ಗಲ್ರಾನಿ ಕುಟುಂಬದಲ್ಲಿ ಡಬಲ್ ಧಮಾಕ: ನಿಕ್ಕಿ ಗಲ್ರಾನಿ ಮದುವೆಯ ಸಂಭ್ರಮ ಹೇಗಿದೆ ನೋಡಿ..

By Infoflick Correspondent

Updated:Friday, May 20, 2022, 07:16[IST]

ಗಲ್ರಾನಿ ಕುಟುಂಬದಲ್ಲಿ ಡಬಲ್ ಧಮಾಕ: ನಿಕ್ಕಿ ಗಲ್ರಾನಿ ಮದುವೆಯ ಸಂಭ್ರಮ ಹೇಗಿದೆ ನೋಡಿ..

ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಅವರ ಮನೆಯ ಎರಡೆರಡು ಸಂಭ್ರಮ ಮನೆ ಮಾಡಿದೆ. ಒಂದು ಸಂಜನಾ ಅವರು ತಾಯಿಯಾಗಿದ್ದು, ಮತ್ತೊಂದು ಸಹೋದರಿ ನಿಕ್ಕಿ ಗಲ್ರಾನಿ ಹಾಗೂ ಆದಿ ಪಿನಿಸೆಟ್ಟಿ ಅವರ ಜೊತೆಗೆ ಹಸೆಮಣೆ ಏರಿದ್ದಾರೆ. ನಿಕ್ಕಿ ಮತ್ತು ಆದಿ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ಈ ಜೋಡಿ ಇಂಗೇಜ್ಮೆಂಟ್ ಮಾಡಿಕೊಂಡಿತ್ತು. ಇದೀಗ ಈ ಜೋಡಿ ಸದ್ದಿಲ್ಲದೇ ಹಸೆಮಣೆ ಏರಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  

ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಿಕ್ಕಿ ಗಲ್ರಾನಿ ಬಹುಭಾಷಾ ನಟಿಯಾಗಿ ಮಿಂಚಿದ್ದಾರೆ. ಇದೀಗ ಬಹುಕಾಲದ ಗೆಳೆಯನಾದ ಆದಿ ಪಿನಿಸೆಟ್ಟಿ ಅವರನ್ನು ವರಿಸಿದ್ದಾರೆ. ಮದುವೆಯಲ್ಲಿ ಗುರು ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿದೆ. ಇವರ ಮದುವೆಗೆ ಸಂದೀಪ್ ಕೃಷ್ಣನ್, ನಾನಿ ಸೇರಿದಂತೆ ಟಾಲಿವುಡ್ ಹಾಗೂ ತಮಿಳು ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ಸಾಕ್ಷಿಯಾಗಿದ್ದರು. ಈ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಾರಾ ಜೋಡಿಗೆ ಶುಭಾಶಯಗಳು ಹರಿದು ಬರುತ್ತಿದೆ.

ಇನ್ನು ಈ ಜೋಡಿಯ ಅರಿಶಿಣ ಶಾಸ್ತ್ರ ಮೇ 18ರಂದು ನೆರವೇರಿತ್ತು. ಇನ್ನು ಮುಹೂರ್ತಕ್ಕೆ ಇಬ್ಬರೂ ಮದುವೆಯಲ್ಲಿ ಬಂಗಾರದ ಬಣ್ಣದ ಸೀರೆಯನ್ನು ನಿಕ್ಕಿ ಧರಿಸಿದ್ದಾರೆ. ಬಂಗಾರದ ಬಣ್ಣದ ಶರ್ಟ್ ಹಾಗೂ ಪಂಚೆಯಲ್ಲಿ ಆದಿ ಮಿಂಚಿದ್ದಾರೆ. ಈ ಜೋಡಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಯಾಗವರಾಯಿನುಮ್ ನಾ ಕಾಕ್ಕಾ ಎಂಬ ಸಿನಿಮಾದಲ್ಲಿ ಆದಿ ಮತ್ತು ನಿಕ್ಕಿ ಇಬ್ಬರೂ ನಟಿಸಿದ್ದರು. ಬಳಿಕ ಮರಗಧ ನಾನಯಮ್ ಹಾಗೂ ಮಲುಪು ಎಂಬ ಚಿತ್ರದಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದರು.