆ ನಿಕ್ಕಿ ಗಲ್ರಾನಿ. ಇವರಿಬ್ಬರ ಮದುವೆ ವಿಷಯ ತಿಳಿದು ಹಾಗೆ ಈ ನಿಶ್ಚಿತಾರ್ಥ ಕಾರ್ಯಕ್ರಮ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ಜೋಡಿಗೆ ಶುಭ ಕೋರುತ್ತಿದ್ದಾರೆ. ಅಸಲಿಗೆ ಇವರಿಬ್ಬರ ಎಂಗೇಜ್ಮೆಂಟ್ ಕಾರ್ಯಕ್ರಮವು ಹೇಗೆ ನಡೆಯಿತು ಗೊತ್ತಾ.? ಯಾವ ರೀತಿ ಭಾವುಕ ಕ್ಷಣಗಳು ಅಲ್ಲಿ ಕಾಣಿಸಿದವು ಗೊತ್ತಾ..? ಈ ಲೇಖನದ ಕೊನೆಯಲ್ಲಿರುವ ಒಂದು ವಿಡಿಯೋವನ್ನು ನೋಡಿ.. ಹಾಗೆ ಹೊಸ ಜೋಡಿಗೆ ಒಳ್ಳೆಯದಾಗಲೆಂದು ನೀವೂ ಸಹ ಕಮೆಂಟ್ ಮಾಡಿ ತಿಳಿಸಿ. ( video credit : kannada lights )